Sonu Gowda : ಸ್ಮೋಕಿಂಗ್ ವಿಷಯದಲ್ಲಿ ನೇರ ಹೇಳಿಕೆ ನೀಡಿದ ಸೋನು ! ಬಿಗ್ ಬಾಸ್ ನಲ್ಲಿ ಇನ್ನೇನೆಲ್ಲ ಅವತಾರ ನೋಡಬೇಕು ಎಂದ ಜನ

By Infoflick Correspondent

Updated:Sunday, August 7, 2022, 11:30[IST]

Sonu Gowda : ಸ್ಮೋಕಿಂಗ್  ವಿಷಯದಲ್ಲಿ ನೇರ ಹೇಳಿಕೆ ನೀಡಿದ ಸೋನು ! ಬಿಗ್ ಬಾಸ್ ನಲ್ಲಿ ಇನ್ನೇನೆಲ್ಲ ಅವತಾರ ನೋಡಬೇಕು ಎಂದ ಜನ

ಟಿಕ್​ ಟಾಕ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಹಾಗು ಕುಖ್ಯಾತಿ ಪಡೆದ ಸೋನು ಶ್ರೀನಿವಾಸ್​ ಗೌಡ  ಅವರು 'ಬಿಗ್​ ಬಾಸ್​ ಒಟಿಟಿ ಕನ್ನಡ ಸೀಸನ್​ 1'ಕ್ಕೆ ಎಂಟ್ರಿ ನೀಡಿದ್ದಾರೆ. ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಅವರ ಎಂಟ್ರಿ ಬಗ್ಗೆ ಅಸಮಧಾನ ಎತ್ತಿದ್ದಾರೆ ಇದರ ಬೆನ್ನಲ್ಲೇ ಸೋನು ಮನೆಯೊಳಗೆ ಹೊಗುತ್ತಿದ್ದಂತೆ ಮೊದಲ ವರಸೆ ಪ್ರಾರಂಭಿಸಿದ್ದಾರೆ.

ಈಗ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ನೇರ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್' ಮನೆಯಲ್ಲಿ ಸ್ಮೋಕ್ ಮಾಡುವ ವಿಚಾರ ಬಂತು. ನಟ ರೂಪೇಶ್​ ಅವರು 'ನಾನು ಸ್ಮೋಕ್ ಮಾಡಲ್ಲ' ಎಂದರು. ಇದಕ್ಕೆ ಸೋನು ಗೌಡ ಅವರು, 'ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ' ಎಂದರು. 'ಸಿಗರೇಟ್ ಸೇದುತ್ತೀರಾ' ಎಂದು ಆಶ್ಚರ್ಯ ರೀತಿಯಲ್ಲಿ ಹಾಗಾಗಿ ನಿಮ್ಮ ಗಂಟಲು ಒಡೆದಿದೆಯಾ ಎಂದು ಕೇಳಿದರು ರೂಪೇಶ್. 'ನಾನು ಸಿಗರೇಟ್ ಸೇದುತ್ತೇನೆ. ಅದರಲ್ಲಿ ತಪ್ಪೇನಿದೆ' ಎಂದು ಪ್ರಶ್ನೆ ಮಾಡಿದ್ದಾರೆ.

ಈ ಮೊದಲು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿಯರು ಮಾತ್ರ ಸಿನಿಮಾಗಳಲ್ಲಿ ಧಮ್ ಎಳೆಯುತ್ತಿದ್ದರು. ಆದರೆ ಈಗ ನಾಯಕಿಯರ ಕೈಯಲ್ಲೂ ಸಿಗರೇಟು ಕಾಣಿಸುತ್ತಿದೆ. ಇಷ್ಟೇ ಅಲ್ಲ, ನಮ್ಮ ದೇಶದಲ್ಲಿ ಸಿಗರೇಟು ಸೇದುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ.

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಹೇಳುತ್ತಾರೆ. ಆದರೆ ಬಿಗ್ ಬಾಸ್ ಶೋ ನಲ್ಲಿ ಮೊದಲ ದಿನವೇ ನಟಿ ಧೂಮಪಾನ ಮಾಡುವುದು ತಪ್ಪೇ ಎಂದು ಕೇಳುತ್ತಿದ್ದಾರೆ . ಇದು ಎಲ್ಲಾ ವಯೋಮಾನದವರು ನೋಡುವ ಶೋ ಇಂತಹ ಮಾತಿನಿಂದ ಯಾವ ಸಂದೇಶ ಸಮಾಧಾನಕ್ಕೆ ಹೋಗುತ್ತದೆ ? ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ.

ಇಷ್ಟು ದಿನ ಪುರುಷರು ಸ್ಮೋಕಿಂಗ್ ರೂಂ ನಲ್ಲಿ ಧಮ್ ಎಳೆಯುತ್ತಾ ಮಾತನಾಡುತ್ತಿದ್ದರು ಬಿಗ್ ಬಾಸ್ ಗೆ ಸಿಗರೇಟ್ ಕೊಡಿ ಎಂದು ಬೇಡುತ್ತಿದ್ದರು ಈಗ ಈ ಹುಡುಗಿಯ ಸ್ಮೋಕಿಂಗ್ ಅವತಾರಾ ನೋಡಬೇಕೆ ಎಂದು ಟ್ರೋಲ್ ಪೇಜ್ ಗಳು ಕೇಳುತ್ತಿವೆ.