ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಡಿ ಅಂತ ನಾವೇ ಕೇಳ್ಬೇಕಾ?

Updated: Wednesday, November 24, 2021, 23:19 [IST]

ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಡಿ ಅಂತ ನಾವೇ ಕೇಳ್ಬೇಕಾ?

ಹೌದು ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾದ ಬಳಿಕ ಸೋಶಿಯಲ್ ವಿಡಿಯೋದಲ್ಲಿ ಸಾಕಷ್ಟು  ಕೆಲ ವಿಷಯಗಳು ಹೆಚ್ಚು ಚರ್ಚೆ ಆಗುತ್ತಿವೆ. ಹೌದು ಕನ್ನಡದ ಖ್ಯಾತ ನಟ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇದೀಗ ನಮ್ಮ ಜೊತೆ ಕೇವಲ ದೈಹಿಕವಾಗಿ ಮಾತ್ರ ದೂರ ಆಗಿದ್ದು, ಸದಾ ಎಲ್ಲರ ಹೃದಯದಲ್ಲೂ ಒಳ್ಳೆಯ ಕೆಲಸಗಳಲ್ಲಿ ಸಾಮಾಜಿಕ ಸೇವೆಗಳಲ್ಲಿ ಇದ್ದೇ ಇರುತ್ತಾರೆ. ಇತ್ತೀಚಿಗೆ ಅಪ್ಪು ನಮನ ಕಾರ್ಯಕ್ರಮ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಪುನೀತ್ ಅವರು ಬದುಕಿದ್ದಾಗ ಬದುಕಿದ ರೀತಿ, ಅವರ ಸಮಾಜಸೇವೆ, ಕಷ್ಟ ಎಂದವರಿಗೆ ಅಪ್ಪು ಅವರ ಮಿಡಿಯುತ್ತಿದ್ದ ಹೃದಯ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತದೆ.  

ಇಂದಿಗೂ ಕೂಡ ಪುನೀತ್ ನಮ್ಮ ಜೊತೆಗೆ ಇಲ್ಲ ಎಂದು ಒಂದುಕ್ಷಣ ಆಲೋಚಿಸಿದರೆ ಹೆಚ್ಚು ಸಂಕಟ ಆಗುತ್ತದೆ. ಪುನೀತ್ ಅವರಿಗೆ ಅಪ್ಪು ನಮನ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದರು. ಹೌದು ಈ ವಿಷಯ ಹೊರಬರುತ್ತಿದ್ದಂತೆ ಕೆಲ ಅಭಿಮಾನಿಗಳು ಬೇರೆ ಬೇರೆ ನಟರ ವಿಷಯಗಳನ್ನ ಹೇಳಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಎಂದು ಆಗ್ರಹಿಸಿದರು ಎಂದು ಕೇಳಿ ಬಂದಿತ್ತು. ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಅಂಬರೀಶ್, ರಾಜಕುಮಾರ್, ಪಾರ್ವತಮ್ಮ ಇದೀಗ ಪುನೀತ್ ಎಲ್ಲರ ಸಮಾಧಿಗಳು ಕಾಣುತ್ತಿವೆ.

ಆದರೆ ವಿಷ್ಣುವರ್ಧನ್ ಅವರ  ಸಮಾಧಿ ಎಲ್ಲಿ ಎಂದು ಈ ವಿಷಯವಾಗಿ ವಿಷ್ಣು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದರು. ಜೊತೆಗೆ ಅನಿರುದ್ಧ್ ಕೂಡ ವಿಷ್ಣು ಅಪ್ಪಾಜಿಯ ಸಮಾಧಿ ಬಗ್ಗೆ ಮಾತನಾಡಿದರು. ಇದೀಗ ಅನಿರುದ್ಧ್ ಇನ್ನೊಂದು ವಿಷಯ ಹೇಳಿಕೊಂಡಿದ್ದು, ಅಪ್ಪಾಜಿ ವಿಷ್ಣು ಅವರು ಏನು ಮಾಡೆ ಇಲ್ವಾ ಎಂದು ತುಂಬಾ ನೊಂದು ಮಾತನಾಡಿದ್ದಾರೆ. ಅಸಲಿಗೆ ನಟ ಅನಿರುದ್ಧ್ ಅವರು ಹೇಳಿದ್ದೇನು ಗೊತ್ತಾ. ಈ ವಿಡಿಯೋ ನೋಡಿ. ಹಾಗೇನೇ ತಪ್ಪದೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ...