ಸದ್ಯಕ್ಕೆ ಬದುಕಬೇಕು ಅಷ್ಟೇ ಬದುಕ್ತಾ ಇದೀವಿ..! ಶಿವಣ್ಣನ ಈ ವಿಡಿಯೋ ಕಣ್ಣೀರು ತರಿಸುತ್ತೆ..!
Updated:Monday, March 7, 2022, 10:25[IST]

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಿನ್ನೆ ಹೊಸಪೇಟೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಜೇಮ್ಸ್ ಚಿತ್ರತಂಡದವರು ಆಗಮಿಸಿ ಪ್ರತಿಯೊಬ್ಬರು ಕೂಡ ವೇದಿಕೆ ಮೇಲೆ ತುಂಬಾ ಭಾವುಕರಾದರು. ಚಿತ್ರದ ನಿರ್ದೇಶಕ ಚೇತನ್ ಅವರು ಮಾತನಾಡಿದ್ದು ಈ ರೀತಿಯ ಸಿನಿಮಾ ಒಂದನ್ನು ಮಾಡುತ್ತೇವೆ ಅಂದುಕೊಂಡಿರಲಿಲ್ಲ. ಹೀಗೆ ಅಪ್ಪು ಅವರಿಲ್ಲದೆ ಕಾರ್ಯಕ್ರಮ ನಡೆಯುತ್ತದೆ ಎಂದು ನಿಜಕ್ಕೂ ಅಂದುಕೊಂಡಿರಲಿಲ್ಲ. ನಿಜಕ್ಕೂ ಶಿವಣ್ಣ (Shiv Raj Kumar) ಅವರಿಗೆ ತುಂಬಾ ಥ್ಯಾಂಕ್ಸ್, ಕಷ್ಟದಲ್ಲಿಯೇ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ ಎಂದು ಭಾವುಕರಾದರು. ಹಾಗೆ ಸಿನಿಮಾದ ನಿರ್ಮಾಪಕರು ಕೂಡ ಮಾತನಾಡಿದರು.
ಚಿಕ್ಕಣ್ಣ ಕೂಡ ಮಾತನಾಡಿದ್ದು, ಈಗ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನಿಜಕ್ಕೂ ತುಂಬಾ ಕಷ್ಟ ಆಗುತ್ತದೆ. ಈ ರೀತಿಯ ಒಂದು ಕಾರ್ಯಕ್ರಮ ಯಾವ ನಟರಿಗೂ ಮುಂದೆ ಬರಬಾರದು ಎಂದು ಭಾವುಕರಾದರು. ಆರಂಭದಲ್ಲಿಯೇ ಶಿವಣ್ಣ ಜೇಮ್ಸ್ ಚಿತ್ರದ ಬಗ್ಗೆ ಮಾತನಾಡಿ, ಮಾತನಾಡಲು ತುಂಬಾ ಕಷ್ಟ ಆಗುತ್ತದೆ ನಾಲ್ಕು ತಿಂಗಳಿಂದ ಬದುಕುತ್ತಿದ್ದೇವೆ ಬದುಕಬೇಕು ಅಷ್ಟೇ. ಊಟ ಮಾಡುತ್ತಿದ್ದೇವೆ, ಶೂಟಿಂಗ್ ಗೆ ತೆರಳುತ್ತಿದ್ದೇವೆ ನಗುತ್ತಿದ್ದೇವೆ ಎಲ್ಲವೂ ಮಾಡುತ್ತಿದ್ದೇವೆ ಆದರೆ ಒಳಗಿನ ನೋವು ಮಾತ್ರ ಎಂದಿಗೂ ಕಡಿಮೆಯೇ ಆಗುವುದಿಲ್ಲ ಬದುಕಬೇಕು ಬದುಕ ಬೇಕಷ್ಟೇ ಎಂದರು.
ಹಾಗೆ ಅಪ್ಪುಗೆ ಡಬ್ಬಿಂಗ್ ಮಾಡುವ ವಿಚಾರವನ್ನು ತಿಳಿಸಿದ ಶಿವಣ್ಣ ನಿರ್ದೇಶಕ ಚೇತನ್ ಕುಮಾರ್ ಅವರಿಗೆ ಈ ಸಲಹೆ ಮುಂಚೆಯೇ ನೀಡಿದ್ದರಂತೆ. ಅಸಲಿಗೆ ಅದೇನು..? ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಜೆಮ್ಸ್ ಚಿತ್ರ ಇದೆ 17ನೇ ತಾರೀಕು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ..(video credit : cine buzz )