ತನ್ನ ಮದುವೆ ಬಗ್ಗೆ ಮಾತನಾಡಿದ ಸೋನು ಗೌಡ ಹೇಳಿದ್ದೇನು ? ಯಾವಾಗ ಸೋನು ಮದುವೆಯಂತೆ ಗೊತ್ತೆ

By Infoflick Correspondent

Updated:Thursday, August 18, 2022, 20:10[IST]

ತನ್ನ ಮದುವೆ ಬಗ್ಗೆ  ಮಾತನಾಡಿದ ಸೋನು ಗೌಡ ಹೇಳಿದ್ದೇನು ? ಯಾವಾಗ ಸೋನು ಮದುವೆಯಂತೆ ಗೊತ್ತೆ

ಬಿಗ್​ಬಾಸ್ ಮನೆಯೊಳಗೆ ಲವ್​ಸ್ಟೋರಿಗಳು  ತುಂಬಾ ಕಾಮನ್. ಇದೀಗ ಕನ್ನಡ ಬಿಗ್​ಬಾಸ್ ಒಟಿಟಿ ಸಖತ್ ಇಂಟ್ರೆಸ್ಟಿಂಗ್ ವೇನಲ್ಲಿ ಸಾಗುತ್ತದೆ. ರಾಕೇಶ್ ಅಡಿಗ  ಅವರು ಮನೆಯೊಳಗೆ ಎಲ್ಲರೊಂದಿಗೆ ಫ್ಲರ್ಟ್​ ಮಾಡಿ ಸುದ್ದಿಯಾಗುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರೊಂದಿಗಂತೂ ಸ್ವಲ್ಪ ಹೆಚ್ಚೇ ಕ್ಲೋಸ್ ಆಗಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರನ್ನು ಸಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ
ಸೋನು ಗೌಡ ಬಿಗ್ ಬಾಸ್ ಮನೆಯಲ್ಲೂ ಸೋನು ವೈರಲ್ ಆಗುತ್ತಿರುತ್ತಾರೆ. ಸೋನು ಗೌಡ ಅವರಿಗೂ ಅಪಾರ ಅಭಿಮಾನಿಗಳಿದ್ದಾರೆ. ಎಷ್ಟೊ ಬಾರಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಸೋನು‌. ಈಗ ಸೋನು ಅವರು ಮದುವೆ ವಿಚಾರ ಮಾತನಾಡಿದ್ದಾರೆ.  


ಇದೀಗ ತಾನು 7 ವರ್ಷಗಳ ಕಾಲ ಮದುವೆಯಾಗಲ್ಲ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.. ಹೌದು, ರಾಕಿ ಮೇಲಿನ ಅವರ ಫೀಲಿಂಗ್ ಗಾಸಿಪ್ ಬೆನ್ನಲ್ಲೇ ರಾಕೇಶ್ ಮೇಲೆ ಪ್ರೀತಿ ಇದೆಯಾ ಎಂದು ಸ್ಫೂರ್ತಿ ನೇರವಾಗಿ ಸೋನುಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೋನು ನೇರವಾಗಿ ಉತ್ತರಿಸಿದ್ದು, ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್ ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ 7 ವರ್ಷ ಮದುವೆಯಾಗಲ್ಲ ನಾನು. ನಾನು ಸಿನಿಮಾರಂಗದಲ್ಲಿ ಬೆಳೆಯಬೇಕು ಎಂದು ಹೇಳಿಕೊಂಡಿದ್ದಾರೆ


ಸೋನುಗೆ ಹೀರೋಯಿನ್ ಆಗಬೇಕು ಎಂಬ ಕನಸಿದೆ. ಈ ಮೊದಲು ಶಾರ್ಟ್​ಮೂವಿಗಳಲ್ಲಿ ಅವರು ನಟಿಸಿದ್ದರು. ಬಿಗ್ ಬಾಸ್ ವೇದಿಕೆ ಏರಿದಾಗಲೂ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದರು. ಬಿಗ್ ಬಾಸ್​ನಿಂದ ಒಂದಷ್ಟು ಜನಪ್ರಿಯತೆ ಸಿಕ್ಕರೆ ಅದರಿಂದ ಒಂದಷ್ಟು ಆಫರ್​ಗಳು ಬರಬಹುದು ಎಂಬುದು ಅವರ ನಂಬಿಕೆ.