sonu Srinivasa Gowda : ನನ್ನಮ್ಮ ನನ್ನನ್ನು ಚಪ್ಪಲಿಯಲ್ಲಿ ಹೊಡೀತಾರೆ ಎಂದ ಸೋನು ; ಯಾವ ಕಾರಣಕ್ಕೆ ನೋಡಿ ?

By Infoflick Correspondent

Updated:Wednesday, August 17, 2022, 21:42[IST]

sonu Srinivasa Gowda : ನನ್ನಮ್ಮ ನನ್ನನ್ನು ಚಪ್ಪಲಿಯಲ್ಲಿ ಹೊಡೀತಾರೆ ಎಂದ ಸೋನು ; ಯಾವ ಕಾರಣಕ್ಕೆ ನೋಡಿ ?

ಸೋನು ಶ್ರೀನಿವಾಸ ಗೌಡ ಹೌದು ಬಿಗ್ ಬಾಸ್ ಕನ್ನಡದ ಓಟಿಟಿ ಸಿಜನ್ ಒಂದರಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಪರ್ಧಿ ಎನ್ನಬಹುದು. ಇವರು ಟಿಕ್ ಟಾಕ್ ಮೂಲಕ ಜನರಿಗೆ ಚಿರಪರಿಚಿತ ಆಗಿ ನಂತರದಲ್ಲಿ ಕೆಲವು ಖಾಸಗಿ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಚರ್ಚೆಗೆ ಒಳಗಾದ ಕಲಾವಿದೆ..ಇದೀಗ ಇವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದೆ..ಇವರ ಆಯ್ಕೆಗೆ ಕೆಲವರು ಬಿಗ್ಬಾಸ್ ಆಯೋಜಿಕರನ್ನು ವಿರೋಧ ಮಾಡಿದ್ದು ಉಂಟು. ಬಿಗ್ಬಾಸ್ ಮನೆಯಲ್ಲಿ ತುಂಬಾ ಚಾಣಾಕ್ಷತನದಿಂದ ಆಟವಾಡುತ್ತಿದ್ದಾರೆ ಸೋನು. ಒಂದು ಬಾರ ಮುಕ್ತಾಯ ಆಗಿರುವ ಬಿಗ್ ಬಾಸ್ ಮನೆ ಇದೀಗ ಒಂದು ಹಂತಕ್ಕೆ ಹಿಡಿತದಲ್ಲಿ ಬಂದಿದೆ ಎಂದು ಹೇಳಬಹುದು. ಹೌದು ಇದರ ನಡುವೆ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ.

ಮೊದಲ ವಾರ ಸೋನು ಶ್ರೀನಿವಾಸ ಗೌಡ ನಾಮಿನೇಟ್ ಆಗಿದ್ದರು. ಹಾಗೆ ಮೊದಲ ವಾರದಲ್ಲಿಯೇ ವೋಟ್ ಗಳ ಮೂಲಕ ಸೇಫ್ ಆದರು. ಇದೀಗ ಎರಡನೇ ವಾರ ಕೂಡ ನಾಮಿನೇಟ್ ಆಗಿದ್ದಾರೆ. ಇದರ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಪ್ರಸ್ತಾಪ ಮಾಡಿದ್ದು, ಒಂದು ವೇಳೆ ನಾನು ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋದರೆ, ನನ್ನ ತಾಯಿ ನನ್ನನ್ನು ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹೌದು ಬಿಗ್ ಬಾಸ್ ಮನೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆದ  ಸ್ಪರ್ಧಿ ಸದಸ್ಯರ ಮನೆಯವರು ಕೂಡ ಕಿಚ್ಚನ ವಾರಂತ್ಯದ ಶೋಗೆ ಬಂದಿರುತ್ತಾರೆ. ಅದನ್ನು ಉದ್ದೇಶಸಿ ಸೋನು ಶ್ರೀನಿವಾಸ ಗೌಡ ಈ ರೀತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಹೌದು ಸೋನು ಶ್ರೀನಿವಾಸ ಗೌಡ ಅವ್ರು ನಂದಿನಿ ಅವರನ್ನು ನಾಮಿನೇಟ್ ಮಾಡುವ ಮೂಲಕ ಇವರು ನನಗೆ ದೊಡ್ಡ ಟಫ್ ಕಾಂಪಿಟೇಟರ್ ಎಂದು ಕಾರಣ ನೀಡಿದರು. ಹಾಗೆ ಬಳಿಕ ಜಶ್ವಂತ್ ಸಹ ಟಾಸ್ಕ್ ಗೆದ್ದ ಬಳಿಕ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿದ್ದೆ ತಡ ಸೋನು ಅವರ ಹೆಸರನ್ನು ತೆಗೆದುಕೊಂಡರು. ಮನೆಯಲ್ಲಿ ಯಾರ ಜೊತೆ ಹೆಚ್ಚು ಈಕೆ ಬೆರೆಯುವುದಿಲ್ಲ, ಹಾಗೆ ನನ್ನ ಗರ್ಲ್ ಫ್ರೆಂಡ್ ಅನ್ನು ಏನೋ ಒಂದು ತಪ್ಪು ತಿಳುವಳಿಕೆ ಕಾರಣ ಹೇಳಿ ನಾಮಿನೇಟ್ ಮಾಡಿದ ಕಾರಣಕ್ಕಾಗಿಯೇ ನಾನು ಇವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಜಸ್ವಂತ್ ಹೇಳಿಕೆ ನೀಡಿದ್ರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಈ ವಾರವೇ ಬಿಗ್ ಬಾಸ್ ಮನೆಯಿಂದ ಸೋನು ಶ್ರೀನಿವಾಸ ಗೌಡ ಹೊರ ಬರಬೇಕಾ ಅಥವಾ ಬೇಡವ ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...