ಕನ್ನಡದ ಖ್ಯಾತ ನಿರೂಪಕಿಯ ಮದುವೆ ಸುದ್ದಿ ಬಹಿರಂಗ..! ಅಸಲಿಗೆ ಮದುವೆ ಯಾವಾಗಾಯ್ತು ಗೊತ್ತಾ..?
Updated:Monday, May 30, 2022, 12:49[IST]

ಕನ್ನಡ ಕಿರುತೆರೆಯಲ್ಲಿ ಕಳೆದ ಕರೋನ ಸಂದರ್ಭದಿಂದ ಹಿಡಿದು ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತಿವೆ. ಕನ್ನಡದ ಖ್ಯಾತ ನಟ-ನಟಿಯರು ಸಾಲುಸಾಲಾಗಿ ಕಳೆದ 2 ವರ್ಷದಿಂದ ಮದುವೆಯಾಗಿದ್ದಾರೆ. ಚಂದನ್-ನಿವೇದಿತಾ, ಚಂದನ್ ಚಿನ್ನು ಕನ್ನಡದ ನಟಿ ಮಯೂರಿ ಜೊತೆಗೆ ದೊಡ್ಡ ಪರದೆಯ ನಟ ನಿಖಿಲ್ ಅವರು ಕೂಡ ಮದುವೆಯಾಗಿ ಹೆಚ್ಚು ಸುದ್ದಿಯಾಗಿದ್ದರು. ಅದೇ ರೀತಿ ಇದೀಗ ಇನ್ನೊಬ್ಬ ಕನ್ನಡದ ಖ್ಯಾತ ನಿರೂಪಕಿ ಸಹ ಮದುವೆಯಾಗಿರುವ ಸುದ್ದಿ ಬಹಿರಂಗವಾಗಿದೆ. ಆದರೆ ಮದುವೆ ಆಗಿರುವುದು ಈಗ ಅಲ್ಲ ಬದಲಿಗೆ ಆರು ತಿಂಗಳ ಹಿಂದೆಯೇ ಎಂದು ಕೇಳಿ ಬರುತ್ತಿದೆ. ನಟಿ ಮತ್ತು ನಿರೂಪಕಿಯ ಮದುವೆಯ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಕಂಡು ಬಂದಿದ್ದು ಅವರ ಸ್ನೇಹಿತರು, ಅಭಿಮಾನಿ ಬಳಗದವರು ಶುಭಾಶಯ ಕೋರುತ್ತಿದ್ದಾರೆ.
ಕನ್ನಡ ಕಿರುತೆರೆ ಖ್ಯಾತ ರಿಯಾಲಿಟಿ ಶೋ ಆಗಿದ್ದ ಕನ್ನಡದ ಕೋಗಿಲೆ ಕಾರ್ಯಕ್ರಮದ ಮೂಲಕ ನಿರೂಪಣೆಯನ್ನು ಆರಂಭಿಸಿದ ನಟಿ ಸಿರಿ ರವಿಕುಮಾರ್ ಅವರು ಮುಂಚೆಯೇ ರೇಡಿಯೋ ಜಾಕಿಯಲ್ಲಿ ಕೆಲಸ ಮಾಡಿದವರು.. ತದನಂತರ ಕನ್ನಡದ ಕೋಗಿಲೆಯಲ್ಲಿ ನಿರೂಪಕಿಯಾಗಿ ಕಾಣಿಸಿದರು. ಹೌದು ಇದೀಗ ನಟಿ ಸಿರಿ ಅವರು ರಕ್ಷಿತ್ ಶೆಟ್ಟಿ ನಿರ್ಮಾಣದ ಸಹ ಕುಟುಂಬ ಸಮೇತ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಸಿರಿ ರವಿಕುಮಾರ್ ಬೆಂಗಳೂರಿನಲ್ಲಿ ಕೆಲಸ ಮಾಡುವ ಇಂಜಿನಿಯರ್ ಮಹರ್ಷಿ ಎನ್ನುವವರ ಜೊತೆಗೆ ವಿವಾಹವಾಗಿದ್ದಾರೆ. ಸಿರಿ ಅವರ ಮದುವೆ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿವೆ ನೋಡಿ.
ಇಷ್ಟು ದಿನ ಈ ವಿಷಯವನ್ನು ಎಲ್ಲಿಯೂ ಕೂಡ ಪ್ರಸ್ತಾಪ ಮಾಡರಲಿಲ್ಲ ಸಿರಿ ಅವರು, ಅದಕ್ಕೆ ಕಾರಣ ಕೂಡ ಇದೆ ಎನ್ನಲಾಗುತ್ತಿದೆ. ಯಾವುದೇ ಸಿನಿಮಾರಂಗದಲ್ಲಿ ಆಗಲಿ ಬೇಗನೆ ಮದುವೆಯಾಗಿದೆ ಎನ್ನುವ ಸುದ್ದಿ ಹೊರಬಿದ್ದರೆ, ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ವಾಡಿಕೆಯಿದೆ. ಇಲ್ಲಿವೆ ನೋಡಿ ಸಿರಿ ರವಿಕುಮಾರ ಮದುವೆ ಫೋಟೋಸ್ ಹಾಗೆ ಜೋಡಿಗೆ ಶುಭಕೋರಿ ಧನ್ಯವಾದ.