ಜೇಮ್ಸ್ ಚಿತ್ರತಂಡದಿಂದ ಸರ್ಪ್ರೈಸ್: ಅಪ್ಪು ನಟಿಸಿದ ಕೊನೆಯ ಚಿತ್ರದಲ್ಲಿ ಶಿವಣ್ಣ, ರಾಘಣ್ಣ ಅಭಿನಯ
Updated:Friday, January 21, 2022, 14:19[IST]

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಈ ವರ್ಷ ರಿಲೀಸ್ ಆಗಲಿದೆ. 2022ರಲ್ಲಿ ಅಪ್ಪು ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ಹೊಸ ಬದಲಾವಣೆ ತರಲು ಚಿತ್ರತಂಡ ಮುಂದಾಗಿದೆ. ಅದು ಏನು ಎಂದು ತಿಳಿದರೆ ನೀವೆಲ್ಲಾ ಶಾಕ್ ಆಗ್ತೀರಾ..
ಜೇಮ್ಸ್ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. 2022ರ ಮಾರ್ಚ್17ರಂದು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನವೇ ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆದ್ರೆ ಚಿತ್ರದ ಇನ್ನೂ ಒಂದು ಹಾಡಿನ ಶೂಟಿಂಗ್ ಬಾಕಿ ಇರುವಾಗಲೇ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿದರು. ಇದು ಇಡೀ ಕರುನಾಡಿನ ಜನತೆಯಲ್ಲಿ ದುಃಖವನ್ನು ತಂದಿದೆ.
ಕಳೆದ ವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಜೇಮ್ಸ್ ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು. ಜೇಮ್ಸ್ ಚಿತ್ರದ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿತ್ತು. ಇದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಟಾಪ್ ಟು ಬಾಟಂ ಬ್ಲಾಕ್ ಔಟ್ ಪುಟ್ ನಲ್ಲಿದ್ದು, ಬೈಕ್ ಮೇಲೆ ಕುಳಿತಿದ್ದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ಸದ್ಯ ಚಿತ್ರದ ಪೋಸ್ಟ್ ಪ್ರಡಕ್ಷನ್ ಕೆಲಸಗಳು ನಡೆಯುತ್ತಿವೆ.
ಇನ್ನೊಂದು ಖುಷಿಯ ವಿಷಯ ಎಂದರೆ, ಅಪ್ಪು ನಟನೆಯ ಕೊನೆಯ ಚಿತ್ರದಲ್ಲಿ ರಾಜ್ ಕುಮಾರ್ ಕುಟುಂಬ ಕಾಣಿಸಿಕೊಳ್ಳಲಿದ್ಯಂತೆ. ಅಂದರೆ, ಶಿವಣ್ಣ ಹಾಗೂ ರಾಘಣ್ಣ ಕೂಡ ಜೇಮ್ಸ್ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಆಲೋಚಿಸುತ್ತಿದ್ದು, ಹಾಡಿನಲ್ಲಿ ಕಾಣಿಸಿಕೊನಳ್ಳಲಿದ್ದಾರೋ ಅಥವಾ ಯಾವುದಾದರೂ ಒಂದು ಸೀನ್ ನಲ್ಲಿ ನಟಿಸಲಿದ್ದಾರೋ ಎಂಬುದು ಮಾತ್ರ ಗೊತ್ತಿಲ್ಲ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷ್ ಆಗಿದ್ದಾರೆ.( video credit : tv 9 kannada )