ಸೈಡ್ ಡ್ಯಾನ್ಸರ್ ಆಗಿದ್ದ ಈ ನಟಿಯರು ಇಂದು ಸ್ಟಾರ್ ನಟಿಯರಂತೆ..! ಯಾರೆಂದು ಬೆರಗಾಗ್ತಿರ ವಿಡೀಯೋ ನೋಡಿ

By Infoflick Correspondent

Updated:Thursday, August 18, 2022, 22:50[IST]

ಸೈಡ್ ಡ್ಯಾನ್ಸರ್ ಆಗಿದ್ದ ಈ ನಟಿಯರು ಇಂದು ಸ್ಟಾರ್ ನಟಿಯರಂತೆ..!  ಯಾರೆಂದು ಬೆರಗಾಗ್ತಿರ ವಿಡೀಯೋ ನೋಡಿ

ಈ ಸಿನಿಮಾ ಅಂದ್ರೆ ಹಾಗೆನೆ ಯಾವಾಗ ಯಾವ ಕಲಾವಿದರ ಜೀವನವು ಅದೇಷ್ಟರ ಮಟ್ಟದಲಿ ಹೇಗೆ ಬದಲಾಗುತ್ತದೆ ಎಂದು ನಾವು ಹೇಳಲಿಕ್ಕಾಗದು. ಈ ಸಿನಿಮಾ ರಂಗದಲ್ಲಿ ಬೆಳೆಯಬೇಕು ಅಂದರೆ ಅಷ್ಟು ಸುಲಭ ಮಾತಾಗಿರುವುದಿಲ್ಲ. ಪ್ರತಿಯೊಂದು ಇಡುವ ಹೆಜ್ಜೆ ಮುಳ್ಳಿನ ಹಾಸಿಗೆ ಮೇಲೆಯೇ ಇದ್ದಂತೆ ಇರುತ್ತದೆ. ಆದರೆ ಕೆಲವರ ಹಣೆಬರಹ ಚೆನ್ನಾಗಿದ್ದರೆ ಸ್ಟಾರ್ ಗಿರಿ ಅನ್ನುವುದು ಕಷ್ಟಪಡದೆನೆ ಕೆಲವರಲ್ಲಿ ಬಂದು ಉಳಿದಿದೆ. ಇನ್ನೂ ಕೆಲವರು ಆ ಸ್ಥಾನಕ್ಕಾಗಿ ಅದೆಷ್ಟು ಕಷ್ಟ ಪಟ್ಟಿದ್ದಾರೆ ಎಂದು ಈಗಾಗಲೇ ಸಾಕಷ್ಟು ನಿದರ್ಶನಗಳನ್ನ ಸಾಕಷ್ಟು ಕಾರ್ಯಕ್ರಮಗಳ ಮೂಲಕ ತಿಳಿದುಕೊಂಡಿದ್ದೇವೆ. ಹೌದು ಇಂದಿನ ಕೆಲ ಸ್ಟಾರ್ ನಟಿಯರು ಒಂದಾನೊಂದು ಕಾಲದಲ್ಲಿ ಮಾಡುತ್ತಿದ್ದ ಕೆಲಸ ಹೇಗಿತ್ತು, ಜೊತೆಗೆ ಅವರು ಯಾವ ರೀತಿ ಸೈಡ್ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ಇಂದು ಯಾವ ರೀತಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಅವರು ಯಾರು ಎಂಬುದಾಗಿ ಈ ಲೇಖನದ ಮೂಲಕವೇ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಮುಂದೆ ಓದಿ.

ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ಹಿಂದಿ, ಮತ್ತು ಇನ್ನೂ ಬೇರೆ ಬೇರೆ ಚಿತ್ರರಂಗದಲ್ಲೂ ಕೂಡ ಆರಂಭದಲ್ಲಿ ಸೈಟ್ ಡ್ಯಾನ್ಸರ್ ಆಗಿ ನಟನೆ ಮಾಡುತ್ತಿದ್ದರು. ಅಂತಹವರ ಬಗ್ಗೆ ನೋಡುವುದಾದರೆ ಮೊದಲಿಗೆ ಶೃತಿ ಹರಿಹರನ್. ಹೌದು ಲೂಸಿಯಾ ಸಿನಿಮಾ ಮೂಲಕ ಕನ್ನಡಿಗರಿಗೆ ಮನೆ ಮತದಾರು. ಇವರು ತುಪ್ಪ ಬೇಕಾ ತುಪ್ಪ ಎನ್ನುವ ತುಪ್ಪದ  ಹಾಡಿನಲ್ಲಿ ನಟಿ ರಾಗಿಣಿ ಅವರ ಹಿಂದೆ ಶೃತಿ ಹರಿಹರನ್ ಅವರು ಹೆಜ್ಜೆ ಹಾಕಿದ್ದರು. ಅದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ನಂತರ ಲೂಸಿಯಾ, ಮಾರುತಿ  800, ಹಾಗೆ ಇನ್ನು ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಇಂದು ಸ್ಟಾರ್ ನಟಿಯಾಗಿ ಶ್ರುತಿ ಹರಿಹರನ್ ಅವರು ಹೊರಹೊಮ್ಮಿದ್ದಾರೆ ಎನ್ನಬಹುದು.   

ನಟಿ ಐಂದ್ರಿತಾ ರೈ ಅವರು ಕೂಡ ಮನಸಾರೆ ಎನ್ನುವ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು. ಆದರೆ ಇವರು ಕೂಡ ಒಂದಾನೊಂದು ಕಾಲದಲ್ಲಿ ಸೈಡ್ ಡ್ಯಾನ್ಸರ್ ಆಗಿಯೇ ಡ್ಯಾನ್ಸ್ ಮಾಡುತ್ತಿದ್ದವರಂತೆ. ನಂತರ ಕಾಜಲ್ ಅಗರ್ವಾಲ್ ಇವರು ಕೂಡ ಅಮಿತಾ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಿನಿಮಾ ಒಂದರಲ್ಲಿ ಹಿಂದೆ ಡ್ಯಾನ್ಸರ್ ಆಗಿ ಕುಣಿದ ನಟಿ ಇಂದು ಸ್ಟಾರ್ ನಟಿ ಆಗಿ ಹೊರ ಹೊಮ್ಮಿರುವುದು ಖುಷಿ ವಿಚಾರ. ಜೊತೆಗೆ ಗಟ್ಟಿಮೇಳ ಖ್ಯಾತಿಯ ನಟಿ ನಿಶಾ ಸಹ ನಾಗತಿಹಳ್ಳಿ ಚಂದ್ರಶೇಖರ್ ಅವರ ಒಂದು ಚಿತ್ರದ ಹಾಡಿನಲ್ಲಿ ಸೈಡ್ ಡ್ಯಾನ್ಸರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಕೂಡ ಸಾಕಷ್ಟು ನಟಿಯರು ಇದ್ದು ಇಂದು ಸ್ಟಾರ್ ನಟಿಯಾಗಿ ಮೆರೆಯುತ್ತಿರುವವರು ಈ ಹಿಂದೆ ಸೈಡ್ ಡ್ಯಾನ್ಸರ್ ಆಗಿದ್ದರು. ಈ ವಿಡಿಯೋ ನೋಡಿ. ಮತ್ತು ವಿಡಿಯೋ ನೋಡಿದ ಬಳಿಕ ನಿಮಗೂ ಕೂಡ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ ಧನ್ಯವಾದ.. ( VIDEO CREDIT ; JAGUAR ROCKY }