Shivraj Kumar : ಬೈರಾಗಿ ಸಿನಿಮಾ ಹಾಡಿಗೆ ಫ್ಯಾನ್ ಜೊತೆ ಡ್ಯಾನ್ಸ್ ಮಾಡಿದ ಶಿವಣ್ಣ..! ಕ್ಯೂಟ್ ಆಗಿತ್ತು ಎಂದ ಫ್ಯಾನ್ ವೈರಲ್..!

By Infoflick Correspondent

Updated:Thursday, June 30, 2022, 16:12[IST]

Shivraj Kumar :  ಬೈರಾಗಿ ಸಿನಿಮಾ ಹಾಡಿಗೆ ಫ್ಯಾನ್ ಜೊತೆ ಡ್ಯಾನ್ಸ್ ಮಾಡಿದ ಶಿವಣ್ಣ..! ಕ್ಯೂಟ್ ಆಗಿತ್ತು ಎಂದ ಫ್ಯಾನ್ ವೈರಲ್..!

ಶಿವಣ್ಣ ಅವರ ಮನೆಯ ಹತ್ತಿರ ಈಗೀಗ ಅಭಿಮಾನಿಗಳು ಹೆಚ್ಚಾಗಿ ಬರುತ್ತಿರುವುದು ಹೊಸದೇನಲ್ಲ. ಆರಂಭದ ದಿನದಿಂದಲೂ ಶಿವಣ್ಣ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಶಿವಣ್ಣ ಕೂಡ ಅಷ್ಟೇ ಬಂದ ಅಭಿಮಾನಿಗಳೊಟ್ಟಿಗೆ ಪ್ರೀತಿಯಿಂದ ಮಾತನಾಡಿ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗೆ ಅವರು ತಂದಂತಹ ಗಿಫ್ಟ್ ಗಳನ್ನು ತೆಗೆದುಕೊಂಡು ಅವರ ಖುಷಿಯಲ್ಲಿ ಒಂದಾಗುತ್ತಾ ಅವರನ್ನ ಹಾಗೂ ಎಲ್ಲಾ ಕನ್ನಡಿಗರ ಮನರಂಜಿಸುತ್ತಾರೆ ಎನ್ನಬಹುದು. ಆಗಾಗ ಡಾನ್ಸ್ ಮಾಡುವುದು ಶಿವಣ್ಣನಿಗೆ  ಹೆಚ್ಚು ಇಷ್ಟ.  ಅಭಿಮಾನಿಗಳು ಪ್ರೀತಿಯಿಂದ ಶಿವಣ್ಣ ಒಂದು ಹಾಡಿಗೆ ಹೆಜ್ಜೆ ಹಾಕೋಣ ಎಂದರೆ ಸಾಕು, ಹಿಂದೂ ಮುಂದ ನೋಡದೆ ಅದಕ್ಕೇನು ಚಿನ್ನ ಮಾಡೋಣ ಬಿಡು ಎಂದು ನಿಂತ ಸ್ಥಳದಲ್ಲಿ ಸ್ಟೆಪ್ ಹಾಕುತ್ತಾರೆ.

ಇದೀಗ ನಟ ಶಿವಣ್ಣ ಅವರ ಬಹುನಿರೀಕ್ಷಿತ ಚಿತ್ರ ಬೈರಾಗಿ ಇಷ್ಟರಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಧನಂಜಯ್ ಅವರು ಮತ್ತೊಮ್ಮೆ ಶಿವಣ್ಣ ಅವರೊಟ್ಟಿಗೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾ ಕಾತುರರಾಗಿ ಇದ್ದಾರೆ. ಅವರಿಗೆ ಬಿಗ್ ಬ್ರೇಕ್ ಕೊಟ್ಟಿದ್ದ ಡಾಲಿ ಪಾತ್ರದ ಟಗರು ಸಿನಿಮಾ ಧನಂಜಯ್ ಅವರ ಸಿನಿಮಾ ಕರಿಯರನ್ನೇ ಬದಲಾಯಿಸಿತು ಎಂದು ಹೇಳಬಹುದು. 

ಶಿವಣ್ಣ ಅವರ ಮನೆಯ ಹತ್ತಿರ ಅವರ ಅಭಿಮಾನಿಗಳು ಇದೀಗ ಹೆಚ್ಚಾಗಿ ಅವರನ್ನು ಮೀಟ್ ಮಾಡಲು ಬರುತ್ತಿದ್ದಾರೆ. ಜೊತೆಗೆ ಪ್ರೀತಿಯಿಂದ ಅವರ ಜೊತೆ ಡ್ಯಾನ್ಸ್ ಕೂಡ ಮಾಡುತ್ತಾರೆ. ಅವರು ಅಭಿಮಾನಿ ಬಂದು ಮನವಿ ಮಾಡಿದ ಬೆನ್ನಲ್ಲೇ  ಅವರದ್ದೇ ಆದ ಬೈರಾಗಿ ಸಿನಿಮಾದ ಶಿವಪ್ಪ ಎನ್ನುವ ಹಾಡಿಗೆ ಸಕ್ಕತಾಗಿ ನೃತ್ಯ ಮಾಡಿದ್ದಾರೆ.

ಫ್ಯಾನ್ ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಶಿವಣ್ಣನ ಜೊತೆ ನಾನು ಡಾನ್ಸ್ ಮಾಡಿದ್ದು ನನ್ನ ಜೀವನದಲ್ಲಿ ಎಂದು ಮರೆಯಲು ಆಗದ ಒಂದು ಕ್ಷಣ ಎಂದು ಖುಷಿಯ ಹಂಚಿ ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. ಶಿವಣ್ಣ ಅವರ ಪ್ರೀತಿಗೆ ಅವರೇ ಸಾಟಿ ಅಲ್ವಾ ವಿಡಿಯೋ ನಿಮಗೂ ಇಷ್ಟವಾದಲ್ಲಿ ಬಳಿಕ ತಪ್ಪದೇನೆ ಶೇರ್ ಮಾಡಿ ಧನ್ಯವಾದಗಳು...