Sonu Srinivasa Gowda : ಅಬ್ಬಾ ಸೋನು ಸಂಪಾದನೆ ತಿಂಗಳಿಗೆ ಇಷ್ಟೊಂದಾ..? ಕೇಳಿದರೆ ಶಾಕ್ ಆಗುತ್ತೀರಾ

By Infoflick Correspondent

Updated:Monday, September 19, 2022, 21:56[IST]

Sonu Srinivasa Gowda : ಅಬ್ಬಾ ಸೋನು ಸಂಪಾದನೆ ತಿಂಗಳಿಗೆ ಇಷ್ಟೊಂದಾ..?  ಕೇಳಿದರೆ ಶಾಕ್ ಆಗುತ್ತೀರಾ

ಸೋನು ಶ್ರೀನಿವಾಸ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ಇದೇ ಸೋನು ಕಳೆದ ಎರಡು ವರ್ಷಗಳಿಂದ ತುಂಬಾನೇ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಸೋನು ಅವರದ್ದೇ ಕಾರು ಬಾರು ಎಂಬಂತೆ ಕಳೆದ ಎರಡು ವರ್ಷಗಳಿಂದ ಕೆಲವೊಂದಿಷ್ಟು ವಿಚಾರಗಳಿಗಾಗಿ ಹಾಗೆ ಕನ್ನಡ ಭಾಷೆ ಮತ್ತು ಕೆಲವೊಂದಿಷ್ಟು ವಿಡಿಯೋಗಳ ಮೂಲಕ ಕೊಟ್ಟ ಸಂದರ್ಶನ  ಮೂಲಕ ಟ್ರೋಲಿಗೆ ಒಳಗಾದವರು. ಹಾಗೆ ಕೆಲವೊಂದಿಷ್ಟು ಖಾಸಗಿ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸೋನು ಅವರದ್ದು ಕಂಡುಬಂದವು. ಹೀಗೆ ಬೇರೆಯದೆ ರೀತಿಯಾಗಿ ಸೋನು ಕೆಟ್ಟದಾರಿ ಹಿಡಿದಿದ್ದಾರೆ ಯಾರಿಗೂ ಅಂಜದೆ ತಂದೆ ತಾಯಿ ಮಾನ ಮರ್ಯಾದೆ ನೋಡದೆ ಹೇಗೆ ಬೇಕೋ ಹಾಗೆ ನಡೆದುಕೊಂಡು ಜೀವನ ಮಾಡುತ್ತಿದ್ದಾರೆ ಎಂದು ಸಾಕಷ್ಟು ಜನರು ಇವರ ನಡೆಯನ್ನು ನೋಡಿ ಟೀಕೆ ಮಾಡಿದರು.

ಹೌದು ಆದರೆ ಇವರು ಅದ್ಯಾವುದಕ್ಕು ತಲೆಕೆಡಿಸಿಕೊಳ್ಳದೆ ಹೆಚ್ಚು ವಿಡಿಯೋಗಳಿಂದ ಮತ್ತು ಕನ್ನಡ ಸಿನಿಮಾಗಳ ಕೆಲವು ರೀಲ್ಸ್ ಗಳಿಂದ ತುಂಬಾನೇ ಸುದ್ದಿಯಲ್ಲಿ ಇದ್ದಾರೆ. ಹಾಗೆ ಟ್ರೋಲಿಗರು ಎಷ್ಟೇ ಕಾಟ ಕೊಟ್ಟರು ಅವರಿಗೆ ಹೆದರದೆನೆ ಅವರ ಟ್ರೋಲಿಗೆ ಭಯ ಬೀಳದೆನೆ ಹೆಚ್ಚು ಎದುರಿಗೆ ಬಂದು ಮಾತನಾಡುತ್ತಿದ್ದವರು ಸೋನು. ಇತ್ತೀಚೆಗೆ ಕನ್ನಡದ ಬಿಗ್ ಬಾಸ್ ಸೀಸನ್ ಓ ಟಿ ಟಿ ಒಂದಕ್ಕೆ ಆಯ್ಕೆಯಾದ ಸೋನು ವಿಚಾರವಾಗಿ ಆರಂಭದಲ್ಲಿ ಬಿಗ್ ಬಾಸ್ ಆಯೋಜಕರ ವಿರುದ್ಧವಾಗಿಯೂ ಕೂಡ ಹೆಚ್ಚು ವಿರೋಧ ಆಗಿತ್ತು, ಅದು ನಿಮಗೂ ಕೂಡ ಗೊತ್ತಿದೆ. ಹೌದು ಇದೀಗ ಬಿಗ್ ಬಾಸ್ ಕನ್ನಡದ ಓಟಿಟಿಯಲ್ಲಿ ನಾಲ್ಕು ಜನರು ಸೀದಾ ಬಿಗ್ ಬಾಸ್ ಸೀಸನ್ ೯ಕ್ಕೆ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಅತ್ತ ಸೋನು ಸೇರಿ ಮಿಕ್ಕವರು ಹೂರ ಬಂದಿದ್ದಾರೆ ಎನ್ನಬಹುದು. 

ಇತ್ತೀಚಿಗೆ ಒಂದು ಸಂದರ್ಶನ ನೀಡಿದ ಸೋನು ಗೌಡ, ಆ ಸಂದರ್ಶನದಲ್ಲಿ ತಿಂಗಳಿಗೆ ನೀವು ಎಷ್ಟು ದುಡಿಯುತ್ತಿದ್ದೀರಾ ಬಿಗ್ ಬಾಸ್ ಮನೆಯೊಳಗೆ ಹೋದ ಮೇಲೆ ನಿಮ್ಮ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ, ನೀವು ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತೀರಾ ಎಂದಾಗ ಸೋನು ಶ್ರೀನಿವಾಸಗೌಡ ಮೂರು ಲಕ್ಷ ಎಂದು ಹೇಳುತ್ತಾರೆ..ಹಾಗೆ ಬಿಗ್ ಬಾಸ್ ವಿಚಾರವಾಗಿ ಪ್ರಶ್ನೆ ಮಾಡಿದ್ದು ಬಿಗ್ಬಾಸ್ ಗೆ ನೀವು ಹೋಗಲು ಏನಾದರೂ ಇಂತಿಷ್ಟು ದುಡ್ಡು ಕೊಟ್ಟಿದ್ದೀರಾ ಅಥವಾ ಕಮಿಟ್ಮೆಂಟ್ ಏನಾದರೂ ಇತ್ತ ಎಂದು ಪ್ರಶ್ನೆ ಮಾಡಿದರೆ ಈ ಸೋನು ಶ್ರೀನಿವಾಸ ಗೌಡ, ತೆರೆ ಮೇಲೆ ಕೆಲವೊಂದು ವಿಚಾರಗಳನ್ನು ಹೇಳಲು ಆಗುವುದಿಲ್ಲ ಸ್ವಾರಿ ಎಂದಿದ್ದಾರೆ. ಹಾಗಾದರೆ ಬಿಗ್ ಬಾಸ್ ಮನೆಗೆ ಹೋಗಬೇಕು ಎಂದರೆ ದುಡ್ಡು ಕೊಟ್ಟು ಹೋಗಬೇಕಾ ಎಂದು ಸೋನು ಕೊಟ್ಟ ಈ ಹೇಳಿಕೆ ಕೇಳಿ ಬಳಿಕ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...