ನಟಿ ಸೋನಾಲಿ ಸಾವಿನ ಪ್ರಕರಣದಲ್ಲಿ ತಿರುವು ಮರಣೋತ್ತರ ಪರೀಕ್ಷೆಯ ವರದಿ ಬಯಲು!

By Infoflick Correspondent

Updated:Sunday, August 28, 2022, 11:13[IST]

ನಟಿ ಸೋನಾಲಿ ಸಾವಿನ ಪ್ರಕರಣದಲ್ಲಿ ತಿರುವು ಮರಣೋತ್ತರ ಪರೀಕ್ಷೆಯ ವರದಿ ಬಯಲು!

ಸೋನಾಲಿ ಅವರದ್ದು ಸಹಜ ಸಾವಲ್ಲ ಕೊಲೆ ಎಂಬ ಆರೋಪವನ್ನು ಕುಟುಂಬದವರು ಮಾಡಿದ್ದರು. ಈ ಪ್ರಕರಣವನ್ನು ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ.ನಟಿಯ ಸಾವು ಸಹಜವಾದದ್ದಲ್ಲ, ಕೊಲೆ ಎಂಬುದಕ್ಕೆ ಪೊಲೀಸರಿಗೆ ಕೆಲವು ಸಾಕ್ಷಿ ಸಿಕ್ಕಿದೆ.  ಸೋನಾಲಿ ಅವರ ದೇಹದ ಮೇಲೆ ಹಲವು ಗಾಯಗಳು ಆಗಿದ್ದವು ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು ಸೋನಾಲಿ ಅವರ ಇಬ್ಬರು ಸಹಚರರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.    

ಈ ಪ್ರಕರಣಕ್ಕೆ ಸಂಬಂಧಿಸಿ ಸುಧೀರ್ ಸಾಗ್ವಾನ್ ಹಾಗೂ ಸುಖ್ವಿಂದರ್ ವಾಸಿ ವಿರುದ್ಧ್ ಕೇಸ್ ದಾಖಲಾಗಿದೆ. ಆಗಸ್ಟ್ 22ರಂದು ಸೋನಾಲಿ ಗೋವಾಗೆ ಬಂದ ಸಂದರ್ಭದಲ್ಲಿ ಅವರ ಜತೆ ಸುಧೀರ್ ಹಾಗೂ ಸುಖ್ವಿಂದರ್ ಇದ್ದರು.

ಸೋನಾಲಿ ಫೋಗಟ್ ನಿಗೂಢ ಸಾವಿಗೂ ಮುನ್ನ ಆಗಸ್ಟ್ 22 ರಂದು ತಡರಾತ್ರಿ ಇದೇ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಆಗಸ್ಟ್ 22 ಮತ್ತು 23ರ ಮಧ್ಯರಾತ್ರಿ ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಗ್ವಾನ್ ಮತ್ತು ಸಿಂಗ್ ನೀರಿನಲ್ಲಿ ಕೆಲವು ಡ್ರಗ್ಸ್ ಅನ್ನು ಬೆರೆಸಿ ಅದನ್ನು ಕುಡಿಯಲು ಫೋಗಾಟ್‌ಗೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಫೋಗಟ್ ಹತ್ಯೆಯ ಹಿಂದಿನ ಉದ್ದೇಶವು 'ಆರ್ಥಿಕ ಹಿತಾಸಕ್ತಿ'ಯಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಉತ್ತರ ಗೋವಾದ ರೆಸ್ಟೋರೆಂಟ್ ಮಾಲೀಕ ಮತ್ತು ಶಂಕಿತ ಡ್ರಗ್‌ ಪೆಡ್ಲರ್‌ನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾದಕವಸ್ತುಗಳನ್ನು ಖರೀದಿಸಿದ್ದೇವೆ ಎಂದು ಆರೋಪಿಗಳಿಬ್ಬರು ತಮ್ಮ ಹೇಳಿಕೆಯಲ್ಲಿ 'ತಪ್ಪೊಪ್ಪಿಗೆ' ನೀಡಿದ ನಂತರವೇ ಶಂಕಿತ ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಹಾಗು ಕರ್ಲೀಸ್ ರೆಸ್ಟೋರೆಂಟ್‌ನ ಮಾಲೀಕ ಎಡ್ವಿನ್ ನ್ಯೂನ್ಸ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು.