ಕೇವಲ ಹಣಕ್ಕಾಗಿ ಈ ನಟ ಮಾಡಿದ್ದೇನು ಗೊತ್ತಾ..? ಕೇಳಿದರೆ ಶಾಕ್ ಆಗುತ್ತೀರಾ ?
Updated:Thursday, April 28, 2022, 12:30[IST]

ಹಣದ ಆಸೆಗಾಗಿ ಫೇಮಸ್ ನಟರೊಬ್ಬರು ಮನೆಯಲ್ಲಿ ಜೂಜಾಟವನ್ನು ಪ್ರಾರಂಭಿಸಿದ್ದಾರೆ. ಈ ಜೂಜಾಟದಲ್ಲಿ ಹಲವು ನಟ-ನಟಿಯರು ಭಾಗಿಯಾಗಿದ್ದರು. ಹೀಗೆ ಹಣ ಸಂಪಾದಿಸುತ್ತಿದ್ದ ಆ ನಟ ಸೂಪರ್ ಆಗಿ ಜೀವನ ನಡೆಸಲು ಶುರು ಮಾಡಿದ್ದ. ಆ ನಟನ ಹೆಸರುಶ್ಯಾಮ್. ಹೌದು ಬಹುಭಾಷಾ ನಟ ಶ್ಯಾಮ್ ಈಗ ಪೊಲೀಸರ ಅಥಿತಿಯಾಗಿದ್ದಾರೆ. ಮನೆಯಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ, ಶ್ಯಾಮ್ ಸೇರಿದಂತೆ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನ ನುಂಗಂಬಕ್ಕಂನಲ್ಲಿರುವ ಶ್ಯಾಮ್ ಅವರ ಅಪಾರ್ಟ್ಮೆಂಟ್ನಲ್ಲಿ ಕಳೆದ ಕೆಲ ತಿಂಗಳಿಂದ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ನಡೆಸಲಾಗುತ್ತಿತ್ತಂತೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರಾತ್ರಿ ದಾಳಿ ನಡೆಸಿದ್ದಾರೆ. ಈಗಾಗಲೇ ಪೊಲೀಸರು 13 ಜನರನ್ನು ಬಂಧಿಸಿದ್ದಾರೆ. ಶ್ಯಾಮ್ ಮನೆಯಲ್ಲಿದ್ದ ಜೂಜಾಟದ ವಸ್ತುಗಳನ್ನು ಹಾಗೂ ಅವರ ಮನೆಯಲ್ಲಿದ್ದ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಅಪಾರ್ಟ್ಮೆಂಟ್ಗೆ ಕೆಲ ಚಿತ್ರನಟರುಆಗಾಗ ಭೇಟಿ ನೀಡುತ್ತಿದ್ದರು. ಅವರೆಲ್ಲರೂ ಕೂಡ ಬೆಟ್ಟಿಂಗ್ ಗಾಗಿಯೇ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಶ್ಯಾಮ್ ಮೂಲತಃ ತಮಿಳುನಾಡಿನ ಮಧುರೈನವರು. ವಿದ್ಯಾಭ್ಯಾಸಕ್ಕಾಗಿ ಶ್ಯಾಮ್ ಅವರ ಬೆಂಗಳೂರಿನಲ್ಲಿ ನೆಲೆಸಿದ್ದರು.
ಬಳಿಕ ಖುಷಿ ಚಿತ್ರದ ಮೂಲಕ ಶ್ಯಾಮ್ ಕಾಲಿವುಡ್ ಸಿನಿ ರಂಗಕ್ಕೆ ಎಂಟ್ರಿ ನೀಡಿದ್ದರು. ಇದಾದ ಬಳಿಕ ಸಾಲು ಸಾಲಾಗಿ ತಮಿಳು ಸಿನಿಮಾಗಳಲ್ಲಿ ನಟಿಸಿದರು. ಕವಿತಾ ಲಂಕೇಶ್ ಅವರ ನಿರ್ದೇಶನದ ತನನಂ ತನನಂ ಚಿತ್ರದಲ್ಲ್ಲೂ ಶ್ಯಾಮ್ ಅವರು ನಟಿಸಿ ಈ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನು ಅರ್ಜುನ್ ಸರ್ಜಾ ಜೊತೆ ಗೇಮ್ ಎಂಬ ಸಿನಿಮಾ ಮತ್ತು ಯಶ್ ನಟನೆಯ ಸಂತು ಸ್ಟ್ರೇಟ್ ಫಾರ್ವರ್ಡ್ ಚಿತ್ರದಲ್ಲೂ ಶ್ಯಾಮ್ ನಟಿಸಿದ್ದಾರೆ. ಇನ್ನು ತೆಲುಗಿನ ಕಿಕ್ ಮತ್ತು ರೇಸುಗುರ್ರಂ ಸಿನಿಮಾಗಳಲ್ಲೂ ನಟಿಸಿದ್ದಾರೆ.