Sonu Gowda : ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರಕ್ಕಾಗಿ ಸೋನು ಗೌಡ ಪಡೆಯುವ ಸಂಭಾವನೆ ಎಷ್ಟು..?

By Infoflick Correspondent

Updated:Friday, May 6, 2022, 15:39[IST]

Sonu Gowda : ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರಕ್ಕಾಗಿ ಸೋನು ಗೌಡ ಪಡೆಯುವ ಸಂಭಾವನೆ ಎಷ್ಟು..?

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದಕ್ಕೆಲ್ಲಾ ಕಾರಣ ಅನು ಸಿರಿಮನೆ ಪತಿ ಆರ್ಯವರ್ಧನ್ ಹಾಗೂ ರಾಜನಂದಿನಿ ಹಿಂದಿನ ಕಥೆಯನ್ನು ಕೆದಕುತ್ತಿರುವುದು. ಆರ್ಯ ಯಾರು.? ಆತ ಹೇಗೆ ರಾಜನಂದಿನಿಯನ್ನು ಮದುವೆಯಾದ.? ವರ್ಧನ್ ಸಂಸ್ಥೆಗೆ ಹೇಗೆ ಬಂದ.? ಸುಭಾಷ್ ಪಾಟೀಲ್ ಆಗಿದ್ದ ಆರ್ಯ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ.? ರಾಜನಂದಿನಿ ಸಾವನ್ನಪ್ಪಿದ್ದು ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೂ ಅನು ಸಿರಿಮನೆ ಉತ್ತರ ಕಂಡುಕೊಂಡಿದ್ದಾಳೆ. ಸದ್ಯ ರಾಜನಂದಿನಿ ಸಾವಿನ ರಹಸ್ಯವೊಂದು ಬಾಕಿ ಇದ್ದು, ತಾನೇ ರಾಜನಂದಿನಿ ಈ ಜನ್ಮದಲ್ಲಿ ಅನು ಸಿರಿಮನೆಯಾಗಿ ಜನಿಸಿದ್ದೇನೆ ಎಂಬುದನ್ನೂ ಅರ್ಥವಾಗಿದೆ. 

ಈಗ ಆರ್ಯ ಹೇಳಿದ್ದೆಲ್ಲವೂ ಶುದ್ಧ ಸುಳ್ಳು ಎಂಬ ಸತ್ಯ ಅನು ಸಿರಿಮನೆಗೆ ಗೊತ್ತಾಗಿದೆ. ಇದೀಗ ಯಲ್ಲಮ್ಮ ದೇವಿ ಅನು ಸಿರಿಮನೆ ಯಾರು ಎಂಬ ಸತ್ಯವನ್ನು ತೋರಿಸಿದ್ದಾಳೆ. ಧಾರಾವಾಹಿಯಲ್ಲಿ ಈಗ ದಿನಕ್ಕೊಂದು ಟ್ವಿಸ್ಟ್ ಆಗುತ್ತಿದ್ದು, ಆರ್ಯ ನಾಯಕ ಅಲ್ಲ ವಿಲನ್ ಎಂಬ ಸತ್ಯ ಹೊರ ಬಂದಿದೆ. ಸಂತೋಷ್ ಪಾಟೀಲ್ ಯಾಕೆ ಆರ್ಯ ಆಗಿ ಬದಲಾದ ಎಂಬ ಸತ್ಯವೂ ಬೆಳಕಿಗೆ ಬಂದಿದೆ. ರಾಜನಂದಿನಿ ಪಾತ್ರಕ್ಕಾಗಿ ಧಾರಾವಾಹಿಗೆ ನಟಿ ಸೋನು ಗೌಡ ಎಂಟ್ರಿ ಕೊಟ್ಟಿದ್ದರು. ಈಗ ಅವರ ಅಧ್ಯಾಯ ಮುಗಿಯುವ ಹಂತ ತಲುಪಿದೆ.    

ಇಷ್ಟು ದಿನ ಹಿರಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಗೌಡ ಈಗ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೂ ಪಾದಾರ್ಪಣೆ ಮಾಡಿದ್ದಾರೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ರಿಟೈರ್ ಆದ ಮೇಲೆ ಸೋನು ಗೌಡ ಅವರ ತಂದೆ ಮನೆಯಲ್ಲಿ ಧಾರಾವಾಹಿ ನೋಡುತ್ತಿದ್ದಾರಂತೆ. ಧಾರಾವಾಹಿಗಳಿಗೆ ಅಡಿಕ್ಟ್ ಆಗಿರುವ ಸೋನು ಗೌಡ ಅವರ ತಂದೆ ಹೇಳಿದ ಮೇಲೆಯೇ ಸೀರಿಯಲ್ ನಲ್ಲಿ ನಟಿಸಲು ಮುಂದಾದರಂತೆ. ಹೀಗಾಗಿಯೇ ರಾಜನಂದಿನಿ ಪಾತ್ರವನ್ನು ಒಪ್ಪಿಕೊಂಡರಂತೆ. ಈ ಧಾರಾವಾಹಿಯಲ್ಲಿ ನಟಿಸಲು ರಾಜನಂದಿನಿ ಅವರು ಒಂದು ಎಪಿಸೋಡ್ ಗೆ ಬರೋಬ್ಬರಿ 40 ಸಾವಿರ ರೂಪಾಯಿ ಪಡೆಯುತ್ತಿದ್ದಾರಂತೆ.