Shivraj Kumar : ಊರ್ಮಿಳಾ ಹಾಡಿಗೆ ಶಿವಣ್ಣ ಹಾಕಿದ ಸ್ಟೆಪ್ಎನರ್ಜಿ ಹೇಗಿದೆ ನೋಡಿ ; ರಂಗೇರಿದ ಡಿಕೆಡಿ ವೇದಿಕೆ ನೋಡಿ..!
Updated:Tuesday, May 10, 2022, 21:54[IST]

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇತ್ತೀಚಿಗೆ ಅವರ ತಮ್ಮರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಕಳೆದುಕೊಂಡಿದ್ದಾರೆ. ಅವರ ತಮ್ಮನ ಅಗಲಿಕೆ ನೋವಿನಿಂದ ಕೊಂಚ ಹೊರಬರುತ್ತಿದ್ದಾರೆ ಶಿವಣ್ಣ. ಆ ನೋವು ಎಂದಿಗೂ ಮರೆಯಲಾಗದಂತಹದ್ದೆ ನೋವು ಎನ್ನಬಹುದು. ಆ ನೋವು ನಿಜ ಹಾಗೆ ಇರುತ್ತದೆ. ನೋವಿನಲ್ಲೇ ನಗುತ್ತಾ ಶಿವಣ್ಣ ಕೆಲ ಕಾರ್ಯಕ್ರಮಗಳಿಗೆ ಹೋಗುತ್ತಾ ಅಪ್ಪು ನೋವಿದ್ದರೂ ಜೀವನ ಸಾಗಿಸಬೇಕು ಎಂಬುದನ್ನ ಅರಿತು ಶಿವಣ್ಣ ಜೀವನ ನಡೆಸುತ್ತಿದ್ದಾರೆ. ಹೌದು ಅಕಾಲಿಕ ಅಪ್ಪು ಅವರ ಮರಣ ಅವರಿಗೆ ಮಾತ್ರವಲ್ಲದೆ, ಇಂದಿಗೂ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಂದಿಗೂ ಕೂಡ ಅಪ್ಪು ಪ್ರತಿದಿನ ಎಲ್ಲರಿಗೂ ನೆನಪಿಗೆ ಬರುತ್ತಾರೆ. ಅಪ್ಪು ಅವರಂತಹ ಮನಸ್ಥಿತಿ ಯಾರಿಗೂ ಕೂಡ ಇರುವುದಿಲ್ಲ ಎಂದೆನಿಸುತ್ತದೆ. ಅವರ ಸಹಾಯ ಮಾಡುವ ಮನಸ್ಥಿತಿ ದೊಡ್ಡದು. ಅವರಲ್ಲಿ ಇದ್ದ ಸಹಾಯ ಮಾಡಬೇಕು ಎನ್ನುವ ಮನಸ್ಸು ನಿಜಕ್ಕೂ ದೇವರ ಮನಸು ಎನ್ನಬಹುದು. ಹಾಗೆ ಇದೀಗ ಅವರು ದೇವರೇ ಆಗಿದ್ದಾರೆ. ವೃದ್ಧಾಶ್ರಮ,, ಅನಾಥಾಶ್ರಮ, ಮಕ್ಕಳ ವಿದ್ಯಾಭ್ಯಾಸ, ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಲ್ಲರನ್ನೂ ಅಪ್ಪು ಅವರೇ ನೋಡಿಕೊಳ್ಳುತ್ತಿದ್ದರು. ಇದೀಗ ಅವರೆಲ್ಲರು ತಬ್ಬಲಿಯಂತೆ ಆಗಿದ್ದು ಪುನೀತ್ ನೆನಪಿನಲ್ಲಿ ಜೀವನ ನಡೆಸುತ್ತಿದ್ದಾರೆ.
ಇತ್ತ ಶಿವಣ್ಣ ಅವರಿಗೆ ನೋವನ್ನು ಕಡಿಮೆ ಮಾಡುವುದಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಅವರನ್ನು ಜಡ್ಜ್ ಆಗಿ ಕರೆತಂದಿದೆ ಝೀ ಕನ್ನಡ ಚಾನೆಲ್.
ಅಭಿಮಾನಿಗಳು ಸಹ ಶಿವಣ್ಣನ ಮುಖದಲ್ಲಿ ಮತ್ತೆ ನಗು ತರಿಸಿ.ಹೆಚ್ಚು ಅಳಿಸಬೇಡಿ ಎಂದೆಲ್ಲ ಹೇಳುತ್ತಿದ್ದಾರೆ. ಹೌದು ಈ ಡಿಕೆಡಿ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದ್ದು, ಮಕ್ಕಳ ಡಾನ್ಸ್ ಎಲ್ಲೆಡೆ ವೈರಲ್ ಆಗುತ್ತಿವೆ. ಡಿಕೆಡಿ ಕಾರ್ಯಕ್ರಮ ವೇದಿಕೆಯಲ್ಲಿ ಈಗ ಶಿವಣ್ಣ ಅವರು ಉರುಮಿಳ ಉರುಮಿಳ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ಅವರ ಊರ್ಮಿಳಾ ಊರ್ಮಿಳಾ ಹಾಡಿಗೆ ನೃತ್ಯ ಮಾಡಿದ ಪರಿಗೆ ನೆಟ್ಟಿಗರು, ಹಾಗೂ ಅಭಿಮಾನಿಗಳು ಫಿದಾ ಆಗಿದ್ದು, ಈಗಲೂ ಶಿವಣ್ಣನ ಆ ಏನರ್ಜಿಗೆ ಸೆಲ್ಯೂಟ್ ಹೊಡೆಯಬೇಕು. ನೀವು ಕೂಡ ಒಮ್ಮೆ ಶಿವಣ್ಣ ಮಾಡಿದ ಈ ಡ್ಯಾನ್ಸ್ ವಿಡಿಯೋ ನೋಡಿ. ಊರ್ಮಿಳಾ ಹಾಡಿಗೆ ಶಿವಣ್ಣ ಹೇಗೆ ಹೆಜ್ಜೆ ಹಾಕಿದ್ದಾರೆಂದು ಕಮೆಂಟ್ ಮಾಡಿ. ಹಾಗೆ ವಿಡಿಯೋ ಇಷ್ಟವಾದರೆ ತಪ್ಪದೇ ಶೇರ್ ಕೂಡ ಮಾಡಿ ದನ್ಯವಾದಗಳು...