ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಮೋಡಿಗೆ ಮರುಳಾದ ಪಡ್ಡೆ ಹುಡುಗರು

By Infoflick Correspondent

Updated:Tuesday, September 6, 2022, 18:59[IST]

ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಮೋಡಿಗೆ ಮರುಳಾದ ಪಡ್ಡೆ ಹುಡುಗರು

ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಖ್ಯಾತಿಯ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಮಾರ್ಡನ್ ಉಡುಗೆಗೂ ಸೈ, ಸೀರೆ ತೊಡಲೂ ಜೈ. ಮದುವೆಯಾಗಿ ಒಂದು ಮಗುವಿನ ತಾಯಿಯಾದ ಬಳಿಕ ಶ್ವೇತಾ ಶ್ರೀವಾತ್ಸವ್ ಸಕತ್ ಬೋಲ್ಡ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ವೇತಾ ಶ್ರೀವಾತ್ಸವ್, ಆಗಾಗ ಬೋಲ್ಡ್ ಆಗಿ ಫೋಸ್ ಕೊಟ್ಟಿರುವ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ವ್ಯಾಯಾಮ, ಯೋಗ ಮಾಡುವ ರೀಲ್ಸ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಅವರು ಆಗಾಗ ಹಾಟ್ ಸಾಂಗ್ ಗಳಿಗೆ ಹಾಟ್ ಆಗಿ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇದರ ರೀಲ್ ಅನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಮೋಡಿ ಮಾಡುತ್ತಿರುತ್ತಾರೆ. 

ಇವರು ಅಪ್ ಲೋಡ್ ಮಾಡಿರುವ ವೀಡಿಯೋ ಈಗ ವೈರಲ್ ಆಗಿವೆ. ಅಭಿಮಾನಿಗಳು ಲೈಕ್ ಮಾಡುವುದರ ಜೊತೆಗೆ ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ. ಕಳೆದ ವರ್ಷ ಬೀಚ್ ನಲ್ಲಿ ತುಂಡು ಬಟ್ಟೆ ತೊಟ್ಟು ನಲಿದಾಡಿದ್ದರು. ಬೀಚ್ ನಲ್ಲಿ ರಿಲ್ಯಾಕ್ಸ್ ಆಗಿ ಎಂಜಾಯ್ ಮಾಡುವಾಗ ಫೊಟೋಗಳನ್ನು ತೆಗೆದಿದ್ದು, ಇವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಇವರ ಫೋಟೋ ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದರು. 

ಇನ್ನು ಶ್ವೇತಾ ಶ್ರೀವಾತ್ಸವ್ ಮಗುವಿನ ಜೊತೆಗೆ ಕಾಲ ಕಳೆಯುವುದರ ಜೊತೆಗೆ ಸಿನಿಮಾ ಕಡೆಗೂ ಒಲವು ತೋರಿದ್ದಾರೆ. ಹೋಪ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ಈಗ ಬಿಳಿ ಟಿ ಶರ್ಟ್‌ ತೊಟ್ಟು ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಗಳನ್ನು ಹೊಂದಿರುವ ಶ್ವೇತಾ ಶ್ರೀವಾತ್ಸವ್ ಅವರು, ಅಭಿಮಾನಿಗಳ ಜೊತೆಗೆ ಸದಾ ಸಂಪರ್ಕದಲ್ಲಿರುತ್ತಾರೆ.