Sonu Sood: ಜನರ ಕಷ್ಟ ಪರಿಹರಿಸುತ್ತಿರುವ ಸೋನು ಸೂದ್ ಗೆ ಸಹಾಯ ಮಾಡಲು ಅಷ್ಟು ಹಣ ಎಲ್ಲಿಂದ ಬರುತ್ತಿದೆ ಗೊತ್ತಾ..?

By Infoflick Correspondent

Updated:Thursday, May 12, 2022, 14:13[IST]

Sonu Sood:  ಜನರ ಕಷ್ಟ ಪರಿಹರಿಸುತ್ತಿರುವ ಸೋನು ಸೂದ್ ಗೆ ಸಹಾಯ ಮಾಡಲು ಅಷ್ಟು ಹಣ ಎಲ್ಲಿಂದ ಬರುತ್ತಿದೆ ಗೊತ್ತಾ..?

ಕೊರೊನಾ ಸಂಕಷ್ಟ ಕಾಲದಲ್ಲಿ ದೇವರಂತೆ ಬಂದ ಸೋನು ಸೂದ್ ಕಾರ್ಯಕ್ಕೆ ಇಡೀ ಜಗತ್ತೆ ಅವರನ್ನು ಕೊಂಡಾಡುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರೂ ಜನರಿಗೆ ರಕ್ಷಾ ಕವಚವಾಗಿನಿಂತ ಮನವತವಾದಿ ಸೋನು ಸೂದ್. ದಿಕ್ಕೇ ತೋಚದ ಸ್ಥಿತಿಯಲ್ಲಿದ್ದ ಸಾಮಾನ್ಯರಿಗೆ ಅಸಾಮಾನ್ಯನಾಗಿ ನಿಂತು ಸೇವೆ ಮಾಡಿದರು. ಮುಂಬೈನ ಸೋನು ಸೂದ್ ಮನೆ ಮುಂದೆ ಹಲವಾರು ನಿರಾಶ್ರಿತರು, ಅಸಹಾಯಕರು ಸಾಹಯಕ್ಕಾಗಿ ಕೈ ಚಾಚಿ ನಿಂತವರಿಗೆ ನಾನಿದ್ದೀನಿ ಅಂತ ಮನಮಿಡಿದರು. ಈಗಲೂ ಜನ ಸೇವೆಯೇ ಜನಾರ್ಧನನ ಸೇವೆ ಎಂದು ತಿಳಿದು ತಮ್ಮ ಸಹಾಯ ಕಾರ್ಯವನ್ನು ಮುಂದುವರಿಸಿದ್ದಾರೆ. 

ಅಷ್ಟಕ್ಕೂ ಸೋನು ಸೂದ್ ಇಷ್ಟರ ಮಟ್ಟಿಗೆ ಸಹಾಯ ಮಾಡೋದಕ್ಕೆ ಹಣ ಎಲ್ಲಿಂದ ಬರುತ್ತೆ. ನಟನೊಬ್ಬ ಇಷ್ಟೆಲ್ಲಾ ಮಾಡೋದಕ್ಕೆ ಸಾಧ್ಯವಾಗುತ್ತಿರೋದಾದರೂ ಹೇಗೆ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸೋನು ಸೂದ್ ಅವರೇ ಉತ್ತರ ನೀಡಿದ್ದಾರೆ. ಅದೇನೆಂದರೆ, ಅವರೇ ಕೊಟ್ಟ ಉದಾಹರಣೆ ಇದು. ಇತ್ತೀಚೆಗೆ ಸೂನು ಸೂದ್ ಅವರು ದುಬೈಗೆ ತೆರಳಿದ್ದರಂತೆ. ಅಲ್ಲಿನ ಆಸ್ಟರ್ ಆಸ್ಪತ್ರೆಯ ವಿಲ್ಸನ್ ಎಂಬುವರು ಸೋನು ಸೂದ್ ಅವರೊಂದಿಗೆ ಮಾತನಾಡಿದರಂತೆ. ನಿಮ್ಮ ಸಹಾಯದ ಕಾರ್ಯಗಳ ಬಗ್ಗೆ ಕೇಳಿದ್ದೇನೆ. ನಿಮ್ಮ ಸಹಾಯದ ಕಾರ್ಯಗಳಲ್ಲಿ ಕೈ ಜೋಡಿಸುವ ಆಸೆ ನನಗೂ ಇದೆ ಎಂದು ಹೇಳಿದ್ದಾರೆ.  

ಆಗ ಸೋನು ಸೂದ್ ಅವರು, ಸರಿ ನಾನು ನಿಮ್ಮ ಆಸ್ಪತ್ರೆಯ ರಾಯಭಾರಿ ಆಗುತ್ತೇನೆ. ನೀವು ಇದಕ್ಕೆ ಪ್ರತಿಯಾಗಿ 50 ಲಿವರ್ ಟ್ರಾನ್ಸ್ಪ್ಲಾಂಟ್ ಗಳನ್ನು ಮಾಡಿ ಎಂದರಂತೆ. ಅದಕ್ಕೆ ವಿಲ್ಸನ್ ಅವರು ಒಪ್ಪಿದ್ದಾರಂತೆ. ಒಟ್ಟು 50 ಲಿವರ್ ಟ್ರಾನ್ಸ್ಪ್ಲಾಂಟ್ ಮಾಡಲು ಬರೋಬ್ಬರಿ 12 ಕೋಟಿ ವೆಚ್ಚವಾಗುತ್ತದೆಯಂತೆ. ಹೀಗೆ ಸೋನು ಸೂದ್ ಅವರು ಸಹಾಯ ಮಾಡುತ್ತಿದ್ದಾರಂತೆ. ಈ ಮೂಲಕ ಸೋನು ಸೂದ್ ಅವರು ಜನರ ಪಾಲಿನ ದೇವರಾಗಿದ್ದು, ಕಷ್ಟದಲ್ಲಿರುವವರ ಸಮಸ್ಯೆಗೆ ಪರಿಹಾರ ನೀಡುತ್ತಿದ್ದಾರೆ. 

ದೇಶದ ಜನರಿಗೆ ಸಹಾಯ ಮಾಡಲು ದೊಡ್ಡ ನೆಟ್'ವರ್ಕ್ ಮೂಲ ಇಟ್ಟುಗೊಂಡಿರುವ ಸೋನು ಸೂದ್, ಚಾರಿಟಿ ಒಂದನ್ನು ತೆರೆದಿದ್ದಾರೆ. ಸಮಾಜ ನಮಗೇನು ಕೊಟ್ಟಿದೆಯೋ, ಅದನ್ನ ಮತ್ತೆ ಸಮಾಜಕ್ಕೆ ಕೊಡೋದೇ ಶ್ರೇಷ್ಠ ಸಾಧನೆ ಅನ್ನೋ ಮನಸ್ಥಿತಿ ಇರೋರು ತುಂಬಾ ವಿರಳ. ಅಂತಹ ವಿರಳರಲ್ಲಿ ಸರಳವಾಗಿ ಸೇವೆ ಮಾಡುತ್ತಾ ಅಗ್ರಮಾನ್ಯವಾಗಿ ಕಾಣ್ತಿರೋದು ಸೋನು ಸೂದ್. ತಮ್ಮದೇ ರೀತಿಯಲ್ಲಿ ಜನ ಸೇವೆ ಮಾಡ್ತಿದ್ದಾರೆ. ನಿಜಕ್ಕೂ ಈ ಮನುಷ್ಯನ ಈ ಗುಣಕ್ಕೆ ಹ್ಯಾಟ್ಸಾಫ್.