Shwetha changappa : ಇನ್‌ಸ್ಟಾಗ್ರಾಂನಲ್ಲಿ ಫುಲ್‌ ಆಕ್ಟೀವ್‌ ಆಗಿರುವ ನಟಿ ಈಗ ಮಾಡಿರುವ ಹೊಸ ರೀಲ್ಸ್‌ ಯಾವುದು ನೋಡಿ..

By Infoflick Correspondent

Updated:Wednesday, July 20, 2022, 19:51[IST]

Shwetha changappa : ಇನ್‌ಸ್ಟಾಗ್ರಾಂನಲ್ಲಿ ಫುಲ್‌ ಆಕ್ಟೀವ್‌ ಆಗಿರುವ ನಟಿ ಈಗ ಮಾಡಿರುವ ಹೊಸ ರೀಲ್ಸ್‌ ಯಾವುದು ನೋಡಿ..

ಇತ್ತೀಚೆಗೆ ಈ ನಟಿ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿರುತ್ತಾರೆ. ಮದುವೆ, ಮಗು ಎಂದು ಬ್ಯುಸಿಯಾಗಿದ್ದ ಇವರು ಮತ್ತೆ ಕಿರುತೆರೆಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಅಂತ ಯೋಚಿಸೋ ಮುನ್ನ ಮುಂದಿನ ಸಾಲನ್ನು ಓದಿ. ನಟಿ, ನಿರೂಪಕಿ ಆಗಿರೋ ಶ್ವೇತಾ ಚೆಂಗಪ್ಪ. ಇವರು ಸುಮತಿಯಾಗಿ ತೆರೆ ಮೇಲೆ ಬಂದು, ಕಾದಂಬರಿಯಾಗಿ ಜನಪ್ರಿಯತೆ ಗಳಿಸಿದರು. ಅರುಂಧತಿ ಧಾರಾವಾಹಿ ಮೂಲಕ ಮನೆ ಮಾತಾದ ಶ್ವೇತಾ ಚೆಂಗಪ್ಪ, ನಿರೂಪಕಿಯಾಗಿಯೂ ಸೈ ಎನಿಸಿಕೊಂಡವರು. 

ಬಿಗ್ ಬಾಸ್ ಸೀಸನ್ 2ನಲ್ಲಿ ಸ್ಫರ್ಧಿಸಿದರು. ಡ್ಯಾನ್ಸ್ ಜೂನಿಯರ್ಸ್ ಡ್ಯಾನ್ಸ್, ಯಾರಿಗುಂಟು ಯಾರಿಗಿಲ್ಲ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ನಿರೂಪಣೆಯನ್ನು ಮಾಡಿದರು. ಇಷ್ಟೇ ಅಲ್ಲದೇ, ಕಿರುತೆರೆಗೆ ಮಾತ್ರ ಸೀಮಿತವಾಗಿರದೆ, ಸಿನಿಮಾಗಳಲ್ಲೂ ನಟಿಸಿದರು. ಡಿ ಬಾಸ್ ದರ್ಶನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರ ತಂಗಿಯಾಗಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಸೃಜನ್ ಲೋಕೇಶ್ ನಿರ್ದೇಶನದ ಮಜಾಟಾಕೀಸ್ ಕಾಮಿಡಿ ಶೋ ನಲ್ಲಿ ರಾಣಿಯಾಗಿ ಕಾಣಿಸಿಕೊಂಡು ವೀಕ್ಷಕರನ್ನು ನಗಿಸಿದರು. 

ಮಜಾ ಟಾಕೀಸ್ ಶುರುವಾದಾಗ ಎಲ್ಲರನ್ನೂ ನಗಿಸುತ್ತಿದ್ದ ಶ್ವೇತಾ ಚೆಂಗಪ್ಪ ಅವರು, ಕಿರಣ್ ಅಯ್ಯಪ್ಪ ಎಂಬುವರ ಕೈ ಹಿಡಿದರು. ಈ ಜೋಡಿಗೆ ಈಗ ಜಿಯಾನ್ ಅಯ್ಯಪ್ಪ ಎಂಬ ಮುದ್ದು ಮಗನಿದ್ದಾನೆ. ಆಗಾಗ ಶ್ವೇತಾ ಚೆಂಗಪ್ಪ ಅವರು, ಕುಟುಂಬದ ಫೋಟೋಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ  ಹಂಚಿಕೊಳ್ಳುತ್ತಿರುತ್ತಾರೆ. ಈಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೋಡಿ ನಂ.೧ ರಿಯಾಲಿಟಿ ಶೋ ಅನ್ನು ಶ್ವೇತಾ ಚೆಂಗಪ್ಪ ಅವರು ಹೋಸ್ಟ್‌ ಮಾಡುತ್ತಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಗಳನ್ನು ಮಾಡಿ ಅಪ್‌ ಲೋಡ್‌ ಮಾಡುತ್ತಿದ್ದು, ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.