Shruti : ಶ್ರುತಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಹೇಗೆ..? ಆಸ್ತಿ ಮಾರಿದ್ದ ಶ್ರುತಿ ತಂದೆ ಬಿಚ್ಚಿಟ್ಟ ಸತ್ಯ ಇಲ್ಲಿದೆ..!

By Infoflick Correspondent

Updated:Tuesday, May 24, 2022, 16:09[IST]

Shruti :  ಶ್ರುತಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಹೇಗೆ..? ಆಸ್ತಿ ಮಾರಿದ್ದ ಶ್ರುತಿ ತಂದೆ ಬಿಚ್ಚಿಟ್ಟ ಸತ್ಯ ಇಲ್ಲಿದೆ..!

ಹೌದು ಗಿರಿಜಾ ಎನ್ನವ ಮೂಲ ಹೆಸರಿನ ಶ್ರುತಿ, ನಂತರದ ದಿನಗಳಲ್ಲಿ ತನ್ನ ನಟನೆ ಪರದೆಯ ಮೂಲಕ ಶ್ರುತಿ ಎಂದು ಕರೆಯಲ್ಪಟ್ಟರು. ಭಾರತೀಯ ನಟಿ, ದೂರದರ್ಶನ ವ್ಯಕ್ತಿತ್ವ ಮತ್ತು ರಾಜಕಾರಣಿ, ನಟಿಯಾಗಿ, ಹೀಗೆ ನಟಿ ಶ್ರುತಿ ಅವರು ಪ್ರಧಾನವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ತುಂಬಾ ದೊಡ್ಡ ಸಾಧನೆ ಮಾಡಿ, ಅಭಿನಯದಲ್ಲೇ ಕಾಣಿಸಿಕೊಳ್ಳುತ್ತ ಬಂದವರು..ಅವರು ಪ್ರಸ್ತುತ ಭಾರತೀಯ ಜನತಾ ಪಕ್ಷದ ಮಹಿಳಾ ವಿಭಾಗದ ಕರ್ನಾಟಕ ಕೇಡರ್‌ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಈಗ ಹೇಳಲಾಗಿದೆ.. 

ಹೌದು ಕನ್ನಡದ ನಟಿ ಶೃತಿಯವರು ಅಸಲಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಹೇಗೆ, ನಟಿಯಾಗಿ ಬೆಳದದ್ದು ಹೇಗೆ, ಚಿತ್ರದಲ್ಲಿ ನಟನೆ ಮಾಡಲಿಕ್ಕೆ ಅವಕಾಶ ಇವರಿಗೆ ಹೇಗೆ ಒದಗಿಬಂದಿತು ಎಂಬುದಾಗಿ ಇದೀಗ ಅವರ ತಂದೆ-ತಾಯಿ ಕೆಲ ವಿಚಾರಗಳನ್ನು ಒಂದು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಹೌದು ಶ್ರುತಿ ಅವರ ತಂದೆ ಕೃಷ್ಣ ಅವರು ಈ ಮಾಹಿತಿಯನ್ನು ನೀಡಿದ್ದು, ಶೃತಿ ಅಸಲಿಗೆ ಹೇಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಎಂಬ ವಿಚಾರ ಬಿಚ್ಚಿಟ್ಟು ಶ್ರುತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಶ್ರುತಿ ಅವರಿಗೆ ಹತ್ತು ವರ್ಷ ಆಗಿದ್ದಾಗ, ನಟ ಶಿವಣ್ಣ ಅವರು ಒಂದು ಸಿನಿಮಾ ಕಾರ್ಯಕ್ರಮದ ವಿಚಾರವಾಗಿ ಕಾರ್ಯಕ್ರಮಕ್ಕೆ ಹೆಚ್ ಡಿ ಕೋಟೆಗೆ ಆಗಮಿಸಿದ್ದರು.    

