Shivraj Kumar : ಶಿವಣ್ಣ ಬೇರೆ ಮನೆ ಮಾಡಿದ್ದಕ್ಕೆ ಕಾರಣ ಇಲ್ಲಿದೆ ನೋಡಿ..! ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ ಶಿವಣ್ಣ

By Infoflick Correspondent

Updated:Sunday, July 17, 2022, 10:14[IST]

Shivraj Kumar : ಶಿವಣ್ಣ ಬೇರೆ ಮನೆ ಮಾಡಿದ್ದಕ್ಕೆ ಕಾರಣ ಇಲ್ಲಿದೆ ನೋಡಿ..! ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೀಗ ಕನ್ನಡಿಗರ ಮನೆ ಮಾತಾಗಿ ಹೊರಹೊಮ್ಮಿದ್ದಾರೆ. ಸಾಕಷ್ಟು ಸರಳತೆಯ ಮನುಷ್ಯ ಆಗಿ ಹೆಚ್ಚು ಗುರುತಿಸಿಕೊಂಡಿರುವ ಶಿವಣ್ಣ ಅವರ ನಟನೆಗೆ ಅವರೇ ಸಾಟಿ. ಎನರ್ಜಿಗೆ ಬೂಸ್ಟ್ ಕುಡಿಸುವ ಹಾಗೆ ಕಾಣುವ ಶಿವಣ್ಣ ಅವರು ಇತ್ತೀಚಿಗಷ್ಟೇ 60ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ಹೌದು ಶಿವರಾಜ್ ಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಅವರ ಹಿರಿಯ ಮಗ. ರಾಜಕುಮಾರ್ ಅವರಿಗೆ ಒಟ್ಟು ಐದು ಜನ ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಅದು ನಿಮಗೆ ಗೊತ್ತು. ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಹಾಗೂ ಶಿವರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ದೊಡ್ಡದಾದ ಸಾಧನೆ ಮಾಡಿದ್ದಾರೆ. ಹಾಗೆ ಇಂದಿಗೂ ಅಪ್ಪು ಅಗಲಿಕೆ ನೋವು ಹೆಚ್ಚಾಗಿ ಕಾಡುತ್ತಿದೆ ಎನ್ನಬಹುದು.  

ಅಂತಹದರಲ್ಲಿ ಶಿವಣ್ಣ ಅವರು ಈಗ ಇಷ್ಟು ದಿನ ಕೇಳುತ್ತಿದ್ದ  ಒಂದು ವಿಚಾರವಾಗಿ, ಅವರ ಕೌಟುಂಬಿಕ ವಿಚಾರವಾಗಿ ಒಂದು ಸತ್ಯವನ್ನು ಹೇಳಿದ್ದಾರೆ. ಹಾಗೆ ನಾನು ಇದನ್ನು ಈಗ ಹೇಳಲೇಬೇಕು 60 ವರ್ಷವಾದ ಮೇಲಾದರೂ ಕೆಲವರಿಗೆ ಇದು ತಿಳಿಯಲೇಬೇಕು ಎಂದು ಹೇಳಿದ್ದಾರೆ. ಶಿವಣ್ಣ ಅವರು ಸಪರೇಟ್ ಮನೆಯಲ್ಲಿ ಇದ್ದಾರೆ. ರಾಜಕುಮಾರ ಅವರ ಮನೆಯನ್ನು ಎರಡು ಮನೆ ಮಾಡಿ ಬೇರೆ ಬೇರೆ ಆಗಿದ್ದೇಕೆ ಎನ್ನುವ ಮಾತುಗಳು ಆಗಾಗ ಕೆಲ ನ್ಯೂಸ್ ಚಾನೆಲ್ಗಳಲ್ಲಿ ಕೇಳಿ ಬರುತ್ತಲೇ ಇವೆ.ಅಂತವರಿಗೆ ಶಿವಣ್ಣ ಬುದ್ಧಿ ಹೇಳಿದ್ದು ಸಂಪಾದನೆ ಮಾಡುವುದು ಸರಿ, ಅದು ಸರಿಯಾದ ರೀತಿಯೇ ಆಗಿರಬೇಕು. ನ್ಯಾಯ ಮಾತಾಡು, ನ್ಯಾಯವಾಗಿ ಇರಬೇಕು. ಏನು ಮಾಡುತ್ತೇವೆ ಹೇಗೆ ಮಾಡುತ್ತೇವೆ ಎನ್ನುವ ಅರಿವಿರಬೇಕು ಯಾವಾಗಲೂ ಪಾಸಿಟಿವ್ ಆಗಿ ಇರಿ ಎಂದು ಜನರಿಗೆ ಹೇಳುವ ಮುಂಚೆ ಅವರು ಸರಿಯಾಗಿರಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರ ಮನೆಯ ದೀಪ ಆರಿಸಿಯೇ ಸಂಪಾದನೆಯನ್ನು ಮಾಡಿದರೆ ಅದು ಸಂಪಾದನೆ ಅಲ್ಲ. ನಾನು ಎಲ್ಲರೊಟ್ಟಿಗೆ ಚೆನ್ನಾಗಿರುತ್ತೇನೆ. ನನ್ನ ಹೃದಯದಲ್ಲಿರುವ ಪ್ರೀತಿಯನ್ನು ಎಲ್ಲರಿಗೂ ಹಂಚಲು ಇಷ್ಟಪಡುತ್ತೇನೆ, ಹೀಗಿರುವಾಗ ಹೇಗೆ ಡಾಕ್ಟರ್ ರಾಜಕುಮಾರ್ ಅವರ ಮನೆಯನ್ನು ಒಡೆದರು ಎಂದು ಇವರು ಹೇಳುತ್ತಾರೆ. ನಿಮ್ಮ ಚಿತ್ರಕ್ಕೂ ಬರುತ್ತೇನೆ ಎಂದು ಧನಂಜಯ್ ಗೆ ಹೇಳುತ್ತಾ, ದುನಿಯಾ ವಿಜಯ್ ಚಿತ್ರಕ್ಕೂ ಬರುತ್ತೇನೆ, ಸುದೀಪ್, ದರ್ಶನ್, ರಕ್ಷಿತ್ ಶೆಟ್ಟಿ ಎಲ್ಲರ ಸಿನಿಮಗಳಿಗೂ ಬಂದು ಶುಭ ಕೋರುತ್ತೇನೆ. ನನ್ನ ಕುಟುಂಬ ಎಲ್ಲರನ್ನೂ ಪ್ರೀತಿಸುತ್ತೇನೆ ಎಲ್ಲರೊಟ್ಟಿಗೂ ಚೆನ್ನಾಗಿ ಇದ್ದೇನೆ, ನಾನು ಯಾಕೆ ಆ ಮನೆಯನ್ನು ಒಡೆಯಲಿ. ಅಪ್ಪಾಜಿ ಅವರು ಹೀಗೆ ಹೇಳಿದರು, ನೀವು ಚೆನ್ನಾಗಿರುವ ವೇಳೆಯೇ ಚೆನ್ನಾಗಿರಬೇಕು ಕಂದ ಎಂದು ಬೇರೆ ಮನೆಯನ್ನ ಅವರೇ ಮಾಡಿದರು.

ಕುಟುಂಬ ಎಂದ ಮೇಲೆ ಸ್ಪೇಸ್ ಇರಬೇಕು ಎಂದು ನಾನೇ ಹಿರಿಯ ಮಗ ಆಗಿದ್ದರಿಂದ ಮಾತನಾಡಲು ಹೇಳಿದ್ದರು. ಆಗಲೂ ಇದೇನ್ ಅಪ್ಪಾಜಿ ಇದೆಲ್ಲಾ ನನ್ನ ಕೈಯಲ್ಲಿ ಆಗಲ್ಲ ಅಂದೆ. ಆಗ ಅವರು ಎಲ್ಲೇ ಇರಿ, ಹೇಗೆ ಇರಿ ಎಲ್ಲರೂ ಚೆನ್ನಾಗಿರಿ ಎಂದು ಹೇಳಿ ಹೋಗಿದ್ದಾರೆ. ಅದೇ ರೀತಿ ಬೇರೆ ಮನೆಯಲ್ಲಿ ಇದ್ದರೂ ಸಹ ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ ಎಂದು ಅಂತಹ ಮಾತುಗಳ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ಈ ವಿಡಿಯೋ. ಹಾಗೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..

(Video. credit : kannada pichhar )