Arjun Janya : ಡಿಕೆಡಿ ವೇದಿಕೆಯಲ್ಲಿ ಜನ್ಮ ದಿನ ಆಚರಿಸಿಕೊಂಡ ಅರ್ಜುನ್ ಜನ್ಯಾನಿಗೆ ಶಿವಣ್ಣ ಹಾಡಿದ್ದು ಕೇಳಿ

By Infoflick Correspondent

Updated:Friday, May 13, 2022, 20:49[IST]

Arjun Janya  : ಡಿಕೆಡಿ ವೇದಿಕೆಯಲ್ಲಿ ಜನ್ಮ ದಿನ ಆಚರಿಸಿಕೊಂಡ ಅರ್ಜುನ್ ಜನ್ಯಾನಿಗೆ ಶಿವಣ್ಣ ಹಾಡಿದ್ದು ಕೇಳಿ

ಅರ್ಜುನ್ ಜನ್ಯ (ಜನನ ಲೋಕೇಶ್ ಕುಮಾರ್) ಒಬ್ಬ ಭಾರತೀಯ ಚಲನಚಿತ್ರ ಸ್ಕೋರ್ ಸೌಂಡ್‌ಟ್ರ್ಯಾಕ್ ಸಂಯೋಜಕ ಮತ್ತು ಗಾಯಕ ಮ್ಯೂಸಿಕ್ ಮಾಂತ್ರಿಕ ಎಂದು ಹೇಳಬಹುದು. ಹೌದು ಅರ್ಜುನ್ ಜನ್ಯ ಅವರು 2006 ರ ಕನ್ನಡ ಚಲನಚಿತ್ರ ಆಟೋಗ್ರಾಫ್ ಪ್ಲೀಸ್ ನಲ್ಲಿ ತಮ್ಮ ಚೊಚ್ಚಲ ಚಿತ್ರಕ್ಕೆ ಸಂಗೀತ ನೀಡಿದ್ದರು. ಅಂದಿನಿಂದ ಅವರು ಬಿರುಗಾಳಿ (2009), ಸಂಚಾರಿ (2010), ಕೆಂಪೇಗೌಡ (2011), ವರದನಾಯಕ (2012), ವಿಕ್ಟರಿ (2013), ವಜ್ರಕಾಯ (2015), ಮುಕುಂದ ಮುರಾರಿ (2016) ಮುಂತಾದ ಯಶಸ್ವಿ ಚಿತ್ರಗಳಿಗೆ ಸಂಗೀತವ ಸಂಯೋಜಿಸಿ ಹೆಚ್ಚು ಯಶಸ್ವಿಯಾಗಿದ್ದಾರೆ ಮತ್ತು ಸಂಗೀತ ನೀಡಿದ್ದಾರೆ.  ಸಂಗೀತ ನಿರ್ದೇಶಕರಾಗಿ ಅವರ 100 ನೇ ಚಿತ್ರ 99 (2019 ಚಿತ್ರ)      

ಅಲೆಮಾರಿ (2012) ಚಿತ್ರಕ್ಕಾಗಿ ಅರ್ಜುನ್ ಜನ್ಯ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅಲೆಮಾರಿ (2012) ಗಾಗಿ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಪಡೆದು ನಂತರ ರೋಮಿಯೋ (2012) ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಸೀಮಾ ಪ್ರಶಸ್ತಿ ಮತ್ತು ಭಜರಂಗಿ (2013) ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೀಗ ಜನ್ಯಾ ಅವರು ಕನ್ನಡ ಕಿರುತೆರೆಯಲ್ಲಿಯೇ ಸಕ್ರಿಯರಾಗಿದ್ದು ಕೆಲವೊಂದಿಷ್ಟು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರು ಈ ಮುಂಚೆಯೇ ಸರಿಗಮಪ ವೇದಿಕೆಯಲ್ಲಿ ಕೂಡ ಸೇವೆ ಸಲ್ಲಿಸಿ ಬಂದಿದ್ದಾರೆ.

ಇದೀಗ ಅರ್ಜುನ್ ಜನ್ಯ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದು, ಇಂದು ಜನ್ಯಾ ಅವರ ಹುಟ್ಟುಹಬ್ಬದ ದಿವಸ ಎನ್ನಲಾಗಿ ತಿಳಿದು ಬಂದಿದೆ. ಹಾಗಾಗಿ ಡಿಕೆಡಿ ವೇದಿಕೆಯಲ್ಲಿ ಅರ್ಜುನ್ ಜನ್ಯ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಎಲ್ಲರೂ ಕೂಡ ಶುಭಾಶಯಗಳ ಕೋರಿದ್ದಾರೆ. ಶಿವಣ್ಣ ಕೂಡ ಸ್ಪೆಷಲ್ ಹಾಡೊಂದನ್ನ ಹಾಡಿ ಅರ್ಜುನ್ ಜನ್ಯಾಗೆ ಕೇಕ್ ತಿನ್ನಿಸಿದರು. ಶಿವಣ್ಣ ಅವರ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು ತುಂಬಾನೇ ಖುಷಿ ನೀಡಿದೆ ಎಂದಿದ್ದಾರೆ ಅರ್ಜುನ್ ಜನ್ಯ. ಈ ಸುಂದರವಾದ ವಿಡಿಯೋ ನೋಡಿ. ಹಾಗೆ ಅರ್ಜುನ್ ಜನ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ನೀವೂ ಕಾಮೆಂಟ್ ಮಾಡಿ ಧನ್ಯವಾದಗಳು..(video credit ; zee kannada ).