ಸೋನು ಸಿಗರೇಟ್ ಸೇದಿದ್ದಕ್ಕೆ ಬಿಗ್ ಬಾಸ್ ಎಂತಹ ಶಿಕ್ಷೆ ಕೊಟ್ಟಿದೆ ನೋಡಿ :ಹೊಗೆ ಬಿಟ್ಟಿದ್ದೆ ತಪ್ಪಾ?

By Infoflick Correspondent

Updated:Thursday, August 25, 2022, 09:01[IST]

ಸೋನು ಸಿಗರೇಟ್ ಸೇದಿದ್ದಕ್ಕೆ ಬಿಗ್ ಬಾಸ್ ಎಂತಹ ಶಿಕ್ಷೆ ಕೊಟ್ಟಿದೆ ನೋಡಿ :ಹೊಗೆ ಬಿಟ್ಟಿದ್ದೆ ತಪ್ಪಾ?

ಟಿಕ್​ ಟಾಕ್​ ಸ್ಟಾರ್ ಎಂದು ಹೆಸರು ಪಡೆದಿರುವ ಸೋನು ಶ್ರೀನಿವಾಸ್​ ಗೌಡ ಎರಡನೇ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದಾರೆ.  ಮನೆಯವರೊಡನೇ ನೇರ ಮಾತು ಕಿರಿಕ್ ಮಾಡುತ್ತಾ ಅಟವನ್ನೂ ಆಡುತ್ತಾ ಹೆಸರು ಗಳಿಸುತ್ತಿದ್ದಾರೆ. ಆದರೆ ಇದೀಗ ಸೋನು ಮಾಡಿದ ಕೆಲಸದಿಂದ ಮನೆಯವರಿಗೆಲ್ಲ ಶಿಕ್ಷೆ ಸಿಕ್ಕಿದೆ ! ಸೋನು ಮಾಡಿದ ಕೆಲಸ ಏನು ಗೊತ್ತೆ ಸೋನು ನಾನು ಸ್ಮೋಕ್ , ಡ್ರಿಂಕ್ಸ್​ ಮಾಡ್ತೀನಿ ಅದರಲ್ಲಿ ತಪ್ಪೇನಿದೆ ಎಂದು ಬೋಲ್ಡ್ ಆಗಿ ಮಾತನಾಡಿದ್ದರು. ಇದೀಗ ಸೋನು ಸಿಗರೇಟ್ ಸೇದಿದ್ದರಿಂದ ಮನೆಜನರೆಲ್ಲ ಶಿಕ್ಷೆ ಪಡೆದಿದ್ದಾರೆ! ಅದು ಹೇಗೆ ಗೊತ್ತೆ. ಸೋನು ಸಿಗರೇಟ್ ಸೇದಿದ್ದು ತಪ್ಪಲ್ಲ! ಆದರೆ ನಿಯಮ ಮೀರಿ ಸಿಗರೇಟ್ ಸೇದಿದ್ದು ಎಲ್ಲರಿಗೂ ಶಿಕ್ಷೆಯ ಘಾಟು ನೀಡಿದ್ದಾರೆ.    

ಬಿಗ್ ಬಾಸ್ ಮನೆಯಲ್ಲಿ ಇದೀಗ ಯಾವ ಸ್ಪರ್ಧಿಯೂ ಯಾವ ಜಾಗಕ್ಕೆ ಹೋಗುವುದಾದರೂ ಮತ್ತೊಬ್ಬರು ಚಕ್ರ ತಿರುಗಿಸುತ್ತಿರಬೇಕು ಎಂಬ ನಿಯಮವಿತ್ತು. ಜಾಗದ ಹೆಸರು ಹಾಕಿ ಚಕ್ರ ತಿರುಗಿಸುವಾಗ ಒಂದು ಜಾಗದಲ್ಲಿ4 ಜನ ಮಾತ್ರ ಏಕಕಾಲಕ್ಕೆ ಹೋಗಬಹುದು ಎಂದಾಗಿತ್ತು.

ಆದರೆ ಸೋನು ಹಾಗು ರಾಕೇಶ್ ನಿಯಮ ಮೀರಿ ಸ್ಮೋಕಿಂಗ್ ರೂಂ ಗೆ ಹೋಗಿ ಸ್ಮೋಕಿಂಗ್ ಮಾಡಿದ್ದಾರೆ . ಹಾಗಾಗಿ ಬಿಗ್ ಬಾಸ್ ಏಕಕಾಲದಲ್ಲಿ 4 ಜನ ನಿಯಮವನ್ನು ಕಠಿಣಗೊಳಿಸಿ 2 ಜನ ಎಂದು ಮಾಡಿದ್ದಾರೆ. ಮತ್ತು ಮುಂದಿನ ಆದೇಶದ ವರೆಗೆ ಯಾರೂ ಸ್ಮೊಂಕಿಗ್ ರೂಂ ಬಳಸುವಂತಿಲ್ಲ ಸ್ಮೋಕಿಂಗ್ ಮಾಡುವಂತಿಲ್ಲ ಎಂದಿದ್ದಾರೆ. 

ಈ ಕಠಿಣ ನಿಯಮದಿಂದ ಸೋನು ಹಾಗು ರಾಕೇಶ್ ಮಾಡಿದ ಎಡವಟ್ಟಿನಿಂದ ಸ್ಪರ್ಧಿಗಳು ಸಿಟ್ಟಾಗಿದ್ದಾರೆ. ರಾಕೇಶ್ ಕ್ಷಮೆ ಕೇಳಿದರೆ , ಸೋನು ಎಲ್ಲರೂ ತಪ್ಪು ಮಾಡುತ್ತಾರೆ ಅದು ಸಹಜ ಎಂದು ಹೇಳಿದ್ದಕ್ಕೆ ಸ್ಪರ್ಧಿಗಳು ನಿನ್ನ ಒಂದು ಸ್ಮೊಕಿಂಗ್ ಗೆ 4 ಜನ ಹೋಗುವ ಜಾಗದಲ್ಲಿ 2 ಜನ ಮಾಡಿದೆ. ಸ್ಮೊಕಿಂಗ್ ಬಂದ್ ಮಾಡಿಸಿದೆ  ಹೇಳಿದ ಮಾತು ಕೇಳಲಿಲ್ಲ. ನಿಮ್ಮಿಬ್ಬರ ತಪ್ಪಿಗೆ ಮನೆಮಂದಿಗೆ ಶಿಕ್ಷೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.