Sonu Gowda : ಮೊದಲ ಬಾರಿಗೆ ತಮ್ಮ ಡಿವೋರ್ಸ್ ಬಗ್ಗೆ ನಟಿ ಸೋನು ಗೌಡ ಹೇಳಿದ್ದೇನು ಗೊತ್ತಾ..?

By Infoflick Correspondent

Updated:Thursday, June 16, 2022, 20:02[IST]

Sonu Gowda : ಮೊದಲ ಬಾರಿಗೆ ತಮ್ಮ ಡಿವೋರ್ಸ್ ಬಗ್ಗೆ ನಟಿ ಸೋನು ಗೌಡ ಹೇಳಿದ್ದೇನು  ಗೊತ್ತಾ..?

ನಟಿ ಸೋನು ಗೌಡ ಸಿನಿಮಾ, ಕಿರುತೆರೆಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ಹಲವು ಸಿನಿಮಾಗಳಿದ್ದರೂ ಸೋನು ಗೌಡ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಿ ನಿನ್ನ ಪ್ರೀತಿಯ ಸಿನಿಮಾ ಮೂಲಕ ಬನ್ಣದ ಲೋಕಕ್ಕೆ ಎಂಟ್ರಿಕೊಟ್ಟ ಸೋನು ಗೌಡ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಗೆದ್ದಿದ್ದಾರೆ. ಒಳ್ಳೊಳ್ಳೆಯ ಪಾತ್ರಗಳ ಮೂಲಕವೇ ಸಿನಿಮಾಗಳಲ್ಲಿ ನಟಿಸುವ ಸೋನು ಗೌಡ ಅವರು, ಪುನೀತ್ ರಾಜ್ ಕುಮಾರ್ ಅವರ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. 

2010ರಲ್ಲಿ ತಮ್ಮ ಪ್ರಿಯಕರ ಮನೋಜ್ ಕುಮಾರ್ ಎಂಬುವರನ್ನು ಸೋನು ಗೌಡ ಅವರು ಪ್ರೀತಿಸಿ ಮದುವೆಯಾದರು. ಮದುವೆಗೆ ಮನೆಯವರು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು. ಮದುವೆಯಾದ ಕೇವಲ ಒಂದೇ ವರ್ಷಕ್ಕೆ ವಯಕ್ತಿಕ ಕಾರಣಗಳಿಂದಾಗಿ ಸೋನು ಗೌಡ ಅವರು ಪತಿಯಿಂದ ಬೇರೆಯಾದರು. ಈ ವಿಚಾರ ಸುದ್ದಿಯಾದರೂ ಸೋನು ಗೌಡ ಅವರು ತುಟಿ ಬಿಚ್ಚಿರಲಿಲ್ಲ. ಇದೀಗ ಸಿನಿಮಾ ಒಂದರಲ್ಲಿ ನಟಿಸಿರುವ ಸೋನು ಗೌಡ ಅವರು ಮೊದಲ ಬಾರಿಗೆ ತಮ್ಮ ದಾಂಪತ್ಯ ದ ಬದುಕಿನ ಬಗ್ಗೆ ಮಾತನಾಡಿದ್ದಾರೆ.   

ವೆಡ್ಡಿಂಗ್ ಗಿಫ್ಟ್ ಎಂಬ ಸಿನಿಮಾದಲ್ಲಿ ಸೋನು ಗೌಡ ಅವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ತಿಂಗಳು ಈ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಮಧ್ಯಮದ ಜೊತೆಗೆ ಮಾತನಾಡಿರುವ ಸೋನು ಗೌಡ ಅವರನ್ನು ತಮ್ಮ ವಿಚ್ಛೇಧನದ ಕ್ಷಣಗಳ ಬಗ್ಗೆ ಪ್ರಶ್ನಿಸಲಾಗಿದೆ. ಈ ವೇಳೆ ಮಾತನಾಡಿದ ಸೋನು ಗೌಡ, ಅದು ತುಂಬಾನೇ ಕಷ್ಟ. ಬಟ್ ಏನೇ ಬಂದರೂ ಏನೇ ಆದರೂ, ಲೈಪ್ ಮಸ್ಟ್ ಗೋ ಆನ್. ಹಾಗಾಗಿ ಈಗಿನವರು ಮದುವೆಯಾಗುವ ಮುನ್ನ 10 ಸಲ ಯೋಚಿಸಿ ಮದುವೆಯಾಗಿ. ಈಗಿನ ಕಾಲದಲ್ಲಿ ಹಣ ಮಾಡಬಹುದು. ಆದರೆ, ದಿನದ ಕೊನೆಯಲ್ಲಿ ನೆಮ್ಮದಿಯಾಗಿ ಮಲಗಬೇಕು ಎಂದರೆ ನಂಬಿಕೆಯ ಗಂಡನಿರಬೇಕು ಎಂದು ಹೇಳಿದ್ದಾರೆ. ( video credit : tv 9 kannada )