Sini Shetty : ಫೆಮಿನಾ ಮಿಸ್‌ ಇಂಡಿಯಾ 2022 ಕಿರೀಟ ತೊಟ್ಟ ಉಡುಪಿ ಬೆಡಗಿ ಸಿನಿ ಶೆಟ್ಟಿ ಯಾರು ಗೊತ್ತಾ..?

By Infoflick Correspondent

Updated:Monday, July 4, 2022, 18:57[IST]

Sini Shetty : ಫೆಮಿನಾ ಮಿಸ್‌ ಇಂಡಿಯಾ 2022 ಕಿರೀಟ ತೊಟ್ಟ  ಉಡುಪಿ ಬೆಡಗಿ ಸಿನಿ ಶೆಟ್ಟಿ  ಯಾರು ಗೊತ್ತಾ..?

ಫೆಮಿನಾ ಮಿಸ್ ಇಂಡಿಯಾ 2022 ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ (Sini Shetty) ನಮ್ಮ ಕರ್ನಾಟಕದ ಬೆಡಗಿ. ಈ ಸುಂದರಿ ಕರ್ನಾಟಕದ ಉಡುಪಿ ಮೂಲದವರು. ಸಿನಿ ಶೆಟ್ಟಿ ಈಗ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದು, ಎಲ್ಲರೂ ಸಿನಿ ಶೆಟ್ಟಿ ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಸಿನಿ ಶೆಟ್ಟಿ ಅವರು ರಾತ್ರೋ ರಾತ್ರಿ ಫೇಮಸ್‌ ಆಗಿದ್ದಾರೆ. ಸಿನಿ ಶೆಟ್ಟಿ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಹಾಗೂ ಅವರ ಇತರ ವಿಚಾರಗಳನ್ನು ಎಲ್ಲದರ ಬಗ್ಗೆಯೂ ನಾವಿಲ್ಲಿ ತಿಳಿಯೋಣ ಬನ್ನಿ. 

ಸಿನಿ ಶೆಟ್ಟಿ ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಇನ್ನಂಜೆ ಎಂಬಲ್ಲಿಯವರು. ಆದರೆ ಸಿನಿ ಶೆಟ್ಟಿ ಅವರು ಹುಟ್ಟಿದ್ದು ಮುಂಬೈನಲ್ಲಿ. ಆಗಾಗ ಕೆಲ ಕೌಟುಂಬಿಕ ಸಮಾರಂಬಗಳಿಗಾಗಿ ಉಡುಪಿಗೆ ಬಂದು ಹೋಗುತ್ತಿರುತ್ತಾರೆ. ಮುಂಬೈನ ಸೇಂಟ್ ಡೊಮಿನಿಕ್ ಸವಿಯೋ ಎಂಬ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ಬಳಿಕ ಅಕೌಂಟಿಂಗ್ ಅಂಡ್ ಫೈನಾನ್ಸ್ ನಲ್ಲಿ ಸಿನಿ ಶೆಟ್ಟಿ ಅವರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಈಗ ಸಿನಿ ಶೆಟ್ಟಿ ಅವರು ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ಟ್ ಕೋರ್ಸ್ ಅನ್ನು ಓದುತ್ತಿದ್ದಾರೆ. ಸಿನಿ ಶೆಟ್ಟಿ ಅವರು ಓದುವುದರ ಜೊತೆಗೆ ನೃತ್ಯವನ್ನೂ ಕಲಿತಿದ್ದಾರೆ. 

ತಮ್ಮ 4ನೇ ವಯಸ್ಸಿನಲ್ಲೇ ನೃತ್ಯ ಆರಂಭಿಸಿದ ಸಿನಿ ಶೆಟ್ಟಿ ಅವರು ಅವರು 14ನೇ ವಯಸ್ಸಿನಲ್ಲಿ ಅರಂಗ್ರೇಟಂ ಮಾಡಿದ್ದರು. ಇನ್ನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸಿನಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ನಿನ್ನೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ ನಲ್ಲಿ ಫುನಾಲೆ ನಡೆದಿತ್ತು. ಇದರಲ್ಲಿ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಸಿನಿ ಅವರು 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದಕ್ಕೂ ಮುನ್ನ ಸಿನಿ ಅವರು ರಾಜಸ್ಥಾನದ ರೂಬಲ್ ಶೇಕಾವತ್ ಫಸ್ಟ್ ರನ್ನರಪ್ ಆಗಿದ್ದರು. ಇದರ ಜೊತೆಗೆ ಉತ್ತರ ಪ್ರದೇಶದ ಶಿಂತಾನಾ ಚೌಹಾಣ್ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.( video credit : inside pageant )