Sri Murali : ಶೃತಿ ಅವರ ತಾಯಂದಿರಿಗೆ ಡ್ಯಾನ್ಸ್ ಸ್ಟೆಪ್ಸ್ ಹೇಳಿ ಕೊಟ್ಟ ಶ್ರೀ ಮುರಳಿ

By Infoflick Correspondent

Updated:Monday, May 9, 2022, 19:11[IST]

Sri Murali :   ಶೃತಿ ಅವರ ತಾಯಂದಿರಿಗೆ ಡ್ಯಾನ್ಸ್ ಸ್ಟೆಪ್ಸ್ ಹೇಳಿ  ಕೊಟ್ಟ ಶ್ರೀ ಮುರಳಿ

ಕನ್ನಡದ ಜನಪ್ರಿಯ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಬಿಡುವಿನ ಸಮಯದಲ್ಲೂ ಕುಟುಂಬಕ್ಕೆ ಕೊಂಚ ಬಿಡುವು ಮಾಡಿಕೊಳ್ಳುತ್ತಿರುತ್ತಾರೆ. ಹೆಂಡತಿ ಮಕ್ಕಳಿಗಷ್ಟೇ ಅಲ್ಲದೇ, ಇತರರಿಗೂ ಸಮಯ ನೀಡುತ್ತಾರೆ. ಆಗಾಗ ಸ್ಯಾಂಡಲ್ ವುಡ್ ಸ್ನೇಹಿತರನ್ನು ಭೇಟಿಯಾಗುವ ಮುರಳಿ ಅವರು ಎಂಜಾಯ್ ಮಾಡುತ್ತಾರೆ. ಅಣ್ಣ ವಿಜಯ್ ರಾಘವೇಂದ್ರ, ರಾಜ್ ಕುಮಾರ್ ಕುಟುಂಬದವರೊಂದಿಗೆ ಸಮಯ ಕಳೆಯುತ್ತಾರೆ. ಇದೀಗ ಶ್ರೀಮುರಳಿ ಅವರು ಏನು ಮಾಡಿದ್ದಾರೆ ಗೊತ್ತಾ. ? 

ನಟಿ ಶೃತಿ ಅವರ ತಾಯಂದಿರ ಜೊತೆ ಸಮಯ ಕಳೆದಿರುವ ಶ್ರೀಮುರಳಿ ಅವರು, ಡ್ಯಾನ್ಸ್ ಕೂಡ ಮಾಡಿದ್ದಾರೆ. ಶೃತಿ ಅವರ ತಾಯಂದಿರಿಗೆ ಡ್ಯಾನ್ಸ್ ಸ್ಟೆಪ್ಸ್ ಹೇಳಿಕೊಟ್ಟಿದ್ದು, ತಾವೂ ಅವರ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋವನ್ನು ನಟಿ ಶೃತಿ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಮಾಡಿದ ನಂತರ ಶ್ರೀ ಮುರಳಿ ಅವರು ಶೃತಿ ತಾಯಂದಿರನ್ನು ತಬ್ಬಿಕೊಂಡು ಮುತ್ತು ನೀಡಿ ಖುಷಿ ಪಟ್ಟಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. 

ಇನ್ನು ಇತ್ತೀಚೆಗಷ್ಟೆ ನಟಿ ಶೃತಿ ಅವರು ಕೂಡ, ತಮ್ಮ ತಾಯಂದಿರ ಜೊತೆಗೆ ಡ್ಯಾನ್ಸ್ ಮಾಡಿದ್ದರು. ಈ ವೀಡಿಯೋವನ್ನೂ ಸಹ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು.  

ಇನ್ನು ಸದ್ಯ ನಟಿ ಶೃತಿ ಅವರು ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮದಗಜ ಚಿತ್ರ ರಿಲೀಸ್ ಆದ ಮೇಲೆ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಶ್ರೀಮುರಳಿ ಅವರ ಕೈಯಲ್ಲಿ ಅದಾಗಲೇ ಎರಡು ಮೂರು ಚಿತ್ರಗಳಿವೆ. ಆದರೆ ಈ ಚಿತ್ರಗಳ ಶೂಟಿಂಗ್ ಬಗ್ಗೆ ಆಗಲಿ, ಅಥವಾ ಇತರೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಮುಂದಿನ ವರ್ಷ ಒಂದು ಚಿತ್ರದ ಶೂಟಿಂಗ್ ನಡಯಲಿದೆ ಎಂಬುದು ತಿಳಿದು ಬಂದಿದೆ. (video credit : masth karnataka )