ಕೇವಲ ರೀಲ್ಸ್ ಗಳಿಂದಲೇ ಸೋನು ಶ್ರೀನಿವಾಸ ಗೌಡ ತಿಂಗಳಿಗೆ ಗಳಿಸುವ ಆದಾಯವೆಷ್ಟು ಗೊತ್ತಾ..?

By Infoflick Correspondent

Updated:Wednesday, June 22, 2022, 12:22[IST]

ಕೇವಲ ರೀಲ್ಸ್ ಗಳಿಂದಲೇ ಸೋನು ಶ್ರೀನಿವಾಸ ಗೌಡ ತಿಂಗಳಿಗೆ ಗಳಿಸುವ ಆದಾಯವೆಷ್ಟು ಗೊತ್ತಾ..?

ಈಗಂತು ಇನ್ ಸ್ಟಾ, ರೀಲ್ಸ್ ಅಂತಾನೇ ಯುವ ಜನತೆ ಕಳೆದು ಹೋಗಿ ಬಿಡುತ್ತಾರೆ. ಸದಾ ಮೊಬೈಲ್ ಅನ್ನು ಕೈಯಲ್ಲಿಡಿದು, ಏನೇನೋ ನೋಡುತ್ತಿರುತ್ತಾರೆ. ಯಾವಾಗಲೂ ಮೊಬೈಲ್ ನಲ್ಲೇ ಮುಳುಗಿರುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಹಾಡುಗಳಿಗೆ, ಡೈಲಾಗ್ಸ್ ಗಳಿಗೆ ರೀಲ್ಸ್ ಮಾಡಿಕೊಂಡು ದಿನ ದೂಡುತ್ತಾರೆ. ಈ ಎರಡು ವರ್ಷದಲ್ಲಿ ಟಿಕ್ ಟಾಕ್, ರೀಲ್ಸ್ ಗಳಿಂದಲೇ ಗೊತ್ತಿರುವವರು ಗೊತ್ತಿಲ್ಲದವರು ಎಲ್ಲರೂ ಫೇಮಸ್ ಆಗಿ ಬಿಟ್ಟರು. ಇನ್ನೂ ಕೆಲವರು ಸಿನಿಮಾ, ಧಾರಾವಾಹಿಗಳಲ್ಲಿ ಚಾನ್ಸ್ ಅನ್ನು ಕೂಡ ಗಿಟ್ಟಿಸಿಕೊಂಡರು. 

ಇನ್ನು 15 ಸೆಕೆಂಡ್ಗಳ ಟಿಕ್ಟಾಕ್ ವಿಡಿಯೋ ಮಾಡಿ ಅಪ್ ಲೋಡ್ ಮಾಡುವ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿ ಸೆಲೆಬ್ರಿಟಿ ಎನಿಸಿಕೊಂಡವರು ಹಲವರಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ಪಡೆದು ನಟ-ನಟಿಯರೂ ಆಗಿದ್ದಾರೆ. ಸದ್ಯ ಅಂಥವರಲ್ಲಿ ಒಬ್ಬರು, ಸೋನು ಶ್ರೀನಿವಾಸ್ ಗೌಡ. ಟಿಕ್ ಟಾಕ್ ಮಾಡುವ ಮೂಲಕ ಗಮನಸೆಳೆದ ಸೋನು ಅವರಿಗೆ ಸಿನಿಮಾ ಅವಕಾಶಗಳು ಸಿಕ್ಕಿದವು. ಕ್ಯಾಡ್ಬರೀಸ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲದೇ ಕೆಲ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.  

ಇನ್ನು ವೆಬ್ ಸಿರೀಸ್ ನಲ್ಲೂ ಚಾನ್ಸ್ ಗಿಟ್ಟಿಸಿಕೊಂಡಿರುವ ಸೋನು ಶ್ರೀನಿವಾಸ್ ಗೌಡ, (Sonu Srinivasa Gowda )ಲಕ್ಕಿ ಎಂದರೆ ತಪ್ಪಾಗೊಲ್ಲ. ಇನ್ನು ಹೀಗೆ ರೀಲ್ಸ್ ಮಾಡುತ್ತಾ ವೀಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಲೇ ಸೋನು ಅವರು ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ. ಸೋನು ಅವರು ವೀಡಿಯೋಗಳನ್ನು ಹಲವರು ನೋಡುತ್ತಿರುತ್ತಾರೆ. ಇವರಿಗೆ ಲಕ್ಷಗಟ್ಟಲೇ ಫಾಲೋವರ್ಸ್ ಗಳಿದ್ದಾರೆ. ತಿಂಗಳಿಗೆ ಕಡಿಮೆ ಎಂದರೂ ಸೋನು ಶ್ರೀನಿವಾಸ್ ಗೌಡ ಅವರು ಬರೋಬ್ಬರಿ 2-3 ಲಕ್ಷ ರೂಪಾಯಿ ಹಣವನ್ನು ಸಂಪಾದಿಸುತ್ತಿದ್ದಾರೆ.ಅವರ ಒಂದು ವಿಡಿಯೋ ಝಲಕ್ ಇಲ್ಲಿದೆ ನೋಡಿ