ಆ ಬೆತ್ತಲೆ ವಿಡಿಯೋ ಲೀಕ್ ಆಗಿದ್ದು ಹೇಗೆ ? ಬಿಗ್ ಬಾಸ್ ಮನೆಯಲ್ಲಿ ಸತ್ಯಸಂಗತಿ ಬಿಚ್ಚಿಟ್ಟ ಸೋನು ಗೌಡ

By Infoflick Correspondent

Updated:Monday, August 8, 2022, 08:31[IST]

ಆ ಬೆತ್ತಲೆ ವಿಡಿಯೋ ಲೀಕ್ ಆಗಿದ್ದು ಹೇಗೆ ? ಬಿಗ್ ಬಾಸ್ ಮನೆಯಲ್ಲಿ ಸತ್ಯಸಂಗತಿ ಬಿಚ್ಚಿಟ್ಟ ಸೋನು ಗೌಡ

ಸೋನು ಗೌಡ ಅವರು, ತನ್ನ ಜೀವನದಲ್ಲಿ ಎದುರಾದ ನಂಬಿಕೆ ದ್ರೋಹ, ಅವಮಾನಗಳನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಕೆಲ ತಿಂಗಳ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಬಿಗ್‌ಬಾಸ್‌ ಮನೆಯಲ್ಲಿರುವ ಸೋನು ಗೌಡ ಆ ವಿಡಿಯೋ ತಮ್ಮದೇ ಎಂದು ಹೇಳಿರುವುದು ಮಾತ್ರವಲ್ಲದೆ ಆ ವಿಡಿಯೋ ವೈರಲ್ ಆಗಿದ್ದರ ಹಿಂದಿನ ಕಾರಣವನ್ನೂ ತಿಳಿಸಿದ್ದಾರೆ.

ನಮ್ಮ ಮನೆಯಲ್ಲಿ ನೀನು ಯಾರನ್ನಾದರೂ ಲವ್ ಮಾಡು ಎಂದು ಸ್ವಾತಂತ್ರ್ಯ ಕೊಟ್ಟಿದ್ರು. ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಒಮ್ಮೆ ಆತ ನನ್ನ ವಿಡಿಯೋ ಕಳಿಸಲು ಹೇಳಿದ. ನಾನೂ ಸಹ ನನ್ನ ಬೆತ್ತಲೆ ವಿಡಿಯೋ ಕಳಿಸಿಬಿಟ್ಟೆ. ಆದರೆ ಅದನ್ನು ಅವನು ವೈರಲ್ ಮಾಡಿಬಿಟ್ಟ ಎಂದು ಹೇಳುತ್ತಾ ಸೋನು ಗೌಡ ಕಣ್ಣೀರು ಹಾಕಿದ್ದಾರೆ.

ಅಮೇಲೆ ನನ್ನ ಹತ್ರ ವಿಡಿಯೋ ಇದೇ, ನೀನು ಯಾರನ್ನ ಮದ್ವೆ ಆಗ್ತೀಯಾ ನೋಡ್ತೀನಿ ಎಂದು ಆ ವಿಡಿಯೋ ಇಟ್ಟುಕೊಂಡು ಆತ ನನ್ನನ್ನು ಬ್ಲಾಕ್‌ಮೇಲ್ ಸಹ ಮಾಡಿದ.  ಬೆದರಿಕೆ ಹಾಕಿದ್ದ ಅಂತ ಕಣ್ಣೀರಿಟ್ಟಿದ್ದಾರೆ. ಸಹಸ್ಪರ್ಧಿಗಳು ನೊಂದ ಸೋನು ಗೌಡಾಗೆ ಸಮಾಧಾನ ಮಾಡಿದರು.

ಇಷ್ಟು ದಿನ ಚೈಲ್ಡ್ ಗಳ ಥರ ಆಡಿದ್ದು ಸಾಕು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಒಳ್ಳೆಯ ಗುರುತು ಪಡೆಯಬೇಕು ಅನ್ನೋದು ನನ್ನ ಉದ್ದೇಶ ಎಂದು ಸೋನು ಹೇಳಿದರು.