Shivraj Kumar : ಶಿವಣ್ಣ ಯುವರಾಜ್ ಕುಮಾರ್ ಗೆ ಏನ್ ಹೇಳಿದ್ದಾರೆ ನೋಡಿ.. ಶಾಕ್ ಅದ ಫ್ಯಾನ್ಸ್ ?

By Infoflick Correspondent

Updated:Thursday, July 21, 2022, 12:05[IST]

Shivraj Kumar : ಶಿವಣ್ಣ ಯುವರಾಜ್ ಕುಮಾರ್ ಗೆ ಏನ್ ಹೇಳಿದ್ದಾರೆ ನೋಡಿ..  ಶಾಕ್  ಅದ ಫ್ಯಾನ್ಸ್ ?

ರಾಜ್ ಕುಮಾರ್ ಕುಟುಂಬದ ಕುಡಿ ಯುವ ರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಅವರು ಈಗಅಗಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ಡೈಲಾಗ್ ಗಳ ಸುರಿಮಳೆ ಸುರಿದು, ಫೈಟಿಂಗ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಿನಿಮಾ ರಿಲೀಸ್ ಆಗುವ ಮುನ್ನವೇ ಯುವರಾಜ್ ಕುಮಾರ್ ಅಭಿಮಾನಿಗಳನ್ನು ಗಳಿಸಿದ್ದರು. 

ಇನ್ನು ಅದಾಗಲೇ ಯುವರಾಜ್ ಕುಮಾರ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಚಿತ್ರದ ಶೂಟಿಂಗ್ ಗಳಲ್ಲಿ ಯುವರಾಜ್ ಕುಮಾರ್ ಅವರು ಬ್ಯುಸಿಯಾಗಿದ್ದಾರೆ. ಹೊಂಭಾಳೆ ಫಿಲ್ಮ್ಸ್ ಜೊತೆಗೂ ಯುವರಾಜ್ ಕುಮಾರ್ ಅವರು ಚಿತ್ರ ಮಾಡುತ್ತಿದ್ದಾರೆ.ರಾಜ್ ಕುಮಾರ್ ಕುಟುಂಬದ ಇತರೆ ಕುಡಿಗಳಂತೆಯೇ ಮುಂದೆ ಯುವರಾಜ್ ಕುಮಾರ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುವುದರಲ್ಲಿ ಡೌಟೇ ಇಲ್ಲ. ಇನ್ನು ಯುವರಾಜ್ ಕುಮಾರ್ ಅವರ ಬೆಳವಣಿಗೆಗೆ ರಾಜ್ ಕುಮಾರ್ ಕುಟುಂಬದ ಸಹಕಾರವಿದ್ದೇ ಇರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಈ ಬಗ್ಗೆ ಶಿವಣ್ಣ ಅವರು ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.     

ಹೌದು.. ಮಾಧ್ಯಮದವರು ಶಿವಣ್ಣ ಅವರನ್ನು ಸ್ಯಾಂಡಲ್ ವುಡ್ ನಲ್ಲಿ ಯುವರಾಜ್ ಕುಮಾರ್ ಅವರ ಬೆಳವಣಿಗೆ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅಲ್ಲದೇ, ಯುವರಾಜ್ ನಿಗೆ ತಮ್ಮ ಸಪೋರ್ಟ್ ಹೇಗಿದೆ ಎಂದು ಕೇಳಿದ್ದಕ್ಕೆ, ಶಿವಣ್ಣ ಅವರು ನಾವ್ಯಾರೂ ಯುವರಾಜ್ ಕುಮಾರ್ ನನ್ನು ಸಪೋರ್ಟ್ ಮಾಡುವುದಿಲ್ಲ. ಅವರವರ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ತಮ್ಮನ್ನು ತಾವು ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯುರಾಜ್ ಬೆಳವಣಿಗೆಗೆ ನಮ್ಮ ಸಪೋರ್ಟ್ ಇರುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.