Sonu Gowda : ಬಿಗ್ ಬಾಸ್ ಮನೆಯಿಂದ ದಿಢೀರನೆ ಕಣ್ಮರೆಯಾದ ಸೋನು ಹೋದದ್ದು ಎಲ್ಲಿ ?

By Infoflick Correspondent

Updated:Saturday, August 27, 2022, 19:00[IST]

Sonu Gowda : ಬಿಗ್ ಬಾಸ್ ಮನೆಯಿಂದ ದಿಢೀರನೆ ಕಣ್ಮರೆಯಾದ ಸೋನು ಹೋದದ್ದು ಎಲ್ಲಿ ?

ಬಿಗ್ ಬಾಸ್  (Bigg Boss) ಒಟಿಟಿ ಪ್ರೇಕ್ಷಕರಿಗೆ ಪ್ರತಿ ದಿನ ಒಂದೊಂದು ಶಾಕ್ ನೀಡುತ್ತಲೇ ಇದೆ. ಈ ನಡುವೆ ಏಕಾಏಕಿ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ನಾಪತ್ತೆಯಾಗುವ ಮೂಲಕ ಸಹ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.

ಸೋನು ಗೌಡ (Sonu Gowda) ಏಕಾಏಕಿ ನಾಪತ್ತೆಯಾಗಿದ್ದಾರೆ. ಈ ವೇಳೆ ಸಾನ್ಯಾ, ಸೋನು ಎಲ್ಲಿ ಎಂದು ಪ್ರಶ್ನಿಸಿದ್ದು, ಮನೆ ಮಂದಿ ಆರಂಭದಲ್ಲಿ ತಮಾಷೆಯಾಗಿ ಈ ವಿಚಾರವನ್ನು ತೆಗೆದುಕೊಂಡರಾದರೂ, ಆ ಬಳಿಕ ಆತಂಕಕ್ಕೊಳಗಾಗಿದ್ದಾರೆ.

ಇದಕ್ಕಿದ್ದಂತೆ ಬಿಗ್​ಬಾಸ್ ಮನೆಯಿಂದ​ ಸೋನು ಗೌಡ ಕಾಣೆ ಆಗಿದ್ದಾರೆ. ಸೋನು ಮನೆಯಲ್ಲಿ ಎಲ್ಲಿ ಕಾಣಿಸ್ತಿಲ್ಲ ಅನ್ನೋದನ್ನ ಅರಿತ ಸಾನ್ಯಾ ಎಲ್ಲರಿಗೂ ಹೇಳಿದ್ದಾರೆ. ಸಾನ್ಯಾ ಕೂಗಿ ಹೇಳ್ತಿದ್ದಂತೆ, ರೂಪೇಶ್, ಜಶ್ವಂತ್, ಜಯಶ್ರೀ ಮತ್ತು ನಂದಿನಿ ಓಡಿ ಹೋಗಿ ನೋಡಿದ್ದಾರೆ. ಸೋನು ನಾಟಕ ಆಡಬೇಡ.. ಪ್ಲೀಸ್ ಎಲ್ಲಿದ್ರೂ ಹೊರಗೆ ಬಾ ಎಂದು ಕೂಗಿದ್ದಾರೆ.

ಎಷ್ಟೇ ಬಾರಿ ಸೋನು ಸೋನು ಅಂದರೂ ಸುಳಿವೇ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಯಾದ ಸ್ಪರ್ಧಿಗಳು, ಎಲ್ಲಿಗೆ ಹೋಗಿರಬಹುದು ಅಂತಾ ಚರ್ಚೆ ಶುರುಮಾಡಿದ್ದಾರೆ

ಕನ್ಫೆಷನ್ ರೂಮಿನಿಂದ ಸೋನು ಹೊರಗೆ ಬಂದಿದ್ದಾರೆ. ಸೋನು ನೋಡಿದ ಇತರೆ ಸ್ಪರ್ಧಿಗಳು ಯಪ್ಪಾ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಕಬ್ಬಡಿ ಆಡಲು ಹೋಗಿ ಸೋನು ಕೈಗೆ ಏಟು ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಬ್ಯಾಂಡೇಜ್ ಹಾಕಲು ಸೋನು ಅವರನ್ನ ಬಿಗ್​ಬಾಸ್​ ಕರೆದಿದ್ದರು. ಅದಕ್ಕಾಗಿ ನಾನು ಕನ್ಫೆಷನ್ ರೂಮಿಗೆ ಹೋಗಿದ್ದೆ ಅಂತಾ ಸೋನು ವಿವರಿಸಿದ್ದಾರೆ.