Sonu Srinivasa Gowda : ಬಿಗ್ ಬಾಸ್ ನಲ್ಲಿ ಸೋನು ಶ್ರೀನಿವಾಸ್ ಗೌಡ ಪಡೆಯುವ ಸಂಭಾವನೆ ಎಷ್ಟು ? ಅಬ್ಬಾ ಇಷ್ಟು ಹಣವೇ !

By Infoflick Correspondent

Updated:Wednesday, August 10, 2022, 21:34[IST]

Sonu Srinivasa  Gowda : ಬಿಗ್ ಬಾಸ್ ನಲ್ಲಿ  ಸೋನು ಶ್ರೀನಿವಾಸ್ ಗೌಡ ಪಡೆಯುವ ಸಂಭಾವನೆ ಎಷ್ಟು ? ಅಬ್ಬಾ ಇಷ್ಟು ಹಣವೇ !

ಓಟಿಟಿಯಲ್ಲಿ ಶುರುವಾಗಿರುವ ಬಿಗ್ ಬಾಸ್ ನಲ್ಲಿನ ಸ್ಪರ್ಧಿಗಳಿಗೂ ಸಹ ಕಿರುತೆರೆಯ ಬಿಗ್ ಬಾಸ್ ನ ಸ್ಪರ್ಧಿಗಳಂತೆಯೇ ವಾರದ ಸಂಭಾವನೆಯನ್ನು ನಿಗಧಿ ಮಾಡಲಾಗಿದೆ.‌ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಮನೆಯನ್ನ ಪ್ರವೇಶ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅನೇಕ ಸುದ್ದಿಗಳು ಹಬ್ಬುತ್ತಿದ್ದು ಜನರು ಪರ ವಿರೋಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಹಿಂಬಾಲಕರನ್ನ ಹೊಂದಿದ್ದು ಅವರು ಈ ಬಿಗ್ ಬಾಸ್ ಬಹಳ ಬಲಿಷ್ಠವಾದ ಸ್ಪರ್ಧಿಯಾಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸೋನು ಗೌಡಗೆ ಒಂದು ವಾರಕ್ಕೆ ದುಬಾರಿ ಸಂಭಾವನೆಯನ್ನೇ ನೀಡಲಾಗುತ್ತಿದೆ. ಸೋನು ಗೌಡ ಎಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವರೋ ಅಷ್ಟು ವಾರಗಳ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತಿದ್ದು ಅದೇ ಪ್ರಕಾರ ಒಂದು ವಾರಕ್ಕೆ ಸೋನು ಗೌಡರಿಗೆ ವಾರಕ್ಕೆ ಬರೋಬ್ಬರಿ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ನಿಗದಿ ಮಾಡಲಾಗಿದೆ.   

ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಟಿ ಸೋನು ಶ್ರೀನಿವಾಸ್ ಗೌಡ ಅವರಿಗೆ ವಾರಕ್ಕೆ 20 ರಿಂದ 25 ಸಾವಿರ ರೂಪಾಯಿ ಸಂಭಾವನೆಯನ್ನ ಕೊಡಲಾಗುತ್ತಿದೆಯಂತೆ. ಹೌದು ಯಾವ ನಟಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ನಟಿ ಸೋನು ಶ್ರೀನಿವಾಸ್ ಗೌಡ ಅವರಿಗೆ ವಾರಕ್ಕೆ 20 ರಿಂದ 25 ಸಾವಿರ ರೂಪಾಯಿ ಸಂಭಾವನೆಯನ್ನ ಕೊಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದ್ದು ಇದರ ಕುರಿತು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.