ಪುನೀತ್ ಬಗ್ಗೆ ಶ್ರೀ ಮುರುಳಿಯ ಭಾವುಕ ಮಾತು ಇಲ್ಲಿದೆ

By Shivaraj

Updated:Tuesday, March 15, 2022, 09:13[IST]

ಪುನೀತ್ ಬಗ್ಗೆ ಶ್ರೀ ಮುರುಳಿಯ ಭಾವುಕ ಮಾತು ಇಲ್ಲಿದೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಜೇಮ್ಸ್' ಪ್ರಿ-ರಿಲೀಸ್ ಈವೆಂಟ್ ನಲ್ಲಿ ಪುನೀತ್ ರ ಅಭಿಮಾನಿ ಅನುಶ್ರೀ ಭಾರವಾದ ಎದೆಯಿಂದ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.‌ಜನತೆಗೆ ಒಂದೆಡೆ ಅಪ್ಪು ಸಿನಿಮಾ ತೆರೆಕಾಣುವ ಸಂತಸವಾದರೆ ಇನ್ನೊಂದೆಡೆ ಅಪ್ಪು ಇಲ್ಲ ಎಂಬ ಆಗಾಧ ಬೇಸರ ಆವರಿಸಿದೆ. 

ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮುರುಳಿ ಭಾವುಕರಾಗಿ ಅಪ್ಪು ಬಗ್ಗೆ ಮಾತನಾಡಿದ್ದಾರೆ. ಪ್ರತಿಸಾರಿ ಅಪ್ಪುಮಾಮಾ ಎಂದು ಪುನೀತ್ ಬಳಿ ನಾನು ಹೋಗುತ್ತಿದ್ದೆ. ಅವರಿಲ್ಲ ಎನ್ನುವುದನ್ನು ಅರಗಿಸಿಕ್ಕೊಳ್ಳಲಾಗುತ್ತಿಲ್ಲ. ಅವರನ್ನು ಮರೆಯುವುದು ಅಸಾಧ್ಯ. ಅವರಿಲ್ಲವಾದ ನಂತರ ಅವರು ಮಾಡಿದ ಅಪಾರ ಕಾರ್ಯ ಗೊತ್ತಾಗಿದ್ದು, ಅಷ್ಟು ಒಳ್ಳೆ ಕೆಲಸ ಮಾಡಿದ ದೇವರು ಅವರು. ದೇವರು ದೇವರನ್ನೇ ಕರೆದುಕೊಂಡ.‌ದೇವರು ಪಕ್ಕ ಇದ್ದಾಗ ನಮಗೆ ಆ ಮಹತ್ವ ತಿಳಲಿಲ್ಲವೇನೊ ಎಂದು ಬೇಸರದಿಂದ ನುಡಿದರು.   

 ನಿನ್ನೆ ಯಾರೋ‌ ಅವರ ಸಿನಿಮಾಗಳನ್ನು ನೋಡಿ ನೀವು ಹೇಗೆ ಪ್ರೇರಿತ ಆಗುತ್ತೀರಿ ಎಂದು ಪ್ರಶ್ನೆ ಕೇಳಿದ್ದರು. ಏನೇ ಇನ್ಸ್ಪೈರ್ ಆದರೂ ಅವರ ತರ ಎರಡು ಸ್ಟೆಪ್ ಹಾಕೋಕೆ ಆಗಲ್ಲ, ಎರಡು ಫೈಟ್ ಮಾಡೋಕೆ ಆಗಲ್ಲ. ಇರೋದು ಒಬ್ರೇ ಪವರ್ ಸ್ಟಾರ್. ಅವರು ಪುನೀತ್ ರಾಜ್ ಕುಮಾರ್ ಮಾತ್ರ. ಎಂದು ಶ್ರೀ ಮುರುಳಿ ಅಪ್ಪು ಬಗ್ಗೆ ಹೆಮ್ಮೆಯಿಂದ ಹೇಳಿದರು.‌ ಮಾರ್ಚ್ 17ರಂದು ಪುನೀತ್ ದೇವರ ದರ್ಶನ ವಿಶ್ವದೆಲ್ಲೆಡೆ ಸಿಗಲಿದೆ. ಅಪ್ಪುಮಾಮಾ ಎಂದಿಗೂ ಅಮರ ಎಂದು ಭಾವುಕ ನುಡಿನಮನ ಸಲ್ಲಿಸಿದರು.