ಅಪ್ಪು ಪುನರ್ಜನ್ಮ ಆಗುತ್ತದೆ ಎಂದು ಇಂಚಿಂಚಾಗಿ ಕಥೆ ಬಿಚ್ಚಿಟ್ಟ ಬಾಲಕ..! ಈಗ ವಿಡಿಯೋ ವೈರಲ್
Updated:Sunday, March 20, 2022, 11:22[IST]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಜೇಮ್ಸ್ ನೆನ್ನೆ ಅವರ ಹುಟ್ಟು ಹಬ್ಬದ ದಿವಸವೇ ಇಡೀ ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಈ ಜೇಮ್ಸ್ ಚಿತ್ರವನ್ನು ನೋಡಲು ಬಂದ ಲಕ್ಷಾಂತರ ಅಭಿಮಾನಿಗಳು ಅಪ್ಪು ಅವರನ್ನು ತೆರೆಯ ಮೇಲೆ ನೋಡುತ್ತಿದ್ದಂತೆ ಒಂದು ಕಡೆ ಖುಷಿ ಪಟ್ಟರೆ ಇನ್ನೊಂದು ಕಡೆ ತೀರಾ ದುಃಖ ನೋವು ಅನುಭವಿಸಿದರು. ಮತ್ತೆಂದು ಅಪ್ಪು ಸಿನಿಮಾವನ್ನು ನಾವು ತೆರೆಮೇಲೆ ನೋಡಲು ಆಗುವುದಿಲ್ಲವಲ್ಲ ಎನ್ನುವ ನೋವೇ ಈಗಲೂ ಹೆಚ್ಚು ಕಾಡುತ್ತಿದೆ. ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ನೋಡಿ ಬಂದ ಪ್ರತಿಯೊಬ್ಬರು ಕೂಡ ಕಣ್ಣೀರು ಹಾಕುತ್ತಲೆ ಹೊರನಡೆದರು. ಮಾತುಗಳೇ ಬರುತ್ತಿಲ್ಲ ಎಂದು ಇನ್ನು ಕೆಲವರು ತೀರಾ ನೋವನ್ನು ವ್ಯಕ್ತಪಡಿಸಿದರು.
ಹೌದು ನಟ ಪುನೀತ್ ಅವರ ಸಮಾಧಿ ಬಳಿ ಈಗಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರತಿದಿನ ಬಂದು ಹೋಗುತ್ತಿದ್ದಾರೆ. ಪುನೀತ್ ಅವರನ್ನು ನೆನೆದು ಕಣ್ಣೀರು ಇಡುತ್ತಿದ್ದಾರೆ. ಹೀಗಿರುವಾಗ ನಟ ಪುನೀತ್ ಅವರ ಅದೇ ಸಮಾಧಿ ಬಳಿ ಕುಶಾಲ್ ಚಂದ್ರ ಎನ್ನಲಾದ ಅಪ್ಪು ಸಾರ್ ಅವರ ಪುಟ್ಟ ಅಭಿಮಾನಿ ಬಾಲಕ, ನಟ ಪುನೀತ್ ಅವರ ಪುನರ್ಜನ್ಮ ಕಥೆಯನ್ನು ಹೇಳಿ ಎಲ್ಲರಿಗೂ ಒಂದು ಕ್ಷಣ ಶಾಕ್ ನೀಡಿದ್ದಾನೆ. ಪುನೀತ್ ಅವರು ಬದುಕಿದ್ದಾಗ ಮಾಡಿದಂತಹ ಪ್ರತಿಯೊಂದು ಕೆಲಸ, ಸಹಾಯ ಹಾಗೂ ಸಿನಿಮಾದಲ್ಲಿಯ ಅಪ್ಪು ವೈಭವ ಎಲ್ಲವನ್ನೂ ಇಂಚಿಂಚಾಗಿ ಈ ಬಾಲಕ ಹೇಳಿ ದೇವರು ತುಂಬಾ ತಪ್ಪು ಮಾಡಿಬಿಟ್ಟ ಎಂದಿದ್ದಾನೆ.
ಜೊತೆಗೆ ಕೊನೆಯಲ್ಲಿ ಕಥೆಯನ್ನು ಪೂರ್ತಿ ಹೇಳಿದ್ದು, ನಾನು ಹೇಳುವ ಮಾತುಗಳಲ್ಲಿ ಸತ್ಯ ಇದ್ದರೆ, ನನ್ನನ್ನು ರಾಕ್ ಲೈನ್ ವೆಂಕಟೇಶ್ ಅಂಕಲ್ ಬಳಿ ಕರೆದುಕೊಂಡು ಹೋಗಿ, ಅಪ್ಪು ಅವರ ಪೂರ್ತಿ ಪುನರ್ಜನ್ಮ ಕಥೆಯನ್ನು ಹೇಳುತ್ತೇನೆ ಎಂದು ಮಾತನಾಡಿದ್ದಾನೆ. ಈ ಪುಟ್ಟ ಮಗು ಕೂಡ ಅಪ್ಪು ಅವರ ಅಭಿಮಾನಿಯಾಗಿದ್ದು ಇದೀಗ ಈ ವಿಡಿಯೋ ಸಹ ಎಲ್ಲೆಡೆ ವೈರಲ್ ಆಗುತ್ತಿದೆ... (Video credit : power tv news )