Sreeleela : ಸಂಭಾವನೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ: ಒಂದು ಸಿನಿಮಾಗೆ ಎಷ್ಟು ಪಡೆಯುತ್ತಾರೆ ಗೊತ್ತಾ..?

By Infoflick Correspondent

Updated:Friday, June 10, 2022, 09:56[IST]

Sreeleela :  ಸಂಭಾವನೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ: ಒಂದು ಸಿನಿಮಾಗೆ ಎಷ್ಟು ಪಡೆಯುತ್ತಾರೆ ಗೊತ್ತಾ..?

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ಕಿಸ್ ಚಿತ್ರದ ಮೂಲಕ ಶ್ರೀಲೀಲಾ ಅವರು ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಚಿತ್ರರಂಗದಲ್ಲೇ ಬ್ಯುಸಿಯಾಗಿರುವಾಗಲೇ ತೆಲುಗಿನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದರು. ಪೆಳ್ಳಿ ಸಂದ D ಎಂಬ ಸಿನಿಮಾ ಶ್ರೀಲೀಲಾ ಅವರ ಮೊದಲ ತೆಲುಗು ಚಿತ್ರ. ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈಗ ಶ್ರೀಲೀಲಾ ಅವರಿಗೆ ಸ್ಯಾಂಡಲ್ ವುಡ್ ಜೊತೆಗೆ ಟಾಲಿವುಡ್ ನಲ್ಲೂ ಅಭಿಮಾನಿಗಳಿದ್ದಾರೆ. 

ಪೆಳ್ಳಿ ಸಂದ D ಚಿತ್ರದ ಬಳಿಕ ಶ್ರೀಲೀಲಾ ಅವರಿಗೂ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಇನ್ನು ತೆಲುಗು ನಟ ನಿತಿನ್ ಜೊತೆಗೆ ಶ್ರೀಲೀಲಾ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ನಟ ರವಿತೇಜ ಜೊತೆಗೆ ಧಮಾಕ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಲ್ಲದೇ, ಅನಗನಗ ಒಕ ರಾಜ ಸೇರಿದಂತೆ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಇನ್ನು ಕನ್ನಡದಲ್ಲಿ ಕಿಸ್, ಭರಾಟೆ ಮತ್ತು ಬೈ ಟು ಲವ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.    

ಇನ್ನು ಶ್ರೀಲೀಲಾ ಅವರು ಮಹೇಶ್ ಬಾಬು ಮತ್ತು ಪ್ರಭಾಸ್ ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಅವರ ಲಕ್ ಡಬಲ್ ಆಗಿದ್ದು, ಈಗ ಅವರ ಸಂಭಾವನೆಯೂ ಹೆಚ್ಚಾಗಿದೆ. ಇಷ್ಟು ದಿನ ಶ್ರೀಲೀಲಾ ಅವರು ಒಂದು ಸಿನಿಮಾಗೆ 75 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರು. ಆದರೆ ಈಗ ಅವರ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬರೋಬ್ಬರಿ ಒಂದು ಕೋಟಿ ಸಂಭಾವನೆಯನ್ನು ಒಂದು ಸಿನಿಮಾಗೆ ಪಡೆಯುತ್ತಿದ್ದಾರೆ.