ರೀಲ್ಸ್ ಸೋನು ರಿಯಾಲಿಟಿ ಶೋಗೆ ಬೇಕಿತ್ತಾ ? ನೀವು ಸಮಾಜಕ್ಕೆ ಯಾವ ಸಂದೇಶ ಕೊಡ್ತಿದಿರ?

By Infoflick Correspondent

Updated:Saturday, August 6, 2022, 22:34[IST]

ರೀಲ್ಸ್ ಸೋನು ರಿಯಾಲಿಟಿ ಶೋಗೆ ಬೇಕಿತ್ತಾ ? ನೀವು ಸಮಾಜಕ್ಕೆ ಯಾವ ಸಂದೇಶ ಕೊಡ್ತಿದಿರ?

ಸೋನು ಶ್ರೀನಿವಾಸ್​ ಗೌಡ ವಿಡಿಯೋಗಳಿಗಿಂತ ಬಿಗ್‌ಬಾಸ್ OTT ಸೀಸನ್-1ರ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಎಂಟ್ರಿ ಕೊಟ್ಟರೆ, 2ನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಾಂಟ್ರವರ್ಸಿಗಳ ಮೂಲಕ ಹೆಸರು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್‌ಬಾಸ್‌ ಮನೆ ಸೇರಿದ್ದು ಟ್ರೋಲರ್ಸ್ ಗಳ ಆಹಾರವಾಗಲಿದೆ ಎಂದು ಜನ ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚಾಗಿ ಟ್ರೋಲ್​ ಆಗಿಯೇ ಫೇಮಸ್​ ಆದವರು. ಟ್ರೋಲ್​ ಪೇಜ್​ಗಳಿಂದಲೇ ಈಕೆಗೆ ಇಷ್ಟು ಹೆಸರು ಬಂದಿದ್ದು. ಚೈಲ್ಡೀಸ್​ ಮಾತುಗಳಿಂದ, ಇನ್ನೂ ಅನೇಕ ವಿಚಾರಕ್ಕೆ  ಸಿಕ್ಕಾಪಟ್ಟೆ ಟ್ರೋಲ್​ ಆದವರು ಸೋನು ಶ್ರೀನಿವಾಸ್​ ಗೌಡ.ಈಗ ಸೋಷಿಯಲ್​ ಮೀಡಿಯಾ ಸ್ಟಾರ್​ ಪಟ್ಟ ಪಡೆದುಕೊಂಡಿದ್ದಾರೆ.

ಈ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಲೀಕ್ ಆಗಿ ವೈರಲ್ ಆಗಿತ್ತು. ಇದು ಕೂಡ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಸೋನು ಈ ಹಿಂದೆ ಕನ್ನಡ ಮತ್ತು ತೆಲುಗು ಸಿನಿಮಾ ರಂಗವನ್ನು ಹೋಲಿಕೆ ಮಾಡಿ, ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಮೆಚ್ಚುವುದಕ್ಕಿಂತ ತುಳಿಯುವವರೇ ಹೆಚ್ಚು. ಹಾಗಾಗಿ ತೆಲುಗು ಸಿನಿಮಾ ರಂಗದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಾಗಿ ಸಂದರ್ಶನದಲ್ಲಿ ಹೇಳಿದ್ದರು. ಆಗಲೂ ಕೂಡ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಇದು ವಿವಾದ ಕೂಡ ಆಗಿತ್ತು.

ಟಿಕ್ ಟಾಕ್ ಮೂಲಕ ಸದಾ ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಿರುವ ಸೋನು ಗೌಡ,  ಇವತ್ತು ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ವೇದಿಕೆ ಏರಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್‌ಗೆ ಆಯ್ಕೆಯಾದ ಹಿನ್ನೆಲೆ ವೇದಿಕೆಗೆ ಬರಮಾಡಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು,  ಸೋನುಗೆ ಕಲೆ ಪ್ರಶ್ನೆ ಕೇಳಿದ್ರು. ಇನ್ನು ಕಿಚ್ಚ ಸುದೀಪ್ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ ಸೋನು ಶ್ರೀನಿವಾಸ್ ಗೌಡಗೆ ಟಾಂಗ್‌ ಕೊಟ್ಟರು‌ ನಟ ಕಿಚ್ಚ ಸುದೀಪ್. ಹೀಗೆ ಎಂಟ್ರಿಯಲ್ಲೇ ಶಾಕ್‌ ಆದ ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್‌ ಮನೆಯನ್ನ ಸೇರಿದ್ದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯ ಸಂಚಲನವನ್ನೇ ಸೃಷ್ಟಿ ಮಾಡಿದೆ