Silk Smitha : ಸಿಲ್ಕ್ ಸ್ಮಿತಾ ಸಾವಿಗು ಮುಂಚೆ ಬರೆದ ಪತ್ರ ವೈರಲ್! ಇದರಲ್ಲಿ ಏನಿದೆ ಗೊತ್ತೆ ?

By Infoflick Correspondent

Updated:Sunday, July 10, 2022, 12:07[IST]

Silk Smitha : ಸಿಲ್ಕ್ ಸ್ಮಿತಾ ಸಾವಿಗು ಮುಂಚೆ  ಬರೆದ ಪತ್ರ ವೈರಲ್! ಇದರಲ್ಲಿ ಏನಿದೆ ಗೊತ್ತೆ ?

ಒಂದು ಕಾಲದಲ್ಲಿ ಕನ್ನಡ, ತೆಲುಗು ಸೇರಿದಂತೆ ಇಡೀ ದಕ್ಷಿಣದ ಸಿನಿರಂಗವನ್ನೇ ಆಳಿದ ನಟಿ ಸಿಲ್ಕ್​ ಸ್ಮಿತಾ. ಎಷ್ಟು ಬೇಗ ಯಶಸ್ಸಿನ ಉತ್ತುಂಗವೇರಿದರೋ ಅಷ್ಟೇ ವೇಗವಾಗಿ ನೆಲಕಚ್ಚಿದ ಸ್ಮಿತಾರ ಜೀವನ ಮೇಲೆ ಸಿನಿಮಾ ಸಹ ತೆಗೆಯಲಾಯಿತು. ಅದೇ ದರ್ಟಿ ಪಿಕ್ಚರ್​. ವಿದ್ಯಾಬಾಲನ್​ ನಟನೆಯ ಈ ಸಿನಿಮಾ ಸೂಪರ್ ಹಿಟ್​ ಆಯಿತು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸಿಲ್ಕ್​ ಸ್ಮಿತಾ ಇದ್ದಕ್ಕಿದ್ದಂತೆ ಒಂದು ದಿನ ಆತ್ಮಹತ್ಯೆಗೆ ಶರಣಾದರು. ಚೆನ್ನೈನ ತನ್ನ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಈ ನಟಿಯ  ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿ ಉಳಿದಿದೆ. ಖಿನ್ನತೆಯಿಂದಾಗಿ ಆಕೆ  ತನ್ನ ಜೀವವನ್ನು ತೆಗೆದುಕೊಂಡಳು ಎಂದು ಕೆಲವರು ನಂಬುತ್ತಾರೆ. ಸಿಲ್ಕ್ ಸ್ಮಿತಾ ಸಾಯುವ ಮುನ್ನ ಬರೆದಿದ್ದಾರೆ ಎಂಬ ಪತ್ರವೊಂದು ಈಗ ಇಂಟರ್​​​ನೆಟ್​​​​ನಲ್ಲಿ ವೈರಲ್ ಆಗುತ್ತಿದೆ. ಸಿಲ್ಕ್ ಸ್ಮಿತಾ ತೆಲುಗಿನಲ್ಲಿ ಈ ಪತ್ರ ಬರೆದಿದ್ದಾರೆ.   

 ''ನಾನು ನಟಿಯಾಗಲು ಎಷ್ಟು ಕಷ್ಟಪಟ್ಟೆ ಎಂಬುದು ನನಗೆ ಮಾತ್ರ ಗೊತ್ತು. ನನ್ನನ್ನು ಯಾರೂ ಪ್ರೀತಿಸುವುದಿಲ್ಲ. ಬಾಬು ಮಾತ್ರ ನನಗೆ ಸ್ವಲ್ಪ ಮಟ್ಟಿನ ಪ್ರೀತಿ ತೋರಿಸುತ್ತಿದ್ದರು. ಎಲ್ಲರೂ ನನ್ನನ್ನು ದುರ್ಬಳಕೆ ಮಾಡಿಕೊಂಡರು. ನನಗೆ ಜೀವನದಲ್ಲಿ ಬಹಳ ಆಸೆಗಳಿತ್ತು. ಅದನ್ನು ಈಡೇರಿಸಿಕೊಳ್ಳಲು ಬಹಳ ಪ್ರಯತ್ನಿಸಿದೆ. ಆದರೆ ನಾನು ಎಲ್ಲಿ ಹೋದರೂ ನನಗೆ ನೆಮ್ಮದಿ ಇರಲಿಲ್ಲ. ಎಲ್ಲರ ವರ್ತನೆಯಿಂದ ನನಗೆ ಬಹಳ ತೊಂದರೆಯಾಗುತ್ತಿತ್ತು. ಆದ್ದರಿಂದಲೇ ಸಾಯಲು ನಿರ್ಧಾರ ಮಾಡಿದ್ದೇನೆ. ದೇವರೇ ನ್ಯಾಯ ಎಲ್ಲಿದೆ..? ನಾನು ಬಾಬುನನ್ನು ಬಹಳ ಪ್ರಾಮಾಣಿಕತೆಯಿಂದ ಪ್ರೀತಿಸಿದೆ. ಅವನು ನನಗೆ ಎಂದಿಗೂ ಮೋಸ ಮಾಡುವುದಿಲ್ಲ ಎಂದು ನಂಬಿದ್ದೆ. ಆದರೆ ಆತ ಕೂಡಾ ನನಗೆ ಮೋಸ ಮಾಡಿದ.''

ದೇವರು ಇದ್ದಾನೆ ಎಂದಾದರೆ, ಅವನು ಬಾಬುಗೆ ಶಿಕ್ಷೆ ನೀಡುತ್ತಾನೆ. ಅವನು ನನಗೆ ಮಾಡಿದ ದೌರ್ಜನ್ಯವನ್ನು ನಾನು ಎಂದಿಗೂ ಸಹಿಸಿಕೊಳ್ಳಲು ಆಗುವುದಿಲ್ಲ. ಅದು ನನಗೆ ಪ್ರತಿದಿನ ನೋವು ಕೊಡುತ್ತಿತ್ತು. ಆತ ನನ್ನ ಒಡವೆಗಳನ್ನು ಹಿಂತಿರುಗಿಸಿ ನೀಡಲಿಲ್ಲ. ದೇವರು ನನ್ನನ್ನ ಏಕೆ ಸೃಷ್ಟಿಸಿದನೋ...? ರಾಮು ಹಾಗೂ ರಾಧಾಕೃಷ್ಣನಿಗೆ ನಾನು ಬಹಳ ಸಹಾಯ ಮಾಡಿದ್ದೆ. ಆದರೆ ಅವರೇ ನನ್ನನ್ನು ಸಾವಿನ ದವಡೆಗೆ ತಳ್ಳಿದರು. ಬಹಳ ಮಂದಿ ನನ್ನ ದೇಹವನ್ನು ಬಳಸಿಕೊಂಡರು. ಕೆಲವರು ನನ್ನ ಕೆಲಸದಿಂದ ಒಳ್ಳೆ ಲಾಭ ಮಾಡಿಕೊಂಡರು. ಆದರೆ ನಾನು ಬಾಬುವನ್ನು ಹೊರತುಪಡಿಸಿ ಬೇರೆ ಯಾರ ಬಗ್ಗೆಯೂ ಯೋಚಿಸಲಿಲ್ಲ. ಆತ ನನಗೊಂದು ಒಳ್ಳೆ ಜೀವನ ಕೊಡುತ್ತಾನೆ ಎಂದು ಕಾದಿದ್ದೆ. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿದಾಗ ನನಗೆ ಇನ್ನು ಸಹಿಸಲು ಸಾಧ್ಯವಾಗಲಿಲ್ಲ. ಈ ಪತ್ರ ಬರೆಯಲು ಕೂಡಾ ನನಗೆ ಬಹಳ ಕಷ್ಟವಾಗುತ್ತಿದೆ'' ಎಂದು ಈ ಪತ್ರದಲ್ಲಿ ಬರೆಯಲಾಗಿದೆ.

ಇದು ಸಿಲ್ಕ್ ಸ್ಮಿತಾ ಅವರೇ ಬರೆದ ಡೆತ್ ನೋಟ್ ಎಂದು ಹೇಳಲಾಗುತ್ತಿದೆಯಾದರೂ, ಇಷ್ಟು ವರ್ಷಗಳ ಕಾಲ ಏಕೆ ಬಹಿರಂಗಗೊಳ್ಳಲಿಲ್ಲ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.