ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಸೇರಿಕೊಂಡ ಖ್ಯಾತ ನಟಿ ಶ್ರಿಯಾ ಸರನ್..! ಇಲ್ಲಿದೆ ಸಂಕ್ಷಿಪ್ತ ಮಾಹಿತಿ..!
Updated:Thursday, March 10, 2022, 17:59[IST]

ಶ್ರಿಯಾ ಸರನ್ (Shriya Saran) ಒಬ್ಬ ಭಾರತೀಯ ನಟಿ ಮತ್ತು ಮಾಡೆಲ್ ಆಗಿದ್ದು, ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತೆಲುಗು ಚಲನಚಿತ್ರ ಇಷ್ಟಮ್ (2001) ನೊಂದಿಗೆ ಮೊದಲ ಬಾರಿ ನಟನೆ ಆರಂಭಿಸಿದ್ದರು. ಸಂತೋಷಮ್ (2002) ನೊಂದಿಗೆ ತಮ್ಮ ಮೊದಲ ವಾಣಿಜ್ಯ ಯಶಸ್ಸನ್ನು ಪಡೆದರು.. ಹೌದು ಇವರು ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜಾ ಅವರೊಂದಿಗೆ ತುಜೆ ಮೇರಿ ಕಸಮ್ನ ಪೋಷಕ ಪಾತ್ರದಲ್ಲಿ ಕಾಣಿಸಿದ್ದು ಹಿಂದಿ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ನಟಿ ಶ್ರಿಯಾ ನಟ ಚಿರಂಜೀವಿ ಅವರಿಗೂ ಸಹ ಜೋಡಿಯಾಗಿ ಅಭಿನಯ ಮಾಡಿದ್ದಾರೆ..
ಆರ್ ಚಂದ್ರು ನಿರ್ದೇಶನದ ಕಬ್ಜ ಮೂವಿ ಇದೀಗ ಇಡೀ ಇಂಡಿಯಾದಲ್ಲೇ ಒಂದು ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ಚಂದ್ರಶೇಖರ್ ಅವರು ಸಿನಿಮಾಗೆ ನಿರ್ಮಾಣ ಮಾಡಿದ್ದು, ಕಬ್ಜಾ ಸಿನಿಮಾಗೆ ಮ್ಯೂಸಿಕ್ ನೀಡಿರುವುದು ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು. ಹೌದು ಮುಖ್ಯ ಭೂಮಿಕೆಯಲ್ಲಿ ಖ್ಯಾತ ನಟ ಇಂಡಿಯನ್ ಸೂಪರ್ ಸ್ಟಾರ್ ಉಪೇಂದ್ರ (Upendra ) ಅಭಿನಯಿಸಿದ್ದಾರೆ. ಹಾಗೆ ಕಿಚ್ಚ ಸುದೀಪ್ (Sudeep) ಅವರು ಸಹ ಅಭಿನಯ ಮಾಡಿದ್ದಾರೆ. ಇದೀಗ ಆರ್ ಚಂದ್ರು ಅವರ ಕಬ್ಜಾ ಸೆಟ್ ಗೆ ನಟಿ ಶ್ರಿಯಾ ಸರನ್ ಅವರು ಕೂಡ ಸೇರಿದ್ದು ನಟಿಯ ಮಧುಮತಿ ಪಾತ್ರದ ಫಸ್ಟ್ ಲುಕ್ ಮೊನ್ನೆ ಸೋಮವಾರ ಬಿಡುಗಡೆ ಮಾಡಿದ್ದಾರೆ. ಈ ಖುಷಿಯ ವಿಚಾರವನ್ನು ನಟಿ ಶ್ರೀಯಾ ಸರನ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿಕೊಂಡು ತುಂಬಾ ಖುಷಿಯಾಗಿದೆ. ಸ್ಟಾರ್ ನಟರ ಜೊತೆ ಹಾಗೇನೇ ಸ್ಟಾರ್ ನಿರ್ದೇಶಕ ಆರ್ ಚಂದ್ರು ಅವರ ಜೊತೆ ಕೆಲಸ ಮಾಡಲಿಕ್ಕೆ ಎಂದು ಬರೆದುಕೊಂಡಿದ್ದಾರೆ..
ಹೌದು ಕನ್ನಡ ಚಿತ್ರ ಕಬ್ಜಾದ (Kabja) ಶ್ರಿಯಾ ಸರನ್ ಅವರ ಫಸ್ಟ್ ಲುಕ್ ಅನ್ನು ಸೋಮವಾರ ಅನಾವರಣಗೊಳಿಸಲಾಯಿತು. ಆರ್ ಚಂದ್ರು ನಿರ್ದೇಶನದಲ್ಲಿ ಸರನ್ ಸ್ಯಾಂಡಲ್ವುಡ್ ನ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರ ಜೊತೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.. ಕಬ್ಜಾದಲ್ಲಿ ಕಬೀರ್ ದುಹಾನ್ ಸಿಂಗ್, ಕಾಮರಾಜ್, ಡ್ಯಾನಿಶ್ ಅಖ್ತರ್ ಸೈಫಿ, ಸುನಿಲ್ ಪುರಾಣಿಕ್, ಅನುಪ್ ರೇವಣ್ಣ, ಜಗಪತಿ ಬಾಬು ಮತ್ತು ಪ್ರಮೋದ್ ಶೆಟ್ಟಿ ಕೂಡ ನಟಿಸಿದ್ದಾರೆ ಎಂದು ತಿಳಿದುಬಂದಿದೆ...