ನಟಿ ಶೃತಿಯವರು ಕಳೆದುಕೊಂಡ ಅದ್ಭುತ ಅವಕಾಶ; ಈಡೇರದ ಆಸೆಗೆ ಕಣ್ಣೀರಿಟ್ಟ ನಟಿ

By Infoflick Correspondent

Updated:Monday, April 4, 2022, 20:40[IST]

ನಟಿ ಶೃತಿಯವರು ಕಳೆದುಕೊಂಡ ಅದ್ಭುತ ಅವಕಾಶ; ಈಡೇರದ ಆಸೆಗೆ ಕಣ್ಣೀರಿಟ್ಟ ನಟಿ

90ರ ದಶಕದಲ್ಲಿ ಕನ್ನಡದ ಟಾಪ್ ನಟಿಯಾಗಿದ್ದರು ಶೃತಿ. ಅವರ ನಟನೆಗೆ ಜನ ಮರುಳಾಗಿದ್ದರು. ಅವರು ಕಣ್ಣೀರಿಟ್ಟರೆ ಪ್ರೇಕ್ಷಕರ ಕಣ್ಣಲ್ಲಿ ಕಂಬನಿಯ ಮಳೆಯೇ ಸುರಿಯುತ್ತಿತ್ತು. ಅಷ್ಟು ನೈಜ್ಯವಾಗಿ ನಟಿಸುತ್ತಾರೆ ಶೃತಿ. ಆದರೆ ಶೃತಿಯವರ ಒಂದು ಅಸೆ ಈಡೇರಲೇ ಇಲ್ಲ. ಕನಸು ನನಸಾಗಲು ಅವಕಾಶವಿತ್ತಾದರೂ ಅಂದು ಆ ಅವಕಾಶ ಕೈತಪ್ಪಿತು. ಇದರ ಬಗ್ಗೆ ನಟಿ ಶೃತಿ ಭಾವುಕರಾಗಿ ಹೇಳಿಕೊಂಡಿದ್ದಾರೆ. 

ಕನ್ನಡದ ಹೆಸರಾಂತ ನಾಯಕರಾದ, ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಶಿವಣ್ಣ, ರವಿಚಂದ್ರನ್ ಎಲ್ಲರಿಗೂ ನಾಯಕಿಯಾಗಿ ನಟಿಸಿದ್ದ ಶ್ರುತಿ ಅವತಿಗೆ ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಜೊತೆ ಅಭಿನಯಿಸಬೇಕು ಎನ್ನುವ ದೊಡ್ದ ಆಸೆ ಇತ್ತು. ಆ ಆಸೆ ನೆರವೇರುವ ಅವಕಾಶ ಒದಗಿ ಬಂದರು ಸಹ, ಅದು ಕೈತಪ್ಪಿ ಹೋಯಿತು. ಇದರ ಬಗ್ಗೆ ನಟಿ ಶ್ರುತಿ ಅವರಿಗೆ ಅಪಾರ ಬೇಸರವಿದೆ.  

“ಜೇವನಚೈತ್ರ ಸಿನಿಮಾದಲ್ಲಿ ರಾಜಕುಮಾರ್ ಅವರ ಜೊತೆ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ಅವರ ಕುಟುಂಬದ ಸದಸ್ಯೆಯ ಪಾತ್ರವನ್ನು ನನಗೆ ನೀಡಲಾಗಿತ್ತು.
ಸ್ವತಃ ಅಪ್ಪಾಜಿಯವರೆ ನನಗಾಗಿ ವಿಶೇಷ ಪಾತ್ರ ಒಂದನ್ನು ಸಿನಿಮಾದಲ್ಲಿ ಮಾಡಿಸಿದ್ದರು. ಅಪ್ಪಾಜಿಯವರೆ ಈ ಪಾತ್ರದಲ್ಲಿ ನೀನು ನಟಿಸಬೇಕು ಎಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ನಾನು ಬೇರೆ ಚಿತ್ರದ ಚಿತ್ರೀಕರಣ ಇದ್ದ ಕಾರಣ, ಡೇಟ್ಸ್ ಸಮಸ್ಯೆ ಆಗಿ ನನಗೆ ಆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದು ನಾನು ಕಳೆದುಕೊಂಡಂತಹ ಅದ್ಭುತವಾದ ಅವಕಾಶ.” ಕೊನೆಗೂ ಅಣ್ಣಾವ್ರ ಜೊತೆ ಅಭಿನಯಿಸಬೇಕು ಎನ್ನುವ ನನ್ನ ಆಸೆ ಇಡೆರಲೇಇಲ್ಲ. ಎಂದು ನಟಿ ಶ್ರುತಿ ತಮ್ಮ ಮನಸ್ಸಿನ ನಿರಾಶೆಯನ್ನು ಹೇಳಿಕೊಂಡಿದ್ದಾರೆ.