ಅಲ್ಲಿ ಚಿನ್ನೇಗೌಡರು ಕೂಡ ಆಗಮಿಸಿದ್ದು, ಅತ್ತ ಪಾರ್ವತಮ್ಮ  ಅವರು ಮೊದಲೇ ಶ್ರುತಿ ಅವರ ತಂದೆ ಕೃಷ್ಣ ಅವರಿಗೆ ಪರಿಚಯ ಇದ್ದರಂತೆ. ಅದೇ ಕಾರ್ಯಕ್ರಮಕ್ಕೆ ಶ್ರುತಿ ಅವರು ಕೂಡ ಬಂದಿದ್ದು, ಹತ್ತು ವರ್ಷ ಸಣ್ಣ ವಯಸ್ಸಿನ ಶೃತಿ ಶಿವಣ್ಣ ಅವರನ್ನು ಮಾತನಾಡಿಸಬೇಕು ಎಂದರಂತೆ. ಆಗ ಅವರ ತಂದೆ ಅದು ಆಗುವುದಿಲ್ಲ ಎಂದಾಗ, ಅಳಲು ಶುರು ಮಾಡಿದ್ದ ಶ್ರುತಿ ಅವರನ್ನು ನೋಡಿ ಶಿವಣ್ಣ ಅವರು ಕರೆದು ಮಾತನಾಡಿಸಿ ಕಳಿಸಿದರು ಎಂದು ತಿಳಿದುಬಂದಿದೆ. ನಂತರ ಇದನ್ನು ಗಮನಿಸಿದ ಚಿನ್ನೇಗೌಡ ಅವರು, ಕೃಷ್ಣ ಅವ್ರಿಗೆ, ನಿನ್ನ ಮಗಳು ತುಂಬಾ ಸುಂದರವಾಗಿ ಇದ್ದಾಳೆ. ಬೆಂಗಳೂರಿಗೆ ಕರೆದುಕೊಂಡು ಬಾ ಚಿತ್ರಗಳಲ್ಲಿ ಅಭಿನಯ ಮಾಡಿಸಿ ನೋಡೋಣ ಎಂದು ಚಿನ್ನೇಗೌಡ ಅವರು ವಜ್ರೇಶ್ವರಿಯ ಸ್ಟುಡಿಯೋಗೆ ಕರೆತರಲು ಶ್ರುತಿ ಅವರ ತಂದೆಗೆ ಹೇಳಿದ್ದಾರೆ.

ನಂತರ ಎಲ್ಲವನ್ನು ಮಾರಿ ಶ್ರುತಿ ಅವರ ತಂದೆ ಹಾಗೂ ಇಡೀ ಕುಟುಂಬ ಬೆಂಗಳೂರು ಕಡೆ ಮುಖ ಮಾಡಿತು. ಶ್ರುತಿ ಅವರ ತಂದೆ ಆಪ್ತ ಸ್ನೇಹಿತರಾದ ಶೆಣೈ ಅವರ ಸೀರಿಯಲ್ ಆದ ಪ್ರೇಮದ ಕಾರಂಜಿ ಸೀರಿಯಲ್ ನಲ್ಲಿ ಶ್ರುತಿ ಅವರ ಮೊದಲ ಅಭಿನಯ. ತದನಂತರ ಸೀರಿಯಲ್ ನಲ್ಲಿ ಶ್ರುತಿ ಅವರ ಅಭಿನಯವನ್ನು ನೋಡಿ ಶ್ರೀನಿವಾಸಮೂರ್ತಿಯವರು ಈ ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಎಂಬ ಸಿನಿಮಾದಲ್ಲಿ ಅವಕಾಶ ಕೊಟ್ಟರಂತೆ. ಬಳಿಕ ಶ್ರುತಿ ಬೆಳೆಯುತ್ತಾ ಹೋದಳು, ಹಿಂದೆ ತಿರುಗಿ ನೋಡಲೇ ಇಲ್ಲ ಎಂಬುದಾಗಿ ಇದೀಗ ಅವರ ತಂದೆ-ತಾಯಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು...