Shivraj Kumar : ಶಿವರಾಜ್ ಕುಮಾರ್ ಎತ್ತಿಕೊಂಡಿರುವ ಈ ಮಕ್ಕಳು ಯಾರು ಗೊತ್ತಾ..?
Updated:Monday, May 30, 2022, 14:25[IST]

ರಾಜ್ ಕುಮಾರ್ ಕುಟುಂಬದಲ್ಲಿ ನಡೆಯಬಾರದ ಘಟನೆ ನಡೆದ ಆ ದಿನ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿತ್ತು. ಅಂದು ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಈ ಸುದ್ದಿ ಇಡೀ ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಎಲ್ಲರೂ ಅಪ್ಪು ಸಾವಿಗೆ ಕಂಬನಿ ಮಿಡಿದಿದ್ದರು. ಕರ್ನಾಟಕ ಮಾತ್ರವಲ್ಲದೇ, ಇಡೀ ಭಾರತದಲ್ಲಿ, ವಿಶ್ವಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಓಡೋಡಿ ಬಂದಿದ್ದರು. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಮುಗಿ ಬಿದ್ದಿದ್ದರು.
ಈ ಒಂದು ಘಟನೆ ಇಡೀ ರಾಜ್ ಕುಮಾರ್ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅಭಿಮಾನಿಗಳು ಕೂಡ ಎಲ್ಲೆಲ್ಲೂ ಪುನೀತ್ ರಾಜ್ ಕುಮಾರ್ ಅವರ ಪೋಸ್ಟರ್ ಗಳನ್ನು ಎಲ್ಲೆಲ್ಲೂ ಹಾಕಿದ್ದರು. ಎಲ್ಲೆಡೆ ಅಪ್ಪು ಅವರ ಹೆಸರಿನಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸಿದ್ದರು. ಕೆಲವೆಡೆ ಅಪ್ಪು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗುಡಿ ಕಟ್ಟಿ ಪೂಜಿಸಿದರು. ಅಭಿಮಾನಿಗಳಿಗೇ ಇನ್ನು ಈ ದುಃಖವನ್ನು ಅರಗಿಸಿಕೊಳ್ಳಲು ಆಗಿಲ್ಲ. ಇನ್ನು ಕುಟುಂಬದವರ ಸ್ಥಿತಿ ಹೇಗಿರಬೇಡ.
ಆದರೆ, ಏನೇ ಆದರೂ, ಏನೇ ಹೋದರು ಈ ಬದುಕು ನಡೆಯುತ್ತಲೇ ಇರಬೇಕು. ಹೀಗಾಗಿ ಸದ್ಯ ರಾಜ್ ಕುಮಾರ್ ಕುಟುಂಬದವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ತಿಂಗಳ ಹಿಂದೆ ಶಿವರಾಜ್ ಕುಮಾರ್ ಅವರು ತಮ್ಮ ಸಂಬಂಧಿಕರ ನಾಮಕರಣಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿದ್ದ ಮಕ್ಕಳನ್ನು ಮುದ್ದಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಶಿವರಾಜ್ ಕುಮಾರ್ ಅವರ ಮಗಳ ಮಗು ಎಂದು ಹೇಳಲಾಗಿತ್ತು. ಆದರೆ, ಈ ಮಗು ಸಂಬಂಧಿಕರದ್ದು ಎಂಬ ವಿಚಾರ ಇದೀಗ ತಿಳಿದು ಬಂದಿದೆ.