Sonu Srinivasa Gowda : ಸೋನು ಶ್ರೀನಿವಾಸ್ ಗೌಡ ಅವರ ಮನೆಯ ಬೆಲೆ ಎಷ್ಟು ಗೊತ್ತಾ..?

By Infoflick Correspondent

Updated:Tuesday, August 16, 2022, 17:05[IST]

Sonu Srinivasa Gowda :  ಸೋನು ಶ್ರೀನಿವಾಸ್ ಗೌಡ ಅವರ ಮನೆಯ ಬೆಲೆ ಎಷ್ಟು ಗೊತ್ತಾ..?

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಅಪ್ ಲೋಡ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಸದ್ಯ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಸೋನು ಗೌಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಚರ್ಚೆ ಆಗುತ್ತಿದ್ದು, ಬಿಗ್ ಬಾಸ್ ಮನೆಯಿಂದ ಹೊರಗೆ ಬರಲಿ ಎಂದೇ ಬಯಸುತ್ತಿದ್ದಾರೆ. ಈ ಹಿಂದೆ ಸೋನು ಗೌಡ ಅವರ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ಇದರಿಂದ ಸೋನು ಗೌಡ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. 

ಇದೀಗ ಸೋನು ಗೌಡ ಬಿಗ್ ಬಾಸ್ ಮನೆಗೆ ಬಂದ ಕಾರಣ ಈ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಬಿಗ್ ಬಾಸ್ ಮನೆಯಲ್ಲೂ ಇದೇ ವಿಚಾರ  ಮತ್ತೆ ಮತ್ತೆ ಚರ್ಚೆಗೆ ಗ್ರಾಸವಾಗುತ್ತಿದೆ. ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿ ನೀಡಿದ್ದ ಟಾಸ್ಕ್ ನಲ್ಲಿ ಸೋನು ಗೌಡ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡರು. ಅಲ್ಲದೇ, ಟ್ರೋಲಿಗರ ಬಗ್ಗೆಯೂ ಮಾತನಾಡಿದ ಸೋನು ಅವರು, ತಮ್ಮ ಬಗ್ಗೆ ಯಾರು ಏನೇ ಮಾತನಾಡಿದರೂ ಡೋಮಟ್ ಕೇರ್ ಎಂದರು. 

ಇನ್ನು ಸೋನು ಶ್ರೀನಿವಾಸ್ ಗೌಡ ತಮ್ಮ ವಿಚಿತ್ರವಾದ ಅವತಾರಗಳಿಂದಲೇ ಫೇಮಸ್ ಅಗಿದ್ದಾರೆ. ಚಿತ್ರ ವಿಚಿತ್ರವಾಗಿ ಬಟ್ಟೆ ಹಾಕುತ್ತಾ, ಡ್ಯಾನ್ಸ್ ಮಾಡುತ್ತಾ ಫೇಮಸ್ ಆಗಿದ್ದು, ಲಕ್ಷಾಂತರ ಜನ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೇ, ಫಾಲೋವರ್ಸ್ ಗಳ ಸಂಖ್ಯೆ ಏನು ಕಡಿಮೆ ಇಲ್ಲ. ಸೋನು ಗೌಡ ಅವರು ಈ ರೀಲ್ಸ್ ಗಳ ಮೂಲಕವೂ ಹಣ ಸಂಪಾದಿಸಿದ್ದಾರೆ. ಇನ್ನು ಇವರಿರುವ ಮನೆ ಕೂಡ ಒಂದು ಕೋಟಿಗೂ ಅಧಿಕ ಬೆಲೆ ಬಾಳುತ್ತದೆ.