Sonu Srinivasa gowda : ಸೋನು ಪ್ರಕಾರ ಹುಡುಗಿಯರು ಸ್ಮೋಕಿಂಗ್ ಮಾಡೋದ್ರಲ್ಲಿ ತಪ್ಪಿಲ್ವಂತೆ..! ನೀವ್ ಎನ್ ಹೇಳ್ತೀರಾ

By Infoflick Correspondent

Updated:Tuesday, September 20, 2022, 11:16[IST]

Sonu Srinivasa gowda : ಸೋನು ಪ್ರಕಾರ ಹುಡುಗಿಯರು ಸ್ಮೋಕಿಂಗ್ ಮಾಡೋದ್ರಲ್ಲಿ ತಪ್ಪಿಲ್ವಂತೆ..! ನೀವ್ ಎನ್ ಹೇಳ್ತೀರಾ

ಸೋನು ಶ್ರೀನಿವಾಸ ಗೌಡ ಹೆಸರು ಇದೀಗ ಯಥೇಚ್ಛವಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗೆ ಆರಂಭಗೊಂಡ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮುಂದಿನ ಭಾಗವಾಗಿ ಕಿರುತೆರೆಯಲ್ಲಿ ಪ್ರಸಾರವಾದ ಷೋ. ಹೌದು ಇದು ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರ ಆಗಿತ್ತು. ಓಟಿಟೀ ಸೀಸನ್ 1 ರ ಸ್ಪರ್ಧಿಯಾಗಿ ಒಳ ಹೋಗಿದ್ದಕ್ಕೆ ಎಂದು ಹೇಳಬಹುದು. ಹೌದು ಆರಂಭದಲ್ಲಿ ಸೋನು ಶ್ರೀನಿವಾಸ ಗೌಡ ಅವರನ್ನು ಯಾಕೆ ಆಯ್ಕೆ ಮಾಡಿದ್ದೀರಿ, ಬಿಗ್ ಬಾಸ್ ನಂತಹ ಪ್ರತಿಷ್ಠಿತ ಬಿಗ್ ಮನೆಗೆ ಕಳಂಕ ಯಾಕೆ ತರುತ್ತಿದ್ದೀರಿ,  ವೀಕ್ಷಕರು ಏನು ಬೇಕಾದರೂ ನೋಡುತ್ತಾರೆ ಬಿಡಿ ಎಂದು ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ, ಈ ಬಾರಿ ಬಿಗ್ ಬಾಸ್ ವಿಕ್ಷಕರು ಅರ್ಧದಷ್ಟು ಕಡಿಮೆಯಾಗುವುದರಲ್ಲಿ ಅನುಮಾನ ಇಲ್ಲ ಎಂದು ಕೆಲವರ ಬಿಗ್ ಬಾಸ್ ಮನೆಯ ಒಳಗಿನ ಆಯ್ಕೆ ವಿಚಾರಕ್ಕಾಗಿ ವಿರೋಧ ವ್ಯಕ್ತವಾಗಿತ್ತು.

ಹೌದು ಇದೆ ಬಿಗ್ ಬಾಸ್ ಮನೆಗೂ ಹೋಗುವ ಮುನ್ನ ಸೋನು ಅವರು ತುಂಬಾನೇ ಟ್ರೋಲ್ಗೆ ಒಳಗಾದ ಹುಡುಗಿ, ಟ್ರೋಲಿಗರಿಗೆ ಹೆಚ್ಚು ಬಾರಿ ಒಳ್ಳೆಯ ಆಹಾರ ಆದವರು ಎಂದು ಹೇಳಿದರೆ ತಪ್ಪಾಗಲಾರದು. ಹಾಗೆ ಕೆಲ ಖಾಸಗಿ ವಿಡಿಯೋಗಳು ಸಹ ಲೀಕ್ ಮಾಡಿಕೊಂಡ ಈ ಸೋನು ಶ್ರೀನಿವಾಸ ಗೌಡ ಅವರು ಹೆಚ್ಚು ಬಾರಿ ಟ್ರೋಲ್ ಆದವರು. ಈಗಲೂ ಸಹ ಕೆಲವರು ಈಕೆ ಬಗ್ಗೆ ತುಂಬಾನೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ. ಈ ಎಲ್ಲ ಟೀಕೆಗಳ ನಡುವೆ ಇತ್ತೀಚಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸೋನು ಗೌಡ ಸಂದರ್ಶನದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಆಗಿದೆ. ಹೌದು ಸಂದರ್ಶನದಲ್ಲಿ ಬಿಗ್ಬಾಸ್ ಮನೆಯೊಳಗಿನ ಚಿತ್ರಣ ಬಿಚ್ಚಿಟ್ಟಿದ್ದು ರಾಕಿ ಮತ್ತು ಅವರ ಒಡನಾಟ ಹೇಗಿತ್ತು ಎಂಬುದಾಗಿ ಹೇಳಿಕೊಂಡಿದ್ದಾಳೆ.   

ಹೌದು ಸೋನು ಶ್ರೀನಿವಾಸ ಗೌಡ ಅವರಿಗೆ ನೀವು ಯಾರ ಜೊತೆ ಹೆಚ್ಚು ಗಲಾಟೆ ಮಾಡಿಕೊಂಡಿದ್ದೀರಿ ಬಿಗ್ ಬಾಸ್ ಮನೆಯಲ್ಲಿ ಎಂದಾಗ, ಹೆಚ್ಚು ಪ್ರೀತಿ ಮಾಡಿದ್ದು ರಾಕಿಯನ್ನೇ ಹಾಗೆ ಹೆಚ್ಚು ಗಲಾಟೆ ಮಾಡಿದ್ದು ಕೂಡ ಅವನ ಜೊತೆಗೆ ಎಂದರು. ನಂತರದಲ್ಲಿ ನಿಮ್ಮ ಮತ್ತು ರಾಕಿ ಅವರ ಒಡನಾಟ ಹೆಚ್ಚು ಸ್ಮೋಕಿಂಗ್ ರೂಮಿನಲ್ಲಿಯೇ ಆರಂಭವಾಯಿತು ಎಂದು ಹೊರಗಡೆ ಟಾಕ್ ಇತ್ತು, ಈ ಬಗ್ಗೆ ಹೇಳುವುದಾದರೆ ಎಂದು ಪ್ರಶ್ನೆ ಮಾಡಿದರೆ, ಸೋನು ಶ್ರೀನಿವಾಸ ಅವರು ಹೌದು ನಾನು ಬಿಗ್ಬಾಸ್ ಮನೆಯೊಳಗೆ ಹೋಗುವ ಮುನ್ನ ಫೈಲ್ ನಲ್ಲಿ ತುಂಬಿದ ಹಾಗೆ ನನ್ನ ಫೇವರೆಟ್ ಸಿಗರೇಟ್ ಐಸ್ ಬಸ್ಟ್ ಎಂದು ಬರೆದಿದ್ದೆ, ಅವರು ಕೂಡ ಬಿಗ್ ಬಾಸ್ ಮನೆಯೊಳಗೆ ಅದನ್ನೆ ಕಳುಹಿಸಿ ಕೊಟ್ಟಿದ್ದರು. ಸ್ಮೋಕಿಂಗ್ ರೂಮಿನಲ್ಲಿ ನಾನು ರಾಕಿ ಸಿಗರೇಟ್ ಎಳೆಯುತ್ತಿದ್ದೆವು, ನನ್ನ ಪ್ರಕಾರ ನಾವು ಸ್ಮೋಕಿಂಗ್ ಮಾಡುವುದು ತಪ್ಪೇನು ಅಲ್ಲ.