Sonu Srinivasa Gowda : ನಾನು ನಿನ್ನ ಲವ್ ಮಾಡುತ್ತಿದ್ದೇನೆ ಎಂದೆನಿಸುತ್ತಿದೆ ಎಂದು ಸೋನು ಹೇಳಿದ್ದು ಯಾರಿಗೆ ಗೊತ್ತಾ ?

By Infoflick Correspondent

Updated:Sunday, August 14, 2022, 11:29[IST]

Sonu Srinivasa Gowda : ನಾನು ನಿನ್ನ ಲವ್ ಮಾಡುತ್ತಿದ್ದೇನೆ ಎಂದೆನಿಸುತ್ತಿದೆ ಎಂದು ಸೋನು ಹೇಳಿದ್ದು ಯಾರಿಗೆ ಗೊತ್ತಾ ?

ಪ್ರೀತಿ ಪ್ರೇಮ ಬಿಗ್ಬಾಸ್ ಮನೆಯಲ್ಲಿ ಮಾಮೂಲಿಯಾಗಿದೆ. ಕಳೆದ ಅಷ್ಟು ಸೀಸನ್ ಗಳಲ್ಲಿ ನಾವು ನೀವು ನೋಡಿದ ಹಾಗೆ ಪ್ರೇಮ ಪ್ರೀತಿ ಕಥೆ ಹೆಚ್ಚು ಕೇಳಿ ಬಂದಿವೆ. ಹೊರಗಡೆ ಬಂದು ಮದುವೆಯಾದವರ ಪಟ್ಟಿಯಲ್ಲಿ ಚಂದನ್ ನಿವೇದಿತಾ ಬರುತ್ತಾರೆ ಎನ್ನಬಹುದು. ಹೌದು ಬಿಗ್ ಬಾಸ್ ಮನೆಯಲ್ಲಿ ಇದೀಗ ರಾಕೇಶ್ ಅಡಿಗ ಜೊತೆಗೆ ಸ್ಪೂರ್ತಿ ಗೌಡ, ಸೋನು ಶ್ರೀನಿವಾಸ ಅವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ. ಹೌದು, ಬಿಗ್ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಜೊತೆ ಸೋನು ಶ್ರೀನಿವಾಸ ಗೌಡ ಮಾತನಾಡುವಾಗ ನನಗೆ ಆ ರಾಕೇಶ್ ಮೇಲೆ ಸ್ಟ್ರಾಂಗ್ ಫೀಲಿಂಗ್ ಆಗುತ್ತಿದೆ. ನಾನು ಅವರನ್ನು ಲವ್ ಮಾಡುತ್ತಿದ್ದೇನೆ ಎಂದಿನಿಸುತ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡರು.

ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಕೂಡ ಲವ್ ಮಾಡುವಂತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸುತ್ತಿದ್ದಾರೆ. ಹಾಗೆ ಇವರಿಬ್ಬರನ್ನು ಈ ರೀತಿ ನೋಡಿದ ಸೋನು ಒಟ್ಟಿಗೆ ಕುಳಿತುಕೊಂಡಿದ್ದನ್ನು ಖಂಡಿಸಿ, ಎ ನನ್ನ ಹುಡುಗನ ಬಿಟ್ಟು ದೂರ ಕುಳಿತುಕೋ ಎಂದು ಗಂಭೀರವಾಗಿ ಹೇಳುತ್ತಾರೆ. ಆಗ ಸ್ಪೂರ್ತಿ ಗೌಡ ಪರ ಮಾತನಾಡಿದ ರಾಕೇಶ್ ಅಡಿಗ ನೀನು ನಿಜವಾಗಿಯೂ ಸೀರಿಯಸ್ ಆಗಿ ಹೇಳುತ್ತಿದ್ದೀಯ ಈ ಮಾತನ್ನು ಎಂದು ಕೇಳುತ್ತಾರೆ. ಹೌದು ನನಗೆ ನಿನ್ನ ಮೇಲೆ ಸ್ಟ್ರಾಂಗ್ ಫೀಲಿಂಗ್ ಬರುತ್ತಿದೆ, ಏನೋ ಗೊತ್ತಿಲ್ಲ ಲವ್ ಮಾಡುತ್ತಿದ್ದೇನೆ ಎಂದೆನಿಸುತ್ತಿದೆ. ಒಪ್ಪಿದ್ರೆ ಒಪ್ಪಿಕೊ ಇಲ್ಲ ಬೇಡ ಎಂದು ಹೇಳುತ್ತಾಳೆ. ಹಾಗೆ ಪರೋಕ್ಷವಾಗಿಯೇ ಈ ಮಾತನ್ನು ಹೇಳಿದ್ದಾಳೆ ಎನ್ನಲಾಗುತ್ತಿದೆ.  

ಆದರೆ ರಾಕೇಶ್ ಮಾತ್ರ ಹೌದಾ ಹಾಗಿದ್ದರೆ ನಾನು ಇನ್ನು ಮುಂದೆ ನಿನ್ನ ಬಳಿ ಕಾಮಿಡಿ ಮಾಡುವುದಿಲ್ಲ, ನಿನ್ನ ಯಾವ ವಿಚಾರಕ್ಕೂ ನಾನು ಕಾಮಿಡಿ ಮಾಡುವುದಿಲ್ಲ ಎಂದು ಅಷ್ಟೇ ಹೇಳುತ್ತಾನೆ. ಜೊತೆಗೆ ಹೊಟ್ಟೆ ಕಿಚ್ಚು ಬರುವಂತೆ ಸೋನುಗೆ ರಾಕೇಶ್ ಅಡಿಗ, ಅಕ್ಷತಾ ಜೊತೆ ಮತ್ತು ಸ್ಫೂರ್ತಿ ಗೌಡ ಜೊತೆ ಹೆಚ್ಚು ವಿಚಾರಗಳಲ್ಲಿ ಮೂವ್ ಆಗುತ್ತಿದ್ದಾರೆ ಎನ್ನಲಾಗಿದೆ.
ಈ ಮೂವರ ಲವ್ ಸ್ಟೋರಿ ಟ್ರಯಾಂಗಲ್ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ನಾವು ಕಾದು ನೋಡಬೇಕು. ಹಾಗೆನೆ ಈ ರಾಕೇಶ್ ಯಾರ ಪ್ರೀತಿಗೆ ಮರುಗುತ್ತಾನೆ ಎಂಬುದಾಗಿಯೂ ಸಹ ಕೊನೆಯವರೆಗೂ ಕಾಯಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಇದನ್ನೆಲ್ಲಾ ನೋಡಿದ ನೆಟ್ಟಿಗರು ಬಿಗ್ ಬಾಸ್ ಮನೆಯಲ್ಲಿ ಇದೇನು ಇಷ್ಟು ಗಲೀಜ್ ಆಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ, ಒಂದು ಕಾರ್ಯಕ್ರಮ ಎಂದರೆ ಸಮಾಜಕ್ಕೆ ಏನಾದರೂ ಒಂದು ಒಳ್ಳೆಯ ಸಂದೇಶ ಇರಬೇಕು, ಅದನ್ನು ಬಿಟ್ಟು ಮೂರು ಬಿಟ್ಟವರನ್ನು ತಂದು ಬಿಗ್ಬಾಸ್ ಮನೆಯಲ್ಲಿ ಈ ರೀತಿ ಆಟಗಳನ್ನು ಆಡಿಸುತ್ತಿದ್ದೀರಾ  ಆಕ್ರೋಶ ಹೊರಹಾಕಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ...