ಕನ್ನಡಿಗರ ಹೃದಯ ಕದ್ದ ಗಾಯಕ ಸೋನು ನಿಗಮ್..! ಕನ್ನಡಿಗರ ಬಗ್ಗೆ ಎಮೋಷನಲ್ ಆಗಿ ಹೇಳಿದ್ದೇನು..?

By Infoflick Correspondent

Updated:Monday, May 16, 2022, 16:03[IST]

ಕನ್ನಡಿಗರ ಹೃದಯ ಕದ್ದ ಗಾಯಕ ಸೋನು ನಿಗಮ್..! ಕನ್ನಡಿಗರ ಬಗ್ಗೆ ಎಮೋಷನಲ್ ಆಗಿ ಹೇಳಿದ್ದೇನು..?

ಹೌದು ಚಿತ್ರರಂಗ ಅಂದರೆ ಕೇವಲ ನಟನೆ ಮಾಡುವುದು, ನಟನೆ ಮಾಡಿದರೆ ಸಾಕು ಸಿನಿಮಾ ಆಗುತ್ತದೆ ಎಂದು ಹೇಳಲಿಕ್ಕಾಗದು. ಸಿನಿಮಾದಲ್ಲಿ ಹಾಡುಗಳು, ಸಂಗೀತ ಮ್ಯೂಸಿಕ್ ಬ್ಯಾಗ್ರೌಂಡ್ ಸ್ಕೋರ್, ಹಾಗೆ ಕ್ಯಾಮರಾ ವರ್ಕ್ ಎಲ್ಲವೂ ಕೂಡ ಇರುತ್ತದೆ. ಒಂದು ಸಿನಿಮಾ ಯಶಸ್ವಿಯಾಗಿ ಹೊರಹೊಮ್ಮಬೇಕಾದರೆ ಕೇವಲ ಚಿತ್ರಕಥೆ, ಹಾಗೂ ನಟನೆ ಮಾತ್ರವಲ್ಲದೆ ಸಂಗೀತ ತುಂಬಾನೇ ಮುಖ್ಯವಾಗಿರುತ್ತದೆ. ಸಿನಿಮಾದಲ್ಲಿಯ ಹಾಡುಗಳು ಅಭಿಮಾನಿಗಳ ಹೃದಯಕ್ಕೆ ಹತ್ತಿರ ಆಗುವಂತೆ ಇರಬೇಕು. ಅದೇ ರೀತಿ ಸಿನಿಮಾವನ್ನು ಯಶಸ್ವಿಗೊಳಿಸಲು ಸಂಗೀತ ತುಂಬಾ ಮುಖ್ಯವಾಗಿರುತ್ತದೆ ಎಂದು ಹೇಳಬಹುದು. ಸೋನು ನಿಗಮ್ ಖ್ಯಾತ ಗಾಯಕ ಎಲ್ಲರಿಗೂ ಗೊತ್ತಿರುವ ಸಿಂಗರ್. ಇವರ ಬಗ್ಗೆ ನಾವು ಏನು ಹೇಳುವುದಕ್ಕೆ ಆಗಲ್ಲ.  

ಇವರದು ಅದೆಂತಹ ಧ್ವನಿ ಎಂದರೆ ಕಷ್ಟಪಟ್ಟು ಮೇಲೆ ಬಂದವರು ಇಂದು ಖ್ಯಾತ ಗಾಯಕರಾಗಿ ಬೇರೆ ಎಲ್ಲಾ ಚಿತ್ರರಂಗದಲ್ಲಿಯೂ ಹೆಸರು ಗಳಿಸಿದ್ದಾರೆ.ಕನ್ನಡದಲ್ಲಿ ಇವರು ಹಾಡಿದ ಹಾಡುಗಳು ಇಂದಿಗೂ ಕಿವಿಯಲ್ಲಿ ಹೆಚ್ಚು ಹಿತ ನೀಡುತ್ತವೆ. ಸೋನು ನಿಗಮ್ ಅವರು ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಮಹೋತ್ಸವ ಕಾರ್ಯಕ್ರಮ ವೇಳೆ ಬೆಂಗಳೂರಿಗೆ ಬಂದಿದ್ದರು. ಆಗ ನಮ್ಮ ಕನ್ನಡಿಗರ ಬಗ್ಗೆ ಅವರು ಆಡಿದ ಒಂದೊಂದು ಮಾತುಗಳು ಹೃದಯಕ್ಕೆ ತುಂಬ ಹತ್ತಿರ ಆಗಿದ್ದವು. ಸೋನು ನಿಗಮ್ ಹೇಳುವ ಹಾಗೆ ನಾನು ಕಳೆದ ಜನ್ಮದಲ್ಲಿ, ನಾನು ಸಹ ಕನ್ನಡಿಗ ಆಗಿದೆ ಎಂದೆನಿಸುತ್ತದೆ. ಕಾರಣ ಇವರು ನೀಡುವ ಪ್ರೀತಿ, ಕನ್ನಡ ಜನತೆಯ ಪ್ರೀತಿ, ಕರ್ನಾಟಕದ ಮಮತೆ ಎಲ್ಲಾ ಇಂಡಸ್ಟ್ರಿ ಗಿಂತ ಹೆಚ್ಚು.

ಹಾಗೆ ನಾನು ದುಬೈಗೆ ಹೋಗಲಿ, ಆಸ್ಟ್ರೇಲಿಯ ಹೋಗಲಿ ಯುಎಸ್ಎಗೆ ಹೋಗಲಿ, ಎಲ್ಲಿ ಹೋದರೂ ಕೂಡ ಕನ್ನಡ ಎನ್ನುವ ಒಂದು ಧ್ವನಿ ನನ್ನ ಮುಂದೆ ಬಂದೇ ಬರುತ್ತದೆ. ಆಗ ನಾನು ಅನಿಸುತ್ತಿದೆ ಯಾಕೋ ಇಂದು ಎನ್ನುವ ಹಾಡನ್ನು ಹಾಡುತ್ತೇನೆ ಅದು ನನ್ನ ಫೇವರೆಟ್ ಎಂದಿದ್ದಾರೆ ಸೋನು ನಿಗಮ್. ಹೌದು ವೇದಿಕೆ ಮೇಲೆ ಕನ್ನಡಿಗರ ಬಗ್ಗೆ ಹೃದಯ ತುಂಬಿ ಮಾತನಾಡಿದ ಸೋನು ನಿಗಮ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಹೇಳಿದ್ದಾದರೂ ಏನು ಗೊತ್ತಾ..? ನಿಜಕ್ಕೂ ಈ ವಿಡಿಯೋ ನೋಡಿದರೆ ಕನ್ನಡಿಗರು ಹೆಮ್ಮೆ ಪಡುವಂತಿದೆ. ವಿಡಿಯೋ ನೋಡಿ, ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.ಹಾಗೆ ಸೋನು ನಿಗಮ್ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೂಡ ಕಾಮೆಂಟ್ ಸೆಕ್ಷನಲ್ಲಿ ಹಾಕಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit ; sgv kannada media )