Shivraj Kumar : ಶಿವಣ್ಣನೇ ಕನ್ನಡ ಇಂಡಸ್ಟ್ರಿಗೆ ಲೀಡರ್ ಆಗ್ಬೇಕು ಎಂದವರಿಗೆ ಹ್ಯಾಟ್ರಿಕ್ ಹೀರೋ ಹೇಳಿದ್ದೇನು..?
Updated:Tuesday, May 24, 2022, 19:29[IST]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೇ ಕನ್ನಡ ಇಂಡಸ್ಟ್ರಿಯ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಹಲವರು ಮನವಿ ಮಾಡಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲದೆ ನಟ-ನಟಿಯರು ಕೂಡ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಶಿವರಾಜಕುಮಾರ್ ಅವರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಕೋರಿದ್ದಾರೆ. ನಟ ರಂಗಾಯಣ ರಘು, ನಟ ದುನಿಯಾ ವಿಜಯ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಎಲ್ಲರೂ ಶಿವಣ್ಣ ಅವರೇ ನಾಯಕರಾಗಲಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಶಿವಣ್ಣ ಹೇಳಿದ್ದೇನು ಗೊತ್ತಾ.?
ಈ ಬಗ್ಗೆ ಮಾತನಾಡಿರುವ ನಟ ರಂಗಾಯಣ ರಘು ಅವರು, ಕನ್ನಡಿಗರಿಗೆ ಪ್ರತಿಬಾರಿಯೂ ಅನ್ಯಾಯವಾಗುತ್ತಲೇ ಇರುತ್ತದೆ. ಸಿನಿಮಾ ರಿಲೀಸ್ ನಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಕನ್ನಡಕ್ಕೆ ಕೊನೆಯ ಸ್ಥಾನ ಸಿಗುತ್ತಿದೆ. ಈ ಮುಂಚೆ ಕನ್ನಡಿಗರಿಗೆ ಅನ್ಯಾಯವಾಗದಿರಲಿ ಎಂದು ಡಾ. ರಾಜ್ ಕುಮಾರ್ ಅವರು ನಾಯಕರಾಗಿದ್ದರು. ಆದರೆ ಈಗ ಯಾರು ಇಲ್ಲ ಆಸ್ಥಾನವನ್ನು ನಟ ಶಿವರಾಜ್ ಕುಮಾರ್ ಅವರು ತುಂಬಬೇಕು. ನಟ ಶಿವರಾಜ್ ಕುಮಾರ್ ಅವರು ಈಗ ನಾಯಕತ್ವವನ್ನು ತಗೋಬೇಕು ಎಂದು ನಟ ರಂಗಾಯಣ ರಘು ಮನವಿ ಮಾಡಿದ್ದಾರೆ. ಈ ಬಗ್ಗೆ ನಾದಬ್ರಹ್ಮ ಹಂಸಲೇಖ ಅವರು ಮಾತನಾಡಿದ್ದು, ಶಿವಣ್ಣ ನಾಯಕತ್ವವನ್ನು ತೆಗೆದುಕೊಳ್ಳಬೇಕು. ಶಿವಣ್ಣ ನೀವು ನಾಯಕತ್ವ ತೆಗೆದುಕೊಳ್ಳಬೇಕು… ನಿಮ್ಮ ನಾಯಕತ್ವಕ್ಕಾಗಿ ನಾವೆಲ್ಲ ಇಂದು ಅರ್ಜಿ ಹಾಕುತ್ತಿದ್ದೇವೆ. ಕನ್ನಡಕ್ಕೆ ಏನು ಮಾಡಬೇಕು ಅಂತ ಜನ ಕೇಳುತ್ತಿದ್ದಾರೆ. ಶಿವಣ್ಣ ನೀವು ಹೂಜ್ಞಂ ಅಂದು ನೋಡಿ ನಾವೆಲ್ಲಾ ರಂಗಕ್ಕಿಳಿದು ಎಲ್ಲವನ್ನೂ ನಾವೇ ನೋಡಿಕೊಳ್ಳುತ್ತೇವೆ ಎಂದು ಹಂಸಲೇಖ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್ ಅವರು ಕ್ರಿಕೆಟ್ ನಲ್ಲಿ ಹನ್ನೊಂದು ಜನ ಇದಂಗೆ ನಾವು ಶಿವಣ್ಣನವರ ಯಾವುದೇ ಹೋರಾಟ ಮಾಡುತ್ತೇವೆ. ಶಿವಣ್ಣ ಒಮ್ಮೆ ನೋಡ್ರಪ್ಪ ಎಂದರೆ ಸಾಕು ನಾವೆಲ್ಲ ಪ್ಲೇಯರ್ಸ್ ಗಳು ಮುಂದೆ ಬರ್ತೀವಿ. ಚಿತ್ರರಂಗಕ್ಕೆ ಯಾವಾಗಲೂ ಅರಸಿ ಬರುತ್ತಿದ್ದ ಸಹೋದರರೆಂದರೆ ಅದು ಶಿವಣ್ಣ ಹಾಗೂ ಅಪ್ಪು ಸರ್ ಅವರು. ಮನಸಾರೆ ಬರ್ತಾರೆ ಕೋಪ ಬಂದರೂ ನೇರವಾಗಿ ಹೇಳ್ತಾರೆ. ಶಿವಣ್ಣ ಯಾವಾಗಲೂ ಒಳ್ಳೆಯ ಮನಸ್ಸಿನಿಂದ ಹಾರೈಸುತ್ತಾರೆ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. .
ಇದಕ್ಕೆ ಶಿವಣ್ಣ ಅವರು ಇಲ್ಲಿ ಲೀಡರ್ ಅನ್ನುವ ಪ್ರಶ್ನೆಯೇ ಬರುವುದಿಲ್ಲ.ಎಲ್ಲರೂ ಅವರವರ ಸ್ಥಾನದಲ್ಲಿ ಲೀಡರ್ ಆಗಿರುತ್ತಾರೆ.ಇಲ್ಲಿ ಎಲ್ಲರೂ ಒಟ್ಟಾಗಿ ಹೋರಾಡಬೇಕು ಅಷ್ಟೇ . ಕನ್ನಡ
ಉಳಿಸಬೇಕು ಅಂದ್ರೆ ಅದಕ್ಕಾಗೇ ಎಲ್ಲ ತ್ಯಾಗಕ್ಕೂ ಸಿದ್ಧವಿರಬೇಕು . ಎಂದು ಹೇಳಿದ್ದಾರೆ