ಫ್ಯಾಮಿಲಿ ಜೊತೆ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಶ್ವೇತಾ ಚೆಂಗಪ್ಪ ಫುಲ್ ಬ್ಯುಸಿ..

By Priya

Updated:Monday, March 21, 2022, 19:28[IST]

ಫ್ಯಾಮಿಲಿ ಜೊತೆ  ಬೀಚ್ ನಲ್ಲಿ   ಎಂಜಾಯ್ ಮಾಡುತ್ತಿರುವ    ಶ್ವೇತಾ ಚೆಂಗಪ್ಪ ಫುಲ್ ಬ್ಯುಸಿ..

ನಟಿ, ನಿರೂಪಕಿ ಆಗಿರೋ ಶ್ವೇತಾ ಚೆಂಗಪ್ಪ  (Swetha changappa) ಅವರು ಸುಮತಿಯಾಗಿ ತೆರೆ ಮೇಲೆ ಬಂದವರು. ಕಾದಂಬರಿಯಾಗಿ ಜನಪ್ರಿಯತೆ ಗಳಿಸಿದರು. ಅರುಂಧತಿ ಧಾರಾವಾಹಿ ಮೂಲಕ ಮನೆ ಮಾತಾದ ಶ್ವೇತಾ ಚೆಂಗಪ್ಪ, ನಿರೂಪಕಿಯಾಗಿಯೂ ಸೈ ಎನಿಸಿಕೊಂಡವರು. ಬಿಗ್ ಬಾಸ್ ಸೀಸನ್ 2ನಲ್ಲಿ ಸ್ಫರ್ಧಿಸಿದರು. ಡ್ಯಾನ್ಸ್ ಜೂನಿಯರ್ಸ್ ಡ್ಯಾನ್ಸ್, ಯಾರಿಗುಂಟು ಯಾರಿಗಿಲ್ಲ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ನಿರೂಪಣೆಯನ್ನು ಮಾಡಿದರು. ಇಷ್ಟೇ ಅಲ್ಲದೇ, ಕಿರುತೆರೆಗೆ ಮಾತ್ರ ಸೀಮಿತವಾಗಿರದೆ, ಸಿನಿಮಾಗಳಲ್ಲೂ ನಟಿಸಿದರು. .

ಡಿ ಬಾಸ್ ದರ್ಶನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರ ತಂಗಿಯಾಗಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಸೃಜನ್ ಲೋಕೇಶ್ ನಿರ್ದೇಶನದ ಮಜಾಟಾಕೀಸ್ ಕಾಮಿಡಿ ಶೋ ನಲ್ಲಿ ರಾಣಿಯಾಗಿ ಕಾಣಿಸಿಕೊಂಡು ವೀಕ್ಷಕರನ್ನು ನಗಿಸುತ್ತಿದ್ದಾರೆ. ಮಜಾ ಟಾಕೀಸ್ ಶುರುವಾದಾಗ ಎಲ್ಲರನ್ನೂ ನಗಿಸುತ್ತಿದ್ದ ಶ್ವೇತಾ ಚೆಂಗಪ್ಪ ಅವರು, ಕಿರಣ್ ಅಯ್ಯಪ್ಪ ಎಂಬುವರ ಕೈ ಹಿಡಿದರು. ಈ ಜೋಡಿ ಉತ್ತಮ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ದಂಪತಿಗೆ ಜಿಯಾನ್ ಅಯ್ಯಪ್ಪ ಎಂಬ ಮುದ್ದು ಮಗನಿದ್ದಾನೆ. ಆಗಾಗ ಶ್ವೇತಾ ಚೆಂಗಪ್ಪ ಅವರು, ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

ತಮ್ಮ ಮುದ್ದ ಮಗ ಜಿಯಾನ್ ಅಯ್ಯಪ್ಪ ಜೊತೆ ಶ್ವೇತಾ ಚೆಂಗಪ್ಪ ಆಗಾಗ ವೀಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಆ ಫೋಟೋ ಹಾಗೂ ವೀಡಿಯೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಇದೀಗ ಶ್ವೇತಾ ಚೆಂಗಪ್ಪ ಅವರು ಫ್ಯಾಮಿಲಿ ಜೊತೆ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದರ ವೀಡಿಯೋವನ್ನು ಶ್ವೇತಾ ಚೆಂಗಪ್ಪ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು, ಅಭಿಮಾನಿಗಳು ಲೈಕ್, ಕಮೆಂಟ್ ಮಾಡಿದ್ದಾರೆ..