Shivraj Kumar : ಅಕುಲ್ ಅಡ್ಡದಲ್ಲಿ ಶಿವಣ್ಣನ ಲುಂಗಿ ಡಾನ್ಸ್ ಬಾರಿ ವೈರಲ್..! ಇಲ್ಲಿದೆ ನೋಡಿ ಶಿವಪ್ಪನ ವಿಡಿಯೋ
Updated:Wednesday, July 6, 2022, 18:17[IST]

ಬೈರಾಗಿ 2022 ರ ಕನ್ನಡ ಚಲನಚಿತ್ರವಾಗಿದ್ದು, ಎಸ್ಡಿ ವಿಜಯ್ ಮಿಲ್ಟನ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೈರಾಗಿ ಕನ್ನಡ ಚಲನಚಿತ್ರವು ಡಾ ಶಿವರಾಜಕುಮಾರ್, ಧನಂಜಯ, ಪೃಥ್ವಿ ಅಂಬಾರ್, ಅಂಜಲಿ, ಯಶ ಶಿವಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಜೆ ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಸ್ ಡಿ ವಿಜಯ್ ಮಿಲ್ಟನ್ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ..
ಬೈರಾಗಿ ಈಗಾಗಲೇ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಅಭಿಮಾನಿಗಳು ಸಿನಿಮಾವನ್ನು ಚಲನಚಿತ್ರ ಮಂದಿರಗಳಲ್ಲಿ ಕಣ್ತುಂಬಿಕೊಂಡು ಬಾರಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಶಿವಣ್ಣ ಅವರು ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಶೂಟಿಂಗ್ ನಡುವೆ ಸಮಯ ಬಿಡುವ ಮಾಡಿಕೊಂಡು ಕಿರುತೆರೆ ಖ್ಯಾತ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿಯೂ ಕೂಡ ಭಾಗಿಯಾಗಿದ್ದಾರೆ.. ಶಿವಣ್ಣ ಅವರು ಅಭಿಮಾನಿಗಳ ಜೊತೆ ಯಾವ ರೀತಿ ಇರುತ್ತಾರೆ, ಹೇಗೆ ಪ್ರೀತಿ ಹಂಚುತ್ತಾರೆ ಯಾವ ರೀತಿ ಸ್ನೇಹದಿಂದ ನಡೆದುಕೊಳ್ಳುತ್ತಾರೆ ಎಂಬುದು ನಿಮಗೂ ಗೊತ್ತು. ಶಿವಣ್ಣ ಅವರಿಗೆ ಶಿವಣ್ಣನೆ ಸಾಟಿ.
ಅಭಿಮಾನಿಗಳು ಆಗಾಗ ಶಿವರಾಜ್ ಕುಮಾರ್ ಅವರ ಮನೆಗೆ ಬರುವುದು ಮಾಮೂಲಿ, ಅವರ ಮನೆಗೆ ಬಂದು ಅವರ ಜೊತೆ ಹೆಜ್ಜೆ ಹಾಕಿ ಹೋದರೆ ಅವರಿಗೆ ಹೆಚ್ಚು ಖುಷಿಯಾಗುತ್ತದೆ. ಹಾಗೆ ಶಿವಣ್ಣನ ಜೊತೆ ನಾವು ಕೂಡ ಸ್ವಲ್ಪ ಹೊತ್ತು ಸಮಯ ಕಳೆದೆವು ಎಂದು ಖುಷಿಯಿಂದಲೇ ಪೋಸ್ಟ್ ಹಂಚಿಕೊಳ್ಳುತ್ತಾರೆ. ಇದೀಗ ಅಕುಲ್ ಅಡ್ಡದಲ್ಲಿ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದು ಭೈರಾಗಿ ಸಿನಿಮಾದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶಿವಪ್ಪ ಎನ್ನುವ ಹಾಡಿಗೆ ಶಿವಣ್ಣನ ಜೊತೆ ಅಕುಲ್ ಅಡ್ಡದಲ್ಲಿ ಅಕುಲ್ ಅವರು ಕೂಡ ಸಕ್ಕತ್ ನೃತ್ಯ ಮಾಡಿ ವೈರಲ್ ಆಗಿದ್ದಾರೆ ಎನ್ನಬಹುದು. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ. ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು.