Shivraj kumar : ಶಿವಣ್ಣ ಮತ್ತು ಪ್ರಭುದೇವ ಜೊತೆಯಾಗಿ ನಟಿಸಲಿರುವ ಸಿನಿಮಾದ ಹೆಸರೇನು ಗೊತ್ತೆ ?

By Infoflick Correspondent

Updated:Friday, May 27, 2022, 08:38[IST]

Shivraj kumar : ಶಿವಣ್ಣ ಮತ್ತು ಪ್ರಭುದೇವ ಜೊತೆಯಾಗಿ ನಟಿಸಲಿರುವ ಸಿನಿಮಾದ ಹೆಸರೇನು ಗೊತ್ತೆ ?

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್  ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಜೊಡಿಯಾಗಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಲ್ಲಮೂಲಗಳಿಂದ ದೊರೆತಿದೆ. 

ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ಈ ಡಾನ್ಸಿಂಗ್​ ಸ್ಟಾರ್​ಗಳಿಗೆ ಯೋಗರಾಜ್​ ಭಟ್ ನಿರ್ದೇಶನವಿದೆ. ರಾಕ್​ಲೈನ್ ವೆಂಕಟೇಶ್  ಚಿತ್ರಕ್ಕೆ ಹಣ ಹೂಡಲಿದ್ದಾರೆ. ಸಿನಿಮಾ ದಿಗ್ಗಜರು ಈ ಚಿತ್ರದಲ್ಲಿದ್ದು   ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. 

ನಿರ್ದೇಶಕ ಯೋಗರಾಜ್ ಭಟ್  ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಅಣ್ಣಾವ್ರ ಆಶೀರ್ವಾದದ ಜತೆಗೆ ದೊಡ್ಡ ಚಿತ್ರದ ತಯಾರಿ ಶುರು, ಅತೀ ಶೀಘ್ರದಲ್ಲೇ ಚಿತ್ರೀಕರಣ’ ಎಂದು ಬರೆದುಕೊಂಡಿದ್ದಾರೆ.  

ಶಿವರಾಜಕುಮಾರ್-ಪ್ರಭುದೇವ ಚಿತ್ರಕ್ಕೆ ತಾತ್ಕಾಲಿಕವಾಗಿ ಕುಲದಲ್ಲಿ ಕೀಳ್ಯಾವುದೋ ಎಂದು ಹೆಸರಿಸಲಾಗಿದೆ. ಇದು 1960 ಮತ್ತು 1970 ರ ಅವಧಿಯ ನಾಟಕವಾಗಿದೆ.  1965ರಲ್ಲಿ ತೆರೆಕಂಡಿದ್ದ ಡಾ. ರಾಜ್‌ಕುಮಾರ್ ಅಭಿನಯದ 'ಸತ್ಯಹರಿಶ್ಚಂದ್ರ' ಚಿತ್ರದ ಜನಪ್ರಿಯ 'ಕುಲದಲ್ಲಿ ಕೀಳ್ಯಾವುದೋ..' ಹಾಡಿನಿಂದ ಸ್ಪೂರ್ತಿಗೊಂಡು ಸದ್ಯ ಅದೇ ಶೀರ್ಷಿಕೆಯನ್ನು ಇಡಲಾಗಿದೆ.    

ನನ್ನ ವೃತ್ತಿಜೀವನದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಇದು ಕೂಡ ಒಂದಾಗಲಿದೆ' ಎಂದು ಯೋಗರಾಜ್ ಭಟ್ ಹೇಳಿಕೊಂಡಿದ್ದಾರೆ. ಯೋಗರಾಜ್ ಭಟ್ ಉತ್ತಮ ಕಥೆಯೊಂದನ್ನು ಮಾಡಿಕೊಂಡಿದ್ದಾರೆ. ನನ್ನ ಮತ್ತು ಪ್ರಭುದೇವ ಪಾತ್ರಗಳನ್ನು ಸಮಾನವಾಗಿ ತೋರಿಸಲಿದ್ದಾರೆ. ಪ್ರೀತಿಯ ಅಂಶವು ಇಡೀ ಚಿತ್ರಕ್ಕೆ ಸಾಕಷ್ಟು ತೂಕವನ್ನು ನೀಡುತ್ತದೆ. ನಾನು ಸ್ಕ್ರಿಪ್ಟ್ ಓದಿದ್ದೇನೆ. ಪ್ರಭುದೇವ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ' ಎಂದು  ಶಿವಣ್ಣ ಹೇಳಿಕೊಂಡಿದ್ದಾರೆ. 

ಯೋಗರಾಜ್ ಭಟ್ ‘ಗಾಳಿಪಟ 2’ ಸಿನಿಮಾ ಮುಗಿಸಿದ್ದು, ಅದು ತೆರೆಕಾಣಬೇಕಿದೆ. ‘ಗರಡಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಶಿವರಾಜ್​ಕುಮಾರ್ ಕೂಡ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವುಗಳ ನಂತರ ಶಿವಣ್ಣ- ಪ್ರಭುದೇವ ಕಾಂಬಿನೇಷನ್​ನ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.