Shivraj Kumar : ಡಿಕೆಡಿಯಲ್ಲಿ ಶಿವಣ್ಣನ 60 ರ ಹುಟ್ದಬ್ಬ..! ರಾಘಣ್ಣ ದೇವರಲಿ ಏನನ್ನ ಕೇಳಿದ್ದಾರೆ ನೋಡಿ..!

By Infoflick Correspondent

Updated:Tuesday, July 12, 2022, 14:07[IST]

Shivraj Kumar :  ಡಿಕೆಡಿಯಲ್ಲಿ ಶಿವಣ್ಣನ 60 ರ ಹುಟ್ದಬ್ಬ..! ರಾಘಣ್ಣ ದೇವರಲಿ ಏನನ್ನ ಕೇಳಿದ್ದಾರೆ ನೋಡಿ..!

ಡಿಕೆಡಿ ಕಾರ್ಯಕ್ರಮ ಇದೀಗ ಒಂದು ಹಂತ ತಲುಪಿದ್ದು ಡ್ಯಾನ್ಸರ್ಸ್ ಗಳು ಅದ್ದೂರಿಯಾಗಿ ಡಾನ್ಸ್ ಮಾಡಿದ್ದು ಹಂತ ಹಂತವಾಗಿ ಫಿನಾಲೆಗೆ ಹತ್ತಿರ ಆಗುತ್ತಿದ್ದಾರೆ. ಹೌದು ಜೀ ಕನ್ನಡದ ಖ್ಯಾತ ರಿಯಾಲಿಟಿ ಶೋ ಗಳಲ್ಲಿ ಒಂದಾದ ಡಾನ್ಸ್ ಕರ್ನಾಟಕ ಡಾನ್ ಕಾರ್ಯಕ್ರಮದಲ್ಲಿ ಇಂದು ಶಿವಣ್ಣ ಅವರ ಹುಟ್ಟುಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಶಿವಣ್ಣ ಅವರಿಗೆ ಇದೀಗ 60 ವರ್ಷದ ಸಂಭ್ರಮ. ಇಂದು ವೇದಿಕೆ ಮೇಲೆ ಒಬ್ಬ ಸ್ಪೆಷಲ್ ವ್ಯಕ್ತಿ ನಿಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ ಶಿವಣ್ಣ, ನೀವು ಅವರ ಜೊತೆ ಫೋನ್ ಕಾಲ್ ನಲ್ಲಿ ಮಾತನಾಡಬೇಕು ಎಂದು ಅನುಶ್ರೀ ಮನವಿ ಮಾಡಿಕೊಳ್ಳುತ್ತಾರೆ.

ಅದರಂತೆ ರಾಘಣ್ಣ ಶಿವಣ್ಣನ ಜೊತೆ ಮಾತನಾಡಿದ್ದು ಕ್ಷಣಾರ್ಧದಲ್ಲಿ ಶಿವಣ್ಣ ರಾಘು ಎಂದು ಹೇಳುತ್ತಾರೆ.   

ರಾಗಣ್ಣನ ಧ್ವನಿ ಕಂಡ ಹಿಡಿದು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಕ್ಕೆ ಧನ್ಯವಾದ ಹೇಳುತ್ತಾರೆ ಶಿವಣ್ಣ. ಬಳಿಕ ವೇದಿಕೆ ಮೇಲೆ ಆಗಮಿಸಿದ ರಾಘಣ್ಣ ಅವರು ಸಣ್ಣದಾದ ಒಂದು ಬ್ಯಾಡ್ಜ್ ಅನ್ನು ಹಾಕಿರುತ್ತಾರೆ. ಅದು ಅಪ್ಪುರ ಫೋಟೋ. ಎದೆಯ ಮೇಲೆ ಹಾಕಿಕೊಂಡು ಬರುತ್ತಾರೆ. ಅದನ್ನು ನೋಡಿ ಅನುಶ್ರೀ ಒಬ್ಬ ಸ್ಪೆಷಲ್ ವ್ಯಕ್ತಿಯನ್ನು ಕೂಡ ಕರೆದುಕೊಂಡು ಬಂದಿದ್ದೀರಾ ರಾಘಣ್ಣ ಎಂದಾಗ, ಅವನಿಲ್ಲದೆ ಬರಬಾರದು ಎಂದುಕೊಂಡೆ ಹಾಗಾಗಿ ಅಪ್ಪುವನ್ನ ಕರೆದುಕೊಂಡ ಬಂದೆ ಎಂದರು ರಾಘಣ್ಣ..ಹಾಗೆಂದ ಕೂಡಲೇ ಶಿವಣ್ಣ ಅವರು ಭಾವುಕರಾಗಿದರು. ಜೊತೆಗೆ ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ನೀವು ನಿಮ್ಮ ಮಾತಿನಲ್ಲಿ ಶುಭಾಶಯ ತಿಳಿಸುವುದಾದರೆ ಹೇಗೆ ತಿಳಿಸುತ್ತೀರಿ ರಾಘಣ್ಣ, ಏನನ್ನ ಹೇಳಲು ಬಯಸುತ್ತೀರಿ ಎಂದಾಗ ಅನುಶ್ರೀ ಮಾತಿಗೆ, ರಾಘಣ್ಣ ಹೇಳಿದ್ದು ಕೇಳಿ.

ನಾನು ಜೀವನದಲ್ಲಿ ಏನಾದರೂ ಇಲ್ಲಿಯವರೆಗೆ ಒಳ್ಳೆಯದು ಮಾಡಿದ್ದರೆ, ಆ ದೇವರು ನನಗೆ ಏನಾದರೂ ಅದಕ್ಕೆ ಪ್ರತಿರೂಪವಾಗಿ ಕೊಡಬೇಕು ಎಂದಲ್ಲಿ, ಅದನ್ನೆಲ್ಲ ನನ್ನ ಅಣ್ಣನಿಗೆ ಕೊಡು. ಹಾಗೆ ನಾನೇನಾದರೂ ತಪ್ಪು ಮಾಡಿದ್ದಲ್ಲಿ ನಿನಗೆ ಶಿಕ್ಷೆ ಕೊಡಬೇಕು ಎಂದಿನಿಸಿದರೆ, ಅದು ನನಗೆ ಕೊಡು ಎಂದು ಕೇಳುತ್ತೇನೆ ಎನ್ನುತ್ತಾರೆ. ಆಗ ಶಿವಣ್ಣನ ಮುಖದಲ್ಲಿ ಆ ಭಾವುಕಥೆಯನ್ನು ನೀವು ನೋಡಬೇಕು. ಅಣ್ಣ ತಮ್ಮರು ಎಂದರೆ ಹೀಗಿರಬೇಕು ಎಂದೆನಿಸುತ್ತದೆ ಈ ವಿಡೀಯೋ ನೋಡಿದರೆ. ಇಲ್ಲಿದೆ ನೋಡಿ ಆ ವಿಡಿಯೋ. ನೀವು ಕೂಡ ನೋಡಿ ಒಮ್ಮೆ ಶೇರ್ ಮಾಡಿ ಧನ್ಯವಾದಗಳು... ( video credit : zee kannada )