ಅಮ್ಮಂದಿರೊಡನೆ ಹೆಜ್ಜೆ ಹಾಕಿದ ಶೃತಿ- ನೆಟ್ಟಿಗರಿಂದ ಹೆಚ್ಚಾದ ಲೈಕ್

By Infoflick Correspondent

Updated:Tuesday, April 19, 2022, 09:07[IST]

ಅಮ್ಮಂದಿರೊಡನೆ ಹೆಜ್ಜೆ ಹಾಕಿದ ಶೃತಿ- ನೆಟ್ಟಿಗರಿಂದ ಹೆಚ್ಚಾದ ಲೈಕ್

ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪೋಸ್ಟ್​ ಮಾಡುವ ನಟಿ ಶ್ರುತಿ ತಮ್ಮ ತಂದೆ ಹಾಗೂ ತಾಯಂದಿರ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಶ್ರುತಿ ಅವರ ತಂದೆ ಹಾಗೂ ತಾಯಂದಿರುವ ರಂಗಭೂಮಿ ಹಿನ್ನಲೆವುಳ್ಳವರು.  ಕೃಷ್ಣ ಅವರು ಮೂಲತಃ ರಂಗಭೂಮಿ ಇಂದ ಬಂದವರು.. ಇತ್ತ ರಾಧಾ ರುಕ್ಮಿಣಿ ಅವರೂ ಸಹ ರಂಗಭೂಮಿ ಕಲಾವಿದರುಗಳೇ.. ಗುಬ್ಬಿ ಕಂಪನಿಯಲ್ಲಿ ಇಬ್ಬರ ಕುಟುಂಬವೂ ನಾಟಕಗಳಲ್ಲಿ ಅಭಿನಯಿಸುವ ಕೆಲಸ ಮಾಡಿಕೊಂಡಿದ್ದರು. 

ಶ್ರುತಿ ತಂದೆ ಅವರಿಗೆ ಇಬ್ಬರು ಮಡದಿಯರು. ತಂದೆ ಕೃಷ್ಣ ಅವರು ಅವಳಿ ಸಹೋದರಿಯರಾದ ರಾಧಾ ರುಕ್ಮಣಿ ಅವರನ್ನು ವಿವಾಹವಾಗಿದ್ದಾರೆ. ಶೃತಿ ಮತ್ತು ಶರಣ್ ಇಬ್ಬರದ್ದು ಮೆಚ್ಚಬೇಕಾದ ವಿಚಾರ ಎಂದರೆ ಇಬ್ಬರು ತಾಯಿಯರಲ್ಲಿ ತಮ್ಮ ತಾಯಿ ಯಾರೆಂದು ಹೊರಗೆಲ್ಲೂ ಸಹ ಶರಣ್ ಅವರಾಗಲಿ ಅಥವಾ ಶೃತಿ ಅವರಾಗಲಿ ಹೇಳಿಕೊಂಡಿಲ್ಲ.. ಇಬ್ಬರನ್ನೂ ಸಹ ತಾಯಿಯೆಂದೇ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುವುದು.. ಇಬ್ಬರನ್ನೂ ಅಷ್ಟೇ ಗೌರವಿಸುವುದು ನಿಜಕ್ಕೂ ಶೃತಿ ಹಾಗೂ ಶರಣ್ ಅವರ ದೊಡ್ಡ ಗುಣ    

ಶೃತಿ ಇವರ ಮೂಲ ಹೆಸರು ಗಿರಿಜಾ. ದ್ವಾರಕೇಶ್ ಅವರು ನಿರ್ದೇಶನ ಮಾಡಿರುವ ಕನ್ನಡದ "ಶೃತಿ" ಚಿತ್ರದಲ್ಲಿ ನಟಿಸಿರುವ ಇವರಿಗೆ ಗಿರಿಜಾ ಇದ್ದ ಜನ್ಮನಾಮ ಹೋಗಿ ಶೃತಿ ಎಂದು ಕರೆಯಲಾಯಿತು. ಈಗ ತಾಯಿಯಂದಿರ 75 ವರ್ಷದ ಹುಟ್ಟುಹಬ್ಬವನ್ನು ಶೃತಿ ಅವರೊಡನೆ ಪ್ರೀತಿಯಿಂದ ನೃತ್ಯ ಮಾಡುವುದರ ಮೂಲಕ ಆಚರಿಸಿದ್ದಾರೆ. ಶೃತಿಯವರಿಗೆ ಅವರ ಕುಟುಂಬವೆಂದರೆ ಅಪಾರ ಪ್ರೀತಿ. ಅವರು ಹೆಚ್ಚು ಸಮಯವನ್ನು ಕುಟುಂಬದವರಿಗೆ ನೀಡುತ್ತಾರೆ. ‌ಇದೀಗ ಹಾಡಿಗೆ ಅಮ್ಮಂದಿರೆ ಸ್ಟೇಪ್ ಕಲಿಸುವ ಮೂಲಕ ಅವರೊಡನೆ ನೃತ್ಯ ಮಾಡಿ ಅಮ್ಮಂದಿರ ಹುಟ್ಟುಹಬ್ಬಕ್ಕೆ ಮೆರಗು ನೀಡಿದ್ದಾರೆ. 

ಇಬ್ಬರೂ ಅಮ್ಮಂದಿರೂ ಸಂತಸದಿಂದ ಮಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಮುದ್ದಾದ ಕುಟುಂಬ ಇವರ ಚಂದದ ನೃತ್ಯ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ( video credit : kannada tv )