ವಿಡೀಯೋ ಮೂಲಕ ಹಳೆ ಅಧ್ಯಾಯದ ಕುರಿತು ಮನ ಬಿಚ್ಚಿ ಮಾತನಾಡಿದ ಶ್ವೇತಾ ಶ್ರೀವಾತ್ಸವ್..! ಬೆರಗಾಗ್ತಿರ

By Infoflick Correspondent

Updated:Friday, July 29, 2022, 18:22[IST]

ವಿಡೀಯೋ ಮೂಲಕ ಹಳೆ ಅಧ್ಯಾಯದ ಕುರಿತು ಮನ ಬಿಚ್ಚಿ ಮಾತನಾಡಿದ ಶ್ವೇತಾ ಶ್ರೀವಾತ್ಸವ್..! ಬೆರಗಾಗ್ತಿರ

ಸ್ಯಾಂಡಲ್ ವುಡ್ ಬೆಡಗಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಚಿತ್ರದ ನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡ ರಕ್ಷಿತ್ ಶೆಟ್ಟಿ ಸಿನಿಮಾದ ನಟಿ ಶ್ವೇತಾ ಶ್ರೀವಾತ್ಸವ್ ಅವರು ಇದೀಗ ಅವರದೇ ಅಭಿಮಾನಿಗಳ ಬಳಗವನ್ನ ಹೆಚ್ಚು ಹೊಂದಿದ್ದಾರೆ. ಹಾಗೆ ಮದುವೆಯಾದ ಬಳಿಕ ನಟಿ ಶ್ವೇತಾ ಅವರು ಯಾವ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೆ ಇತ್ತೀಚಿಗೆ ಒಂದು ಸಿನಿಮಾದಲ್ಲಿ ನಟಿ ಕಾಣಿಸಿಕೊಂಡರು. ಶ್ವೇತಾ ಶ್ರೀವತ್ಸಾವ್ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ ಅಂದರೆ ಅದು ಕಿರುಗೂರಿನ ಗಯ್ಯಾಳಿಗಳು ಎಂದು ಹೇಳಬಹುದು. ನಟಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದು ನೀವೂ ನೋಡಿದ್ದೀರಿ. ಇತ್ತೀಚಿನ ದಿನಗಳಲ್ಲಿ ನೋಡಿದ ಹಾಗೆ ಅವರು ಮದುವೆಯಾದ ಬಳಿಕ ಹೆಚ್ಚಾಗಿ ಸಿನಿಮಾಗಳ ವಿಚಾರವಾಗಿ ಕಾಣಿಸಿರುವುದು ತುಂಬಾ ಕಡಿಮೆ.   

ಬದಲಿಗೆ ಅವರ ಮಗಳ ಜೊತೆ ಸಂತಸ ಕ್ಷಣಗಳ ಕಳೆಯುತ್ತಾ ಆಗಾಗ ಕೆಲವೊಂದಿಷ್ಟು ಫೋಟೋ ವಿಡಿಯೋಸ್ ಶೇರ್ ಮಾಡುತ್ತ ಟ್ರಿಪ್ ಗಳ ಕೈಗೊಂಡು ಮಗಳೊಟ್ಟಿಗೆ ಸಮಯ ಕಳೆದಿದ್ದಾರೆ ಶ್ವೇತಾ. ಶ್ರೀವಾತ್ಸವ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಹಾಗೆ ಅಭಿಮಾನಿಗಳಿಂದ ಕೆಲವೊಂದಿಷ್ಟು ಅಭಿಪ್ರಾಯಗಳನ್ನು ಕೂಡ ತೆಗೆದುಕೊಳ್ಳುವಲ್ಲಿ ಸದಾ ಮುಂದೆ ಇರುತ್ತಿದ್ದರೆಂದು ಹೇಳಬಹುದು. ನಟನೆ ಜೊತೆ ಡಾನ್ಸ್ ಕೂಡ ಮಾಡುತ್ತಾರೆ ಶ್ವೇತಾ ಶ್ರೀವತ್ಸಾವ್. ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹೆಚ್ಚು ಹಂಚಿಕೊಳ್ಳುವಂತ ನಟಿ. ಸದಾ ಯೋಗಗಳಲ್ಲಿ ತಲ್ಲೀನ ಆಗಿರುತ್ತಾರೆ. ಧ್ಯಾನದ ವಿಚಾರಗಳನ್ನು ಅವರ  ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ವಿಡಿಯೋಗಳನ್ನು ಹೆಚ್ಚು ಶೇರ್ ಮಾಡಿಕೊಳ್ಳುತ್ತಲೆ ಇದ್ದರು.

ಇದೀಗ ಅವರು ಮದುವೆಯಾದ ಬಳಿಕ ಮತ್ತೆ ಸಿನಿರಂಗಕ್ಕೆ ಬರಬೇಕಾದಾಗ ಏನೆಲ್ಲಾ ಪ್ರಯತ್ನಗಳು ಅವರಿಗೆ ಕಷ್ಟದ ರೂಪದಲ್ಲಿ ಕಾಣಿಸಿದವು, ಹಾಗೆ ಅದರಿಂದ ಹೇಗೆ ಅವರು ಯಶಸ್ವಿಯಾದರು ಎಂಬುದಾಗಿ ಒಂದು ಪುಸ್ತಕದ ಮೂಲಕ ನಿಮ್ಮ ಮುಂದೆ ಬರುತ್ತಿದ್ದಾರಂತೆ. ಮದುವೆಯಾದ ಮೇಲೆ ಸಿನಿಮಾರಂಗಕ್ಕೆ ಮರಳಿ ಬರಬೇಕಾದಾಗ ಏನೆಲ್ಲಾ ಯುದ್ಧ ಮಾಡಲಾಯಿತು ಎನ್ನುವ ಬಗ್ಗೆ ಪುಸ್ತಕದ ಮೂಲಕ ಕಥೆ ಹೇಳಲಿದ್ದಾರಂತೆ ಶ್ವೇತಾ. ಹೌದು ಅವರು ಹೇಳಿದ್ದು ಇಷ್ಟು.
'ನಮಸ್ಕಾರ, ಒಂದು ಮುಖ್ಯವಾದ ವಿಷಯ ತಿಳಿಸುವುದಿತ್ತು. ಮದುವೆಯಾದ ನಂತರ ಸಿನೆಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಈ ಚಿತ್ರ-ರಂಗಕ್ಕೆ ಪ್ರವೇಶ ನೀಡಿರುವ ನನ್ನ ಅಸಾಧ್ಯವಾದ ಪ್ರಯತ್ನ ದ ಕುರಿತು, ಒಂದು ಪುಸ್ತಕ ಬರೆಯುತಿದ್ದೇನೆ. ಇದರ ಮುಖ್ಯ ಉದ್ದೇಶ ಇಷ್ಟೆಯೇ, ಇಂದರಿಂದ ಯಾರಿಗಾದರೂ ಸ್ಫೂರ್ತಿ ಸಿಗಬಹುದೇನೋ ಎಂದು. ನಿಮ್ಮಲ್ಲಿ ನನ್ನನು ಕುರಿತು ಯಾವುದೇ ಪ್ರಶ್ನೆಗಳಿದ್ದರು,  [email protected] ‘ಈ email ID ಈಮೈಲ್ ಐಡಿ ಗೆ ಕಳುಹಿಸಿ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪುಸ್ತಕ ದಲ್ಲಿ ಪ್ರಕಟಿಸಲಾಗುತ್ತದೆ. (ನಿಮ್ಮ ಹೆಸರು ಅನಾಮಧೇಯವಾಗಿರಿಸಬೇಕೆಂದರೆ ಖಂಡಿತ ಅದನ್ನು ನಾವು ಗೌರವಿಸುತ್ತೇವೆ. ಎಂದಿದ್ದಾರೆ. ವಿಡಿಯೋ ನೋಡಿ ಕನ್ನಡಿಗರು ನಿಮಗೆ ಕನ್ನಡದಲ್ಲಿ ಮಾತನಾಡಲು ಕಷ್ಟ ಆಗುತ್ತ. ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿ ಕಿಡಿ ಕಾರಿದ್ದಾರೆ.. ಇಲ್ನೋಡಿ ವಿಡಿಯೋ ನೀವು ಸಹ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...