Sonu Srinivasa Gowda : ಬಿಗ್ ಬಾಸ್ ಮನೆಯಲ್ಲಿ ತನ್ನ ಪೋನ್ ನಂಬರ್ ಬಹಿರಂಗವಾಗಿ ಹೇಳಿದ ಸೋನು ಗೌಡ ! ಇಲ್ಲಿದೆ ತಗೊಳಿ ನಂಬರ್

By Infoflick Correspondent

Updated:Thursday, August 11, 2022, 12:30[IST]

Sonu Srinivasa Gowda : ಬಿಗ್ ಬಾಸ್ ಮನೆಯಲ್ಲಿ ತನ್ನ ಪೋನ್ ನಂಬರ್ ಬಹಿರಂಗವಾಗಿ ಹೇಳಿದ ಸೋನು ಗೌಡ ! ಇಲ್ಲಿದೆ ತಗೊಳಿ ನಂಬರ್

ಟಿಕ್​ಟಾಕ್​ ಮತ್ತು ರೀಲ್ಸ್​ ಮೂಲಕ ಫೇಮಸ್​ ಆದ ಸೋನು ಶ್ರೀನಿವಾಸ್​ ಗೌಡ ಬಿಗ್​ ಬಾಸ್ ಕನ್ನಡ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಖಾಸಗಿ ವಿಡಿಯೋ ಲೀಕ್‌ ಆಗಿದ್ದರ ಬಗ್ಗೆ ಇತ್ತೀಚೆಗೆ ಬಿಗ್​ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡ ಮಾತನಾಡಿದ್ದರು. ಇದೀಗ ಸೋನು ಗೌಡ ತಮ್ಮ ಫೋನ್​ ನಂಬರ್ ಕೂಡ ಬಯಲು ಮಾಡಿದ್ದಾರೆ.ಸೋನು ಶ್ರೀನಿವಾಸ್ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್‌ ಇದ್ದಾರೆ. ಸುಮಾರು 8 ಲಕ್ಷ ಫಾಲೋವರ್ಸ್‌ಗಳನ್ನು ಸೋನು ಗೌಡ ಹೊಂದಿದ್ದಾರೆ. ಅವರ ಫೋನ್ ನಂಬರ್​ ತಿಳಿದುಕೊಳ್ಳಬೇಕು ಎಂಬ ಕುತೂಹಲ ಅನೇಕರಿಗೆ ಇದ್ದೇ ಇರುತ್ತದೆ. ಅಂತವರಿಗೆ ಈಗ ಖುಷಿ ಸುದ್ದಿ. 

ಇದೀಗ ಬಿಗ್​ ಬಾಸ್​ ಮನೆಯಲ್ಲಿ ಸೋನು ತಮ್ಮ ಫೋನ್​ ನಂಬರ್​ ಶೇರ್​ ಮಾಡಿಕೊಂಡಿದ್ದಾರೆ. ಆದರೆ ಅಲ್ಲಿಯೂ ಸಖತ್‌ ಚಾಲಾಕಿತನ ತೋರಿಸಿದ್ದಾರೆ. ಮನೆಯಲ್ಲಿ "ಬೇಗ ಫೋನ್​ ನಂಬರ್​ ಹೇಳಮ್ಮ ಡಯಲ್​ ಮಾಡುತ್ತೇನೆ" ಎಂದು ಹಾಸ್ಯ ನಟ ಲೋಕೇಶ್​ ಹೇಳಿದಾಗ, ಸೋನು ಗೌಡ 9987654321 ಎಂದಿದ್ದಾರೆ.

ಆದರೆ ಇದು ಸುಳ್ಳು ನಂಬರ್​ ಎಂದು ಸ್ಫೂರ್ತಿ ಗೌಡ ಹೇಳಿದರು. ಅದಕ್ಕೆ ಸೋನು ಗೌಡ "ನಾನು ನನ್ನ ನಂಬರ್‌ ಅನ್ನು ಉಲ್ಪಾ ಪಲ್ಟಾ ಹೇಳಿದ್ದೀನಿ. ಈ ನಂಬರ್​ ಯಾವುದೇ ಕಾರಣಕ್ಕೂ ಇರಲ್ಲ. ನಿಮ್ಮಂಥ ಜಾಣರು ಇರ್ತೀರಿ ಅಂತ ಗೊತ್ತು" ಎಂದು ಸೋನು ಗೌಡ ಹೇಳಿದ್ದಾರೆ.