ನನ್ನ ಜೀವ ಇರೋವರೆಗೂ ನಾನು ಶಕ್ತಿಧಾಮ ಬಿಡಲ್ಲ ಎಂದು ಭಾವುಕರಾದ ಶಿವಣ್ಣ..! ವಿಡಿಯೋ..!

By Infoflick Correspondent

Updated:Sunday, April 10, 2022, 12:19[IST]

ನನ್ನ ಜೀವ ಇರೋವರೆಗೂ ನಾನು ಶಕ್ತಿಧಾಮ ಬಿಡಲ್ಲ ಎಂದು ಭಾವುಕರಾದ ಶಿವಣ್ಣ..! ವಿಡಿಯೋ..!

  

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ಈಗಲೂ ಕೂಡ ಹೆಚ್ಚು ನೋವು ತರುತ್ತದೆ. ಎಲ್ಲರಲ್ಲಿಯೂ ಅಪ್ಪು ಅವರು ಸದಾ ನೆನಪಿನಲ್ಲಿ ಉಳಿದಿದ್ದಾರೆ. ಹೌದು ನಟ ಶಿವಣ್ಣ ಅವರು ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದ್ದು ಶಕ್ತಿಧಾಮದ ಪುನರ್ವಸತಿ ಕೇಂದ್ರದಲ್ಲಿ ನೂತನ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆದ ಬಳಿಕ ವೇಳೆ ಮಾಧ್ಯಮದ ಜೊತೆ ಮಾತನಾಡಿದರು. ಅಪ್ಪು ಬಗ್ಗೆ ಹಾಗೂ ಈ ಕಾರ್ಯದ ಬಗ್ಗೆ ಮತ್ತು ಶಕ್ತಿಧಾಮದ ಮಕ್ಕಳ ಬಗ್ಗೆ ಮಾತನಾಡಿದರು. ಜೊತೆಗೆ ಇನ್ಫೋಸಿಸ್ ಸುಧಾಮೂರ್ತಿ ಅವರ ಬಗ್ಗೆಯೂ ಕೂಡ ಶಿವಣ್ಣ ಮಾತನಾಡಿದರು. ನನಗೆ ಇದೀಗ ತುಂಬಾನೇ ಖುಷಿಯಾಗುತ್ತಿದೆ. ನನ್ನ ಉಸಿರು ಇರುವವರೆಗೂ ನಾನು ಈ ಶಕ್ತಿಧಾಮದ ಮಕ್ಕಳನ್ನ ಬಿಡುವುದಿಲ್ಲ. ಶಕ್ತಿದಾಮವನ್ನು ಸಹ ಬಿಡುವುದಿಲ್ಲ.

ಅಪ್ಪಾಜಿಯವರು ಕಟ್ಟಿರುವ ಈ ಶಕ್ತಿಧಾಮಕ್ಕೆ ನಾನು ಯುಕ್ತಿಯಾಗಿ ನಿಲ್ಲುತ್ತೇನೆ. ಶಕ್ತಿಧಾಮಕೆ ಕಟ್ಟಡವ ನಿರ್ಮಿಸಿ ಕೊಟ್ಟ ಇನ್ಫೋಸಿಸ್ ಒಡತಿ ಸುಧಾಮೂರ್ತಿ ಅವರಿಗೆ ನಾನು ತುಂಬಾ ಧನ್ಯವಾದಗಳನ್ನು ತಿಳಿಸುತ್ತೇನೆ, ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ನಿಜಕ್ಕೂ ನನ್ನ ಜೀವನದಲ್ಲಿ ಇಂತಹ ಸಿಎಂ ಅವ್ರನ್ನ ನಾನು ನೋಡಿಲ್ಲ, ಹಾಗೆಂದ ಮಾತ್ರಕ್ಕೆ ಇನ್ನುಳಿದ ಎಲ್ಲಾ ಸಿಎಂಗಳು ಕೆಟ್ಟವರು ಅಂತ ನಾನು ಹೇಳುವುದಿಲ್ಲ. ಆದ್ರೆ ಬಸವರಾಜ್ ಅವರು ತುಂಬಾ ಹೃದಯದಿಂದ ಹತ್ತಿರ ಆಗಿದ್ದಾರೆ. ಅಪ್ಪು ಅಂತ್ಯಕ್ರಿಯೆಯನ್ನು ಮುಗಿಸಿಕೊಟ್ಟಿದಾರೆ. ಭಾವನೆಗಳನ್ನು ಡ್ರಾಮ ಮುಖಾಂತರ ಮಾಡಲು ನಿಜಕ್ಕೂ ಯಾರಿಂದಲೂ ಸಾಧ್ಯವಾಗುವುದಿಲ್ಲ, ನಿಜಕ್ಕೂ ಒಬ್ಬ ಕಾಮನ್ ಮ್ಯಾನ್ ರೀತಿ ಬಸವರಾಜ್ ಬೊಮ್ಮಾಯಿ ಅವರು ಇದ್ದಾರೆ. ನಮ್ಮ ಕುಟುಂಬದ ಮೇಲೆ ಹೆಚ್ಚು ಗೌರವ ಇಟ್ಟಿದ್ದಾರೆ ಎಂದು ಶಿವಣ್ಣ ಮಾಧ್ಯಮದ ಎದುರು ಮಾತನಾಡಿದ್ದಾರೆ.

ಹಾಗೆ ಅಪ್ಪು ಶಕ್ತಿಧಾಮದ ಮಕ್ಕಳು ನನ್ನನ್ನು ಕೆಲವರು ಅಪ್ಪ ಎನ್ನುತ್ತಾರೆ, ಇನ್ನು ಕೆಲವರು ಅಣ್ಣ ಎನ್ನುತ್ತಾರೆ, ನನ್ನ ಜೀವ ಇರುವವರೆಗೂ ಈ ಶಕ್ತಿಧಾಮವನ್ನು ಬಿಡುವುದಿಲ್ಲ ಇದಕ್ಕೆ ಯುಕ್ತಿಯಾಗಿ ನಿಲ್ಲುತ್ತೇನೆ. ನನ್ನ ಅಪ್ಪು ನೆನಪಾದಾಗಲೆಲ್ಲಾ ಶಕ್ತಿಧಾಮಕ್ಕೆ ಬರುತ್ತೇನೆ ಎಂದು ಭಾವುಕರಾದರು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..( video credit : news first kannada